Central government decides to cancel 17 crore BPL cards! Check your ration card in this list

ಬಹು ಉಪಯೋಗಿ ಪಡಿತರ ಚೀಟಿ ಅರ್ಥಾತ್ BPL ಕಾರ್ಡ್ವೊಂದಿರುವ ಬಡವರಿಗೆ ಸರ್ಕಾರದಿಂದ ಶಾಕ್ ಎದುರಾಗಿದೆ. ಹೌದು, ಸರ್ಕಾರ ಒಟ್ಟು 1.17 ಕೋಟಿ ಜನರ ಕಾರ್ಡ್ ರದ್ದು ಮಾಡಲು ಮುಂದಾಗಿದೆ.
ನವದೆಹಲಿ: ಅದೆಷ್ಟೋ ಬಡ ಕುಟುಂಬಗಳಿಗೆ ಪಡಿತರ ಚೀಟಿ (Ration card) ಅರ್ಥಾತ್ BPL ಕಾರ್ಡ್ ನಂಬಿ ಬದುಕುತ್ತಿದ್ದಾರೆ. ಯಾಕಂದ್ರೆ ಈ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಅಕ್ಕಿ, ರಾಗಿ ಸೇರಿದಂತೆ ಹಲವಾರು ಪಡಿತರ ಸಿಗುತ್ತಿದ್ದರೆ. ಜೊತೆಗೆ ಆರೋಗ್ಯ ಸೇವೆಗಳು, ಆರ್ಥಿಕ ನೆರವು, ಗ್ರಾಮೀಣಾಭಿವೃದ್ಧಿ ಯೋಜನೆ ಸೇರಿದಂತೆ ಹಲವಾರು ಉಪಯೋಗಗಳಿವೆ. ಆದ್ರೆ ಇಂತಹ ಬಹು ಉಪಯೋಗಿ ಕಾರ್ಡ್ವೊಂದಿರುವ ಬಡವರಿಗೆ ಸರ್ಕಾರದಿಂದ ಶಾಕ್ ಎದುರಾಗಿದೆ. ಹೌದು, ಸರ್ಕಾರ ಒಟ್ಟು 1.17 ಕೋಟಿ ಜನರ BPL ಕಾರ್ಡ್ ರದ್ದು (Cancellation of BPL card) ಮಾಡಲು ಮುಂದಾಗಿದೆ. ಹಾಗಾದ್ರೆ ಈ 1.17 ಕೋಟಿ BPL ಕಾರ್ಡ್ ಯಾರದ್ದು? ಅವರ ಕಾರ್ಡ್ ರದ್ದತಿಗೆ ಕಾರಣವೇನು ಗೊತ್ತಾ..? ನಿಮ್ಮ ಕಾರ್ಡ್ ರದ್ದಾಗುತ್ತಾ ಎಂದು ಒಮ್ಮೆ ನೋಡಿ:
ಭಾರತದಲ್ಲಿ ಒಟ್ಟು 76.10 ಕೋಟಿ ಜನರು ಪಡಿತರ ಚೀಟಿ ಅರ್ಥಾತ್ BPL ಕಾರ್ಡ್ ಪಡಿದ್ದಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಎನ್ನಬಹುದು. ಹಾಗಾಗಿ, 1.17 ಕೋಟಿ ಜನರ BPL ಕಾರ್ಡ್ ರದ್ದಾದರೆ ಹೇಗೆ ಹೇಳಿ. ಆದ್ರೆ ಈ ಕಾರ್ಡ್ ರದ್ದು ಮಾಡಲಾಗುತ್ತಿರುವುದು ಸಾಮನ್ಯ ನಾಗರೀಕನದಲ್ಲ; ಬದಲಾಗಿ ಅಕ್ರಮವಾಗಿ ಈ ಕಾರ್ಡ್ ಪಡೆದಿರುವಂತಹವರದ್ದು; ಹಾಗಾಗಿ, ಯಾರು ಆ ಜನರು? ರದ್ದು ಮಾಡಲು ಮುಂದಾಗಿರುವದರ ಹಿಂದಿನ ಕಾರಣವೇನು ಗೊತ್ತಾ..?
ಯಾರನ್ನ ಈ ಪಟ್ಟಿಯಿಂದ ಹೊರಗಿಡಲಾಗುತ್ತಿದೆ…?
ಕೇಂದ್ರ ಸರ್ಕಾರವು ಪಡಿತರ ಚೀಟಿ ಹೊಂದಿರುವವರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ವಿಂಗಡಣೆಯನ್ನು ಪ್ರಾರಂಭಿಸಿದ್ದು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಉಚಿತ ಧಾನ್ಯಗಳಂತಹ ಪ್ರಯೋಜನಗಳಿಗೆ ಅರ್ಹರಲ್ಲದ ಪಡಿತರ ಚೀಟಿ ಹೊಂದಿರುವವರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ, ಈ ಪಟ್ಟಿಯಲ್ಲಿ ಸುಮಾರು 1.17 ಕೋಟಿ ಜನರು ಸೇರಿದ್ದಾರೆ.