Independence Day Celebration by Taluk Administration.

ತಿಪಟೂರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಲ್ಪತರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಎಲ್ಲಿ ನೋಡಿದರೂ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳು ಮುಗಿಲೆತ್ತರಕ್ಕೆ ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಶಾಲಾ ಮಕ್ಕಳು ಸಾಲುಸಾಲಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈಕಾರ ಹಾಕಿ ಸಾಗಿದರು..
ಉಪವಿಬಾಧಿಕಾರಿಗಳಾದ ಸಪ್ತಶ್ರೀ ಅವರು ಧ್ವಜಾರೋಹಣ ನೆರವೇರಿಸಿ ಸ್ವತಂತ್ರ ದಿನಾಚರಣೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಶಾಲಾ-ಕಾಲೇಜುಗಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ನಂತರ ದೇಶಭಕ್ತಿ ಗೀತೆಗಳು ಹಾಗೂ ರಾಷ್ಟ್ರಗೀತೆಯನ್ನು ಹಾಡಿ ಸಿಹಿ ಹಂಚಿ ಸಂಭ್ರಮಿಸಿದರು
ದೇಶದ ಗಡಿ ಕಾಯುವ ಸೈನಿಕರು, ದೇಶಕ್ಕೆ ಅನ್ನ ನೀಡುವ ರೈತರು, ನಮಗಾಗಿ ದುಡಿಯುತ್ತಿರುವ ಕಾರ್ಮಿಕರ ಸೇವೆಯನ್ನು ಈಶ ಸೇವೆಯೆಂದು ಭಾವಿಸಿ ಅವರಿಗೆ ಗೌರವ ನೀಡುವ ಪರಂಪರೆಯನ್ನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ ಷಡಕ್ಷರಿ ತಿಳಿಸಿದರು
ಈ ಸಂದರ್ಭದಲ್ಲಿ. ತಾಲೂಕು ದಂಡಾಧಿಕಾರಿಗಳಾದ ಮೋಹನ್ ಕುಮಾರ್. ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ ಸುದರ್ಶನ್. ನಗರಸಭೆ ಅಧ್ಯಕ್ಷರಾದ ಯಮುನಾ ಧರಣೇಶ್. ನಗರಸಭೆ ಆಯುಕ್ತರಾದ ವಿಶ್ವೇಶ್ವರಯ್ಯ ಬದನಗೆರೆ. ಉಪ ತಹಸಿಲ್ದಾರ್ ಜಗನ್ನಾಥ್ ನಗರಸಭೆ ಉಪಾಧ್ಯಕ್ಷರಾದ ಮೇಘಶ್ರೀ ಸುಚಿತ್ ಭೂಷಣ್. ಸೇರಿದಂತೆ ಶಿಕ್ಷಕರು ಶಾಲಾ ಮಕ್ಕಳು ಸಾರ್ವಜನಿಕರು ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ ಮಂಜು ಗುರುಗದಹಳ್ಳಿ