Chain flowing program at Sri Etum Koti Mallaiah Temple

ಯಲಬುರ್ಗಾ: ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತರವಾಗಿ ಜು.೨೫ ರಿಂದ ನಿರಂತರವಾಗಿ ಬೆಳಗಿನ ಸಮಯದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಸಾಗಿ ಬಂದಿರುತ್ತದೆ ಇದರ ಪ್ರಯುಕ್ತವಾಗಿ ಅ.೨೫ ರಂದು ರವಿವಾರ ಬೆಳಗ್ಗೆ ೧೧ ಗಂಟೆಗೆ ಗೋಗಯ್ಯನವರಿಂದ ಮಲ್ಲಯ್ಯನ ಸರಪಳಿ ಹರಿಯುವ ಕಾರ್ಯಕ್ರಮ ಜರುಗುವುದು. ಜೂ.೬. ೧೯೮೦ ರಂದು ದಿ.ಕರಬಸಪ್ಪ ಭೂತೆ ಇವರಿಂದ ನವಿಕರಣಗೊಂಡು ೪೫ ವರ್ಷವಾಗಿದೆ ಈಗ ಸರ್ವ ಭಕ್ತರ ಸಹಕಾರದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸುಮಂಗಲಿಯರ, ಕುಂಭ- ಕಳಸದೊಂದಿಗೆ, ಡೊಳ್ಳು, ಕರಡಿಮಜಲು ಭಜನೆ ಸಕಲ ವಾದ್ಯಗಳೊಂದಿಗೆ ನಗರದ ಪ್ರಮುಖ ರಾಜಬೀದಿಯಲ್ಲಿ ಮೆರವಣಿಗೆ ಸಾಗಿ ಬಂದು, ಸಂಜೆ ದೇವಸ್ಥಾನದಲ್ಲಿ ಮಹಾಪ್ರಸಾದ ಜರುಗುವುದು, ಬಳಿಕ ಉಡಿತುಂಬುವ ಕಾರ್ಯಕ್ರಮ ಜರುಗುವದು ಕೊಪ್ಪಳ ಜಿಲ್ಲೆಯ ಸುತ್ತಮುತ್ತಲಿನ ಸರ್ವ ಧರ್ಮದ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನ ಸಮಿತಿಯ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ ಅವರು ಯಶಸ್ವಿಗೊಳಿಸಲು ತಿಳಿಸಿದ್ದಾರೆ.