Is there no action against the irresponsible behavior of drivers?
Is life worth nothing?

ಕೊಟ್ಟೂರು : ರಾಜ್ಯದ ಸಾರಿಗೆ ಸಂಸ್ಥೆಯ ವಾಹನಗಳ ಚಾಲಕರು ಇತ್ತೀಚೆಗೆ ಬೇಜವಾಬ್ದಾರಿಯಿಂದ ಬಸ್ಸುಗಳನ್ನು ಚಲಾಯಿಸುತ್ತಿದ್ದಾರೆ. ಇವರನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ತಮಗೆ ಬೇಕಾದಲ್ಲಿ ಬಸ್ ನಿಲ್ಲಿಸುವುದು, ವಿಪರೀತ ವೇಗವಾಗಿ ಬಸ್ ನಡೆಸುವುದು, ಬೈಕ್ ಸವಾರರ ಮೇಲೆ ಬೇಕಂತಲೇ ಭಯ ಪಡಿಸುವುದು ಇತ್ಯಾದಿ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಸಾರಿಗೆ ಸಂಸ್ಥೆಗಳಿಂದ ಸರಿಯಾದ ತರಬೇತಿ ನೀಡದೇ ಅವರನ್ನು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಲು ಬಿಟ್ಟಿರುವುದು ಸಾರಿಗೆ ಸಂಸ್ಥೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಗುರುವಾರ ಪೋಲೀಸ್ ಪೇದೆಗಳಿಬ್ಬರು ಕೆಲಸದ ಮೇರೆಗೆ ಕೊಟ್ಟೂರಿನಿಂದ ಕೂಡ್ಲಿಗಿಗೆ ಹೋಗುವ ಸಂದರ್ಭದಲ್ಲಿ ಮಲ್ಲನಾಯಕನಹಳ್ಳಿ ಕ್ರಾಸ್ ಹತ್ತಿರ ಪೋಲಿಸ್ ಪೇದೆಗಳಿಬ್ಬರು ಹೋಗುವ ಬೈಕ್‌ಗೆ ಹರಿಹರ ಬಸ್ ಡಿಪೋದಿಂದ ಸಂಚರಿಸುವ ಹರಿಹರ-ಬಳ್ಳಾರಿ ಬಸ್ ಚಾಲಕ ವಿಪರೀತ ವೇಗದಿಂದ ಹೋಗಿ ಗುದ್ದಿದ್ದಾರೆ. ಇದರಿಂದ ಬಸ್ ಗಾಲಿಗೆ ಬಿದ್ದು ಮರಣ ಹೊಂದುವ ಸಂಭವವಿತ್ತು. ಆದರೆ ಅದೃಷ್ಟವಶಾತ್ ಅದಾವ ಪ್ರಮಾದ ಸಂಭವಿಸಲಿಲ್ಲ. ಅಲ್ಲದೇ ಬಸ್ ಚಾಲಕ ಬಸ್ ನಿಲ್ಲಿಸದೇ, ವಿಪರೀತ ವೇಗವಾಗಿ ಚಲಾಯಿಸಿಕೊಂಡು ಹೋಗಿರುತ್ತಾನೆ. ಸ್ಥಳೀಯ ಮಹಿಳೆಯಾದ ಮಂಜಮ್ಮ ಇವರು ಇದನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ. ಅಲ್ಲಿಗೆ ಕಾರಿನಲ್ಲಿ ಬರುತ್ತಿದ್ದ ಶಿವಣ್ಣ ಎಂಬುವವರು ಹೋಗಿ ಬಸ್ಸನ್ನು ಅಡ್ಡಗಡ್ಡಿ ಬೈಕ್ ಸವಾರರಾದ ಪೊಲೀಸರಿಗೆ ತಿಳಿಸಿದರು. ಗಜಾಪುರದ ಹತ್ತಿರಕ್ಕೆ ಬಂದ ಪೇದೆಗಳಿಬ್ಬರು ಚಾಲಕನಾದ ರಾಮಲಿಂಗಪ್ಪ ಇವರಿಗೆ ಬಸ್‌ನಿಂದ ಇಳಿಯುವಂತೆ ಸೂಚಿಸಿದರೂ ಸಹ ಚಾಲಕ ದುರ್ವರ್ತನೆಯಿಂದ ನಡೆದುಕೊಂಡಿದ್ದರಿಂದ ಒಬ್ಬರಿಗೊಬ್ಬರು ವಾದಕ್ಕಿಳಿದು ಜಗಳಗಳಾಗಿದೆ. ಬಸ್ ಚಾಲಕ ರಾಮಲಿಂಗಪ್ಪ ಮತ್ತು ನಿರ್ವಾಹಕಿ ಆಶಾ ಇವರ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ ೦೧೭೦/೨೦೨೫ ಪೊಲೀಸ್ ಪ್ರಕರಣ ದಾಖಲಾಗಿದೆ. ಅಲ್ಲದೇ ಬಸ್ ಚಾಲಕ ಮೊದಲು ನಮ್ಮದು ತಪ್ಪಾಗಿದೆ ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿರುವುದನ್ನು ಬಿಟ್ಟು ಪೊಲೀಸ್ ಮಾತನಾಡಿರುವುದಷ್ಟನ್ನೇ ವಿಡಿಯೋ ಮಾಡಲಾಗಿದೆ. ಸಾರ್ವಜನಿಕರು ಅವರನ್ನು ಮಾತ್ರ ವಿಡಿಯೋ ಮಾಡಿರುವುದನ್ನು ನೋಡಿದರೆ ಏಕಪಕ್ಷೀಯವಾಗಿ ವಿಡಿಯೋ ಮಾಡಲಾಗಿದೆ ಎಂಬುದು ತಿಳಿಯುತ್ತದೆ.
ಒಂದು ವೇಳೆ ಪ್ರಮಾದ ಸಂಭವಿಸಿದ್ದರೆ, ಇಬ್ಬರೂ ಪೇದೆಗಳು ಆ ಕ್ಷಣದಲ್ಲೇ ರಸ್ತೆ ಹೆಣವಾಗಿ ಬೀಳುತ್ತಿದ್ದರು. ಸಾರ್ವಜನಿಕ ಸೇವೆಯಲ್ಲಿರುವ ಪೊಲೀಸರಿಗೆ ಸಂಬಂಧಗಳು ಇರುವುದಿಲ್ಲವೇ? ಅವರಿಗೂ ಜೀವಭಯ ಇರುವುದಿಲ್ಲವೇ? ಪೊಲೀಸರಿಗೆ ಈ ರೀತಿಯ ಘಟನೆಗಳು ನಡೆದರೆ ಸಾರ್ವಜನಿಕರ ಗತಿ ಏನು? ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ಪೊಲೀಸರನ್ನು ಅಮಾನತ್ತಿನಲ್ಲಿಡುವುದು ಎಷ್ಟು ಸರಿ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಲ್ಲದೇ ಈ ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ವರದಿಗಳನ್ನು ಆಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಅಮಾನತು ಹಿಂಪಡೆಯಬೇಕು ಎಂದು ಪ್ರಜ್ಞಾವಂತ ಮಲ್ಲನಾಯಕನಹಳ್ಳಿ ಮಂಜಮ್ಮ, ರಮೇಶ್,ಶಿವಣ್ಣ ಕೊಟ್ಟೂರು
ಸಾರ್ವಜನಿಕರು ಒತ್ತಾಯಿಸಿದರು.
ಕೋಟ್-೧
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಡಿ, ಹಲವಾರು ಬೆದರಿಕೆ ಕರೆಗಳು, ಅವಾಚ್ಯ ಮೆಸೇಜ್‌ಗಳು ಬರುತ್ತಿವೆ. ನಮ್ಮ ಕುಟುಂಬ ಭಯದ ವಾತಾವರಣದಲ್ಲಿದ್ದೇವೆ. ನಮಗೇನಾದರೂ ಆದರೆ ಯಾರು ನೋಡುವುದು ನಾವು ಮಾನಸಿಕತೆಯಿಂದ ಕುಗ್ಗಿಹೋಗಿದ್ದೇವೆ. ಇವೆಲ್ಲವುಗಳನ್ನು ಸಾಕ್ಷ್ಯ ಮಾಡಿಕೊಂಡು ಮುಂದೆ ನ್ಯಾಯಾಲಯದ ಮುಂದೆ ಹೋಗುತ್ತೇವೆ.
ಪೇದೆಯ ಕುಟುಂಬಸ್ಥರು
ಕೊಟ್-2
ಎರಡು ಕಡೆಯ ತಪ್ಪುಗಳನ್ನು ಅಧರಿಸಿದ ಮೇಲೆ ಪ್ರಥಮ ತನಿಖೆಯ ಪ್ರಕರಣ ದಾಖಲಿಸುತ್ತಾರೆ ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಪೇದೆಯ ಕುಟುಂಬಸ್ಥರಿಗೆ ಮೇಲಧಿಕಾರಿಗಳು ಜೊತೆಯಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು
ಹೆಸರು ಹೇಳಲು ಇಚ್ಛಿಸಿದ ಪೊಲೀಸ್ ಪೇದೆ