Poster released for the concluding meeting of the massive statewide movement at Freedom Park, Bengaluru on August 21st

ಸರ್ಕಾರಿ ಶಾಲೆಗಳ ಮುಚ್ಚುವಿಕೆ ವಿರೋಧಿಸಿ 50 ಲಕ್ಷ ಸಹಿಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಎಐಡಿಎಸ್‍ಒ ಕರ್ನಾಟಕ ಸಿದ್ಧತೆ
ಕೊಪ್ಪಳದ ಬಸ್ ನಿಲ್ದಾಣದ ಹತ್ತಿರ ಎಐಡಿಎಸ್‍ಒ ಕಾರ್ಯಕರ್ತರು ಆಗಸ್ಟ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರಾಜ್ಯವ್ಯಾಪಿ ಚಳುವಳಿಯ ಸಮಾರೋಪ ಸಭೆಯ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ಕುರಿತು ಮಾತಾನಾಡಿದ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಬೆಂಗಳೂರನಲ್ಲಿ ಆಗಸ್ಟ್ 13, 2025 – ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು “ವಿಲೀನ”ಗೊಳಿಸುವ ಹೆಸರಿನಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದ ಐತಿಹಾಸಿಕ 50 ಲಕ್ಷ ಸಹಿ ಸಂಗ್ರಹ ಅಭಿಯಾನವು ಯಶಸ್ವಿಯಾಗಿ ಪೂರ್ಣಗೊಂಡಿದೆ. “ಸರ್ಕಾರಿ ಶಾಲೆಗಳನ್ನು ಉಳಿಸಿ ಮತ್ತು ಬಲಪಡಿಸಿ” ಎಂಬ ಕರೆಯೊಂದಿಗೆ ಪ್ರಾರಂಭವಾದ ಈ ಅಭಿಯಾನವು ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ವಿದ್ಯಾರ್ಥಿ ಚಳುವಳಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
50,000 ಕ್ಕೂ ಹೆಚ್ಚು ಸ್ವಯಂಸೇವಕರು ರಾಜ್ಯಾದ್ಯಂತ ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಪೋಷಕರು, ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರ ಜೊತೆ ಸೇರಿ ನೂರಾರು ಪ್ರತಿಭಟನಾ ಸಭೆಗಳನ್ನು ನಡೆಸಿದ್ದಾರೆ. ಹಲವು ಜಿಲ್ಲೆಗಳಲ್ಲಿ, ಈ ಹೋರಾಟವು, ಅಧಿಕಾರಿಗಳು ಅನೇಕ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವಂತೆ ಮಾಡಿದೆ. ಅಲ್ಲದೆ, ಕರ್ನಾಟಕದಾದ್ಯಂತ ಹಲವಾರು ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಣ ತಜ್ಞರಿಂದ ಈ ಚಳುವಳಿಗೆ ಬೆಂಬಲ ವ್ಯಕ್ತವಾಗಿದೆ. ರಾಜ್ಯದ 30 ಜಿಲ್ಲೆಗಳ 150 ಕ್ಕೂ ಹೆಚ್ಚು ತಾಲೂಕುಗಳನ್ನು ಈ ಅಭಿಯಾನವು ತಲುಪಿದ್ದು, 1000 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಕೊಪ್ಪಳದ ಜನತೆಯೂ ಕೂಡ ಈ ಚಳುವಳಿಗೆ ಬೆಂಬಲಿಸಿ ಒಂದು ಲಕ್ಷಕ್ಕೂ ಹೆಚ್ಚು ಸಹಿಗಳನ್ನು ನೀಡಿದ್ದಾರೆ. ಹಾಗೇ ಪ್ರೊ.ಅಲ್ಲಮ ಪ್ರಭು ಬೆಟ್ಟದೂರು, ಶ್ರೀ.ರಾಮಣ್ಣ ಆಲಮಾರ್ಸಿಕೇರಿ, ಶ್ರೀ.ಈಶ್ವರ್ ಹತ್ತಿ, ಶ್ರೀ.ಎಚ್. ಎಸ್. ಪಾಟೀಲ್,ಶ್ರೀ.ಡಿ.ಎಂ ಬಡಿಗೇರ್, ಅಜ್ಮೀರ್ ನಂದಾಪುರ, ಶ್ರೀ. ಎಸ್. ಎಂ ಮದರಿ, ಡಾ. ರಾಜಶೇಖರ್ ನಾರಿನಾಳ್ ಸೇರಿದಂತೆ ಜಿಲ್ಲೆಯ ಅನೇಕ ಸಾಹಿತಿಗಳು ಮತ್ತು ಗಣ್ಯವ್ಯಕ್ತಿಗಳು ಬೆಂಬಲಿಸಿದ್ದಾರೆ.
ಈಗ ಸಮಾರೋಪ ಸಮಾರಂಭ – ಆಗಸ್ಟ್ 21, ಬೆಳಿಗ್ಗೆ 11, ಫ್ರೀಡಂ ಪಾರ್ಕ್, ಬೆಂಗಳೂರನಲ್ಲಿ ನಡೆಯಿತ್ತಿದ್ದು. ಸಂಗ್ರಹಿಸಲಾದ ಸಹಿಗಳನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಔಪಚಾರಿಕವಾಗಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣದ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ, ಬರಗೂರು ರಾಮಚಂದ್ರಪ್ಪ – ಸಾಹಿತಿಗಳು ಮತ್ತು ಶಿಕ್ಷಣ ತಜ್ಞರು, ಉದ್ಘಾಟಕರಾಗಿ, ಸಂತೋಷ್ ಹೆಗಡೆ – ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮಾಜಿ ಲೋಕಾಯುಕ್ತರು, ಅತಿಥಿಗಳಾಗಿ, ಪ್ರೊ. ಎ. ಮುರಿಗೆಪ್ಪ – ವಿಶ್ರಾಂತ ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಕಿಶೋರ್ – ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟ
ಮುಖ್ಯ ಭಾಷಣಕಾರರಾಗಿ, ಶಿಬಾಶಿಷ್ ಪ್ರಹರಾಜ್ – ಪ್ರಧಾನ ಕಾರ್ಯದರ್ಶಿಗಳು, ಎಐಡಿಎಸ್‍ಒ ಕೇಂದ್ರ ಕೌನ್ಸಿಲ್ ಹಾಗೇ
ಪ್ರಾಸ್ತಾವಿಕ ನುಡಿಗಳನ್ನು, ಅಜಯ್ ಕಾಮತ್ – ರಾಜ್ಯ ಕಾರ್ಯದರ್ಶಿಗಳು, ಎಐಡಿಎಸ್‍ಒ ಕರ್ನಾಟಕ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ವಿನಿ ಕೆ ಎಸ್ – ರಾಜ್ಯಾಧ್ಯಕ್ಷರು, ಎಐಡಿಎಸ್‍ಒ ಕರ್ನಾಟಕ ಇವರು ವಹಿಸಲಿದ್ದು, ಇನ್ನಿತರೇ ಅನೇಕ ಗಣ್ಯವ್ಯಕ್ತಿಗಳು ಭಾಗವಹಿಸುತ್ತಿದ್ದಾರೆ.
ಈ ಚಳುವಳಿಯು ಕರ್ನಾಟಕದ ವಿದ್ಯಾರ್ಥಿ ಚಳುವಳಿಯ ಇತಿಹಾಸದಲ್ಲಿ ಒಂದು ವಿಶಿಷ್ಟ ಹೆಜ್ಜೆಯಾಗಿದೆ ಎಂದು ಎಐಡಿಎಸ್‍ಒ ನಂಬುತ್ತದೆ. ಸರ್ಕಾರಿ ಶಾಲೆಗಳ ರಕ್ಷಣೆ ಮತ್ತು ಬಲವರ್ಧನೆಗಾಗಿ ನಡೆಯಲಿರುವ ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಧ್ವನಿ ಎತ್ತಬೇಕೆಂದು ಎಐಡಿಎಸ್‍ಒ ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ ಎಂದರು.