Are the Public Works Department officials sleeping? Pay some attention in front of the government school.
ತುರುವೇಕೆರೆ, ತಾಲ್ಲೂಕಿನ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಬರುವ ಟಿ ಬಿ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗೆ ಹೊಂದಿಕೊಂಡಂತೆ ಒಂದರಿಂದ ಐದನೇ ತರಗತಿ ವರೆಗೂ ಇರುವ ಸರ್ಕಾರಿ ಶಾಲೆ ಇದೆ, ಶಾಲೆಗೆ ಹೊಂದಿಕೊಂಡಂತೆ ಪಕ್ಕದಲ್ಲಿ ಕಸದ ರಾಶಿ, ಹುಳ ತುಂಬಿದ ಕೊಳಚೆ ನೀರು, ಯಾವುದೇ ಚರಂಡಿ ವ್ಯವಸ್ಥೆ ಇಲ್ಲದೆ ಹರಿಯದೆ ನಿಂತಲ್ಲಿಯೇ ನಿಂತು ಶಾಲೆಯ ಮಕ್ಕಳಿಗೆ ಮತ್ತು ಪಕ್ಕದಲ್ಲಿಯೇ ವಾಸವಿರುವ ಗ್ರಾಮಸ್ಥರುಗಳ ಆರೋಗ್ಯಕ್ಕೆ ಕುತ್ತು ತರಲು ಜೊತೆಗೆ ಈಗಾಗಲೇ ಹಲವು ಮನೆಗಳ ನೀರಿನ ಟ್ಯಾಂಕ್ಗಳಿಗೆ ಕೊಳಚೆ ನೀರು ಸಹ ನುಗ್ಗಿದ್ದು ಇದರಿಂದಾಗಿ ಪರಿತಪಿಸುವಂತಾಗಿದೆ, ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ತುರುವೇಕೆರೆ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದು ತಿಂಗಳ ಹಿಂದೆ ಅಷ್ಟೇ ಚರಂಡಿ ನಿರ್ಮಿಸಲು ಸ್ಥಳ ಪರಿಶೀಲನೆ ಮಾಡಿದ್ದು ಬಹುಶಹ ಇದು ಸಾರ್ವಜನಿಕರಿಗೆ ಕಣ್ಣೊರೆಸುವ ಸ್ಥಳ ಪರಿಶೀಲನೆ ಎಂದರು ತಪ್ಪಿಲ್ಲ, ಇದರ ಜೊತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾದರೂ ವಾರಕ್ಕೊಮ್ಮೆ ತಾಲೂಕಿನಾದ್ಯಂತ ಸಂಚರಿಸಿ ಶಾಲೆಗಳ ವಾಸ್ತವ ಸ್ಥಿತಿಯನ್ನು, ಮೂಲಭೂತ ಸೌಕರ್ಯಗಳ ಸ್ಥಿತಿಯನ್ನು ಗಮನಿಸದೇ ಇರುವುದೇ ಮೇಲ್ನೋಟಕ್ಕೆ ಮುಖ್ಯ ಕಾರಣವಾಗಿರಬಹುದು ಅನ್ನಿಸುತ್ತೆ, ಇನ್ನು ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿ ಕೂಡ ಆಗಿದ್ದು ಮೂಲಭೂತ ಸೌಕರ್ಯದ ಬಗ್ಗೆ ಗಮನಹರಿಸುತ್ತಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ, ಹಾಗಾದರೆ ಶಾಲೆಯ ಮಕ್ಕಳಿಗೆ ಮತ್ತು ಪಕ್ಕದಲ್ಲಿ ವಾಸವಿರುವ ನಾಗರಿಕ ಬಂಧುಗಳಿಗೆ ಆರೋಗ್ಯದಲ್ಲಿ ಏರುಪೇರಾಗಿ ಜೀವಕ್ಕೆ ಕುತ್ತು ಬಂದರೆ ಚರಂಡಿ ವ್ಯವಸ್ಥೆ ಕಲ್ಪಿಸದೇ ಇರುವ ಲೋಕೋಪಯೋಗಿ ಇಲಾಖೆ ಇದರ ಹೊಣೆ ಹೊರುತ್ತದೆಯೇ? ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಮೂಲಭೂತ ಸೌಕರ್ಯದ ಕಡೆ ಗಮನ ಹರಿಸದೆ ಇರುವುದೇ ಮುಖ್ಯ ಕಾರಣವ ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ ಇವರುಗಳು ಸಹ ಇದರ ಹೊಣೆ ಹೊರುತ್ತರಾ?ಒಟ್ಟಾರೆ ಸಾರ್ವಜನಿಕ ವಲಯದಲ್ಲಿ ಒಂದು ಪ್ರಶ್ನೆಯಂತೂ ಕಾಡುತ್ತಿರುವುದು ಸತ್ಯ ಚರಂಡಿ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಕಾಣದ ಕೈಗಳು ಒತ್ತಡ ಹೇರಿ ಕೊಳಚೆ ನೀರಿನಿಂದ ಗ್ರಾಮಸ್ಥರು ಮತ್ತು ಶಾಲೆ ಮಕ್ಕಳು ಅನಾರೋಗ್ಯದಿಂದ ಬಳಲಲಿ ಎಂದು ಸೂಚನೆ ಏನಾದರೂ ನೀಡಿದ್ದಾರಾ? ಇದಲ್ಲದೆ ಈ ರಸ್ತೆ ಕೃಷಿ ವಿಶ್ವವಿದ್ಯಾಲಯಕ್ಕೆ ತೆರಳುವ ರಸ್ತೆಯಾಗಿದ್ದು ಜೊತೆಗೆ ಕೆನರಾ ಬ್ಯಾಂಕ್,ಉತ್ತಮ ಗುಣಮಟ್ಟದ ಮೂಲ ಸೌಕರ್ಯಗಳೊಂದಿಗೆ ರಾರಾಜಿಸುತ್ತಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದ ಎದುರೇ ಈ ರೀತಿ ಕೊಳಚೆ ನೀರು, ಕಸದ ರಾಶಿ, ತುಂಬಿರುವುದು ಕಂಡರೆ ಅಧಿಕಾರಿಗಳ ಕಾರ್ಯವೈಕರಿ ಹೇಗೆ ಎಂಬುದು ಎದ್ದು ಕಾಣುತ್ತಿದೆ.
ವರದಿ ಮಂಜು ಗುರುಗದಹಳ್ಳಿ