Milk religion awareness meeting during the month of Shravan in Dhanapur.

*ಲಿಂಗ ಬೇಧ ಮಾಡದೇ ಮಕ್ಕಳಿಗೆ ಶಿಕ್ಷಣ ಕೊಡಿಸಿ :ಸಿದ್ದರಾಮಾನಂದ ಪುರಿ ಸ್ವಾಮೀಜಿ.
*ಹಾಲುಮತ ಕುರು ಸಮಾಜದ ಮಹಿಳೆಯರು ಧೈರ್ಯಶಾಲಿ, ಸಾಹಸಿಗಳು
*ಗಿಡನೆಟ್ಟು ಬೆಳಸಿದರೆ 85 ಲಕ್ಷ ಜೀವರಾಶಿಗಳಿಗೆ ನೆರವಾದಂತೆ
ಗಂಗಾವತಿ: ಪಾಲಕರು ಲೀಮಗಬೇಧ ಮಾಡದೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಬೇಕೆಂದು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕಾಗಿನೆಲೆ ಕನಕಗುರು ಪೀಠದ ಕಲಬುರ್ಗಿ ಶಾಖಾಮಠದ ಪೂಜ್ಯ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಢಣಾಪೂರ ಗ್ರಾಮದ ಶ್ರೀಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಶ್ರಾವಣಮಾಸದ ಹಾಲುಮತ ಧರ್ಮ ಜಾಗೃತಿ ಹಾಗೂ ಪರಿಸರ ಸಂರಕ್ಷಣೆಯ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತಿಹಾಸ ಪುರಾಣಗಳ ಮೂಲಕ ಮಹಿಳಾ ಸಾಮಾರ್ಥ್ಯ ನಮಗೆ ಅರ್ಥವಾಗುತ್ತದೆ. ಮೈಲಾರಲಿಂಗನ ಪತ್ನಿ ಗಂಗಮಾಳಮ್ಮ, ಅಹಲ್ಯಾಬಾಯಿ ಹೋಳ್ಕರ್,ಕಿತ್ತೂರು ಚನ್ನಮ್ಮ, ವನಕೆ ಓಬವ್ವ ಸೇರಿ ಅನೇಕರು ಸಾಮ್ರಾಜ್ಯ, ಧರ್ಮ ಸಂರಕ್ಷಣೆಗಾಗಿ ಪತಿಗಳ ಜತೆ ಟೊಂಕ ಕಟ್ಟಿ ನಿಂತು ಹೋರಾಟ ಮಾಡಿದ್ದಾರೆ. ಆದ್ದರಿಂದ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣದೇ ಅವರು ಬುದ್ದಿವಂತರಾಗಲು ಅವರಿಗೆ ಶಿಕ್ಷಣ ನೀಡಿ ಸ್ವಾವಲಂಭಿಗಳನ್ನಾಗಿಸಬೇಕು. ಹಾಲುಮತ ಧರ್ಮದ ಪೂಜಾರಿಗಳು, ಒಡೆಯರು ಶಿಕ್ಷಣ, ಸಂಸ್ಕೃತ ಭಾಷೆ ಕಲಿತ್ತಿದ್ದರೆ ಬೇರೆಯವರಿಗಿಂತಲೂ ಸರ್ವ ಕ್ಷೇತ್ರದಲ್ಲಿ ಜಾಗೃತರಾಗಬಹುದಿತ್ತು ಎಂದರು.
ಬೇರೆ ಬೇರೆ ಕಾರಣಕ್ಕಾಗಿ ಪರಿಸರವನ್ನು ನಾಶ ಮಾಡಲಾಗುತ್ತಿದ್ದು ಪ್ರತಿಯೊಬ್ಬರೂ ಗಿಡ ಮರ ನೆಟ್ಟು ಬೆಳೆಸಬೇಕು. ಒಂದು ಗಿಡ ನೆಟ್ಟು ಬೆಳೆಸಿದರೆ 84 ಲಕ್ಷ ಜೀವರಾಶಿಗಳಿಗೆ ಆಶ್ರಯ ನೀಡಿದಂತಾಗುತ್ತದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಸ್ಕೇರಾ ಸಿದ್ಧರೂಢ ಸ್ವಾಮಿಜಿ, ಬಸಾಪಟ್ಟಣದ ಸಿದ್ದಯ್ಯ ಗುರುವಿನ್, ಗುಂಡಯ್ಯ ಹಿರೇಮಠ, ಲಿಂಗಬೀರದೇವರು ಸ್ವಾಮೀಜಿ, ಶಿವಸಿದ್ದೇಶ್ವರ ಸ್ವಾಮೀಜಿ ಸೇರಿ ಹಾಲುಮತ ಕುರುಬ ಸಮಾಜದ ಮುಖಂಡರು ಗಾಗೂ ಗಂಗಾವತಿ, ಢಣಾಪೂರ ಹಾಗೂ ಸುತ್ತಲಿನ ಗ್ರಾಮಗಳ ಜನರಿದ್ದರು.