Installation of the flag pole of Ka Maharaj Ganapati

ಗಂಗಾವತಿ : ಗಂಗಾವತಿ ಕಾ ಮಹಾರಾಜ್ ಗಣಪತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಹಾಗೂ ಗಣಪತಿಯ ನಾಮಫಲಕ ಶನಿವಾರ ಜರುಗಿತು, ವಿಜಯ ವೃಂದ ಯುವಕರ ಸಂಘದಿಂದ ಬಾಬು ಜಗಜೀವನರಾಮ್ ವೃತ್ತದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಷ್ಠಾಪಿಸಿ
ವಿಶೇಷ ಪೂಜೆ ಸಲ್ಲಿಸಿದರು,
ಈ ವೇಳೆ ಶಾಂತಕುಮಾರ್ ಮಾತನಾಡಿ
ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಯುವಕ ಮಂಡಳಿ ಸಜ್ಜಾಗಿದೆ.
ಹೈದರಾಬಾದ್ ನಿಂದ ಗಣೇಶ ಮೂರ್ತಿಯನ್ನು ತರಲಿದ್ದೇವೆ, ಒಟ್ಟಾರೆ ಈ ಬಾರಿಯೂ ಅತಿ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸತೀಶ್, ರಾಮು ಗಿಡ್ಡ ಶರಣ, ಗುರುರಾಜ್ ವಿಜಯ ವೃಂದ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.