Magalamani urges MLAs to start a market.

ಗಂಗಾವತಿ ,15:-ನಗರದ ತಾಲೂಕ ಕ್ರಿಡಾoಗಣದಲ್ಲಿ ಸರ್ವಾ O ಗೀ ಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಗಂಗಾವತಿ ಶಾಸಕರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ ತಾವುಗಳು ನೂತನ ಶಾಸಕರಾಗಿ ಆಯ್ಕೆಯಾದ ನಂತರ ಆಗಸ್ಟ್ 15 2023 ರಂದು ವಿವಿಧ ಬೇಡಿಕೆಗಳನ್ನು ಸಲ್ಲಿಸಿ ಎರಡು ವರ್ಷಗಳು ಕಳೆದರೂ ಇದುವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಲು ತಮ್ಮಿಂದ ಸಾಧ್ಯವಾಗಿರುವುದಿಲ್ಲ.ಈಡೇರಿಸಲು ಸಾಧ್ಯವಗದಿದ್ದರೂ ಯಾಕೆ ಆಗಿಲ್ಲ?ಎಂಬುವದರ ಬಗ್ಗೆ ಉತ್ತರ ಅಥವಾ ಹಿಂಬರಹ ಕೂಡ ನೀಡಿರುವದಿಲ್ಲ. ಇದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು .ನಗರದ ಗುಂಡಮ್ಮ ಕ್ಯಾಂಪಿನಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಮಾರ್ಕೆಟ್ ನಿರ್ಮಿಸಿ ಸುಮಾರು ಇಪ್ಪತ್ತು ವರ್ಷಗಳಾದರೂ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದೇ ಇರುವದು ಒಂದು ಕಡೆಯಾದರೆ ನಗರ ಸಭೆಗೆ ಬರುವ ಆದಾಯವೂ ಇಲ್ಲದೇ ಸರಕಾರದ ಬೊಕ್ಕಸಕ್ಕೂ ಕೂಡ ನಷ್ಟ ಉಂಟಾಗಿದೆ. ಮಾರ್ಕೆಟ್ ಪ್ರಾರಂಭ ಮಾಡುವದಾಗಿ ಕುಂಟು ನೆಪ ಹೇಳುತ್ತಾ ಹೇಳುತ್ತಾ ಮುಂದುಡುತ್ತಿರುವದು ಸರಿಯಲ್ಲ.ಕೂಡಲೇ ವಿದ್ಯುತ್, ಕುಡಿಯುವ ನೀರು, ರಸ್ತೆ, ಮತ್ತಿತರ ಮೂಲ ಸೌಕರ್ಯ ಕಲ್ಪಿಸಿ ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡಿ ಬಡ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಪ್ರಾರಂಬಿಸಬೇಕು.ಗಂಗಾವತಿ ನಗರದಲ್ಲಿ ಸುಮಾರು 11 ಸರ್ಕಾರಿ ಇಲಾಖೆಯ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ.ಆದ್ದರಿಂದ ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೆ ಸ್ಥಳಾ oತರಿಸಬೇಕು ಅಥವಾ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಸರಕಾರಕ್ಕೆ ಆಗುವ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು.ಗಂಗಾವತಿ ನಗರದ 27 ನೇ ವಾರ್ಡಿನಲ್ಲಿ ಸುಮಾರು ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ ಜನಾಂಗವು ಚಿಕ್ಕ ಚಿಕ್ಕ ಟೆಂಟ್ ಗಳಲ್ಲಿ ವೃದ್ದ ಮತ್ತು ಚಿಕ್ಕ ಮಕ್ಕಳೊಂದಿಗೆ ಕಷ್ಟದ ಜೀವನವನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಮನೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡಬೇಕು.ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು. ಹಾಗೂ ಈಡೇರಿಸಿದ ಬಗ್ಗೆ ಅಥವಾ ಕೈಗೊಂಡ ಕ್ರಮದ ಬಗ್ಗೆ ನಮಗೆ ಹಿಂಬರಹ ನೀಡಬೇಕು. ಇಲ್ಲದಿದ್ದರೆ ಸೆಪ್ಟೆಂಬರ್ 17 ರಂದು ಆಚರಿಸುವ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ದಿನದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಾಗುವದು. ಇದಕ್ಕೆ ಅವಕಾಶ ಮಾಡಿಕೊಡದೆ ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಸುರೇಶ ತೋಟದ್, ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಬಸವರಾಜ್ ನಾಯಕ, ಮಂಜುನಾಥ ಚನ್ನಾದಾಸರ, ರಮೇಶ್ ಚಿಕ್ಕ ಜಂತಗಲ್, ಹನುಮಂತಪ್ಪ,ಮತ್ತಿತರರು ಇದ್ದರು.