LIC representatives protest demanding welfare fund, Rs 25 lakh group insurance

ಗಂಗಾವತಿ: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳಾಗಿ ಕಾಉðನಿರ್ವಹಿಸುವ ಪ್ರತಿನಿಧಿಗಳಿಗೆ ಕಲ್ಯಾಣ ನಿಧಿ ಸ್ಥಾಪನೆ, ೨೫ ಲಕ್ಷ ರೂ.ಗುಂಪು ವಿಮೆ, ಪಿಂಚಣಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಎಲ್‌ಐಸಿ ಎಓಈ ಸಂಘಟನೆಯ ಕರೆ ಮೇರೆಗೆ ಸ್ಥಳೀಯ ಎಲ್‌ಐಸಿ ಕಚೇರಿ ಎದುರು ಪ್ರತಿನಿಧಿಗಳು ಲಿಖೈ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಎಲ್ಲಾ ಪ್ರತಿನಿಧಿಗಳಿಗೆ ಗುಂಪು ವಿಮೆ ೨೫ ಲಕ್ಷ ರೂ.ಹೆಚ್ಚಿಸಬೇಕು. ಪ್ರತಿನಿಧಿಗೆ ಕಲ್ಯಾಣ ನಿಧಿ ಮತ್ತು ಖಾತ್ರಿಯಾದ ಪಿಂಚಣಿ ಜಾರಿಯಾಗಬೇಕು. ಪ್ರತಿನಿಧಿಗಳಿಗೆ ಮೆಡಿಕ್ಲೇಮ್ ಅನ್ವಯ ಸೇರಿ ವಿವಿಧ ಕಾರಣಕ್ಕಾಗಿ ಅಮಾನತುಗೊಂಡಿರುವ ಪ್ರತಿನಿಧಿಗಳ ತನಿಖೆ ಪೂರ್ಣಗೊಳಿಸಿ ಆಡಳಿತ ಮಂಡಳಿ ಶೀಘ್ರ ನಿರ್ಣಯ ಪ್ರಕಟಿಸಿ ಅವರ ಕಮೀಷನ್ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಲಿಖೈ ಸಂಘಟನೆಯ ಅಧ್ಯಕ್ಷ ಕೆ.ಎಂ.ಮAಜುನಾಥ, ಎಂ.ನಿರುಪಾದಿ ಬೆಣಕಲ್, ಹುಸನಬಾಷಾ, ರಾಘವೇಂದ್ರ, ಎಚ್.ಈಶ್ವರ, ಪಂಪಾಪತಿ ಪಟ್ಟಣಶೆಟ್ಟಿ, ವಲಿಮೋಹಿಯುದ್ದೀನ್,ರಾಘವೇಂದ್ರ, ಭಾರತಿ ಆಗಲೂರು, ರಾಮಾಂಜಿನೇಯ, ಪದ್ಮನಾಭ, ವಿಜಯ್, ಶರಣಪ್ಪ, ಹೊಳಿಯಪ್ಪ, ಹುಸೇನ್, ಶರಣೇಗೌಡ, ವೀರನಗೌಡ, ಬಸವರಾಜ, ವಿರೇಶ ಕಂಬ್ಳಿ, ನಿಜಲಿಂಗಪ್ಪ, ವಿರೂಪಾಕ್ಷಗೌಡ, ವೆಂಕಟೇಶ ವಿಮಾ ನೌಕರರ ಸಂಘದ ನರೇಶ, ಹನುಮಂತ, ರಾಮಣ್ಣ ಕುರಿ, ತಬರೀಶ, ಅಭಿವೃದ್ಧಿ ಅಧಿಕಾರಿಗಳಾದ ಕೆ.ಫಣಿರಾಜ್, ಗುರುಪ್ರಸಾದ ಸೇರಿ ಅನೇಕರಿದ್ದರು.