Veeresh advocates demand re-survey of internal reservation survey.

ಗಂಗಾವತಿ : ಒಳ ಮೀಸಲಾತಿ ಸಮೀಕ್ಷೆಯಲ್ಲಿ (ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ ಆದ್ದರಿಂದ ಈ ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಾರತಮ್ಯ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಆದ್ದರಿಂದ ಕೂಡಲೆ ಒಳ ಮೀಸಲಾತಿ ಮೂರು ಸಮೀಕ್ಷೆ ಆಗಬೇಕೆಂದು ಸರ್ಕಾರಕ್ಕೆ ವೀರೇಶ ವಕೀಲರು ಈಳಿಗನೂರು ಒತ್ತಾಯಿಸಿದ್ದಾರೆ . ಅವರು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿ. ನಮ್ಮ ಛಲವಾದಿ (ಬಲಗೈ) ಸಮಾಜದವರು ಯಾರ ಹಕ್ಕನ್ನು ಪ್ರಶ್ನಿಸದೇ, ವಿರೋಧ ಮಾಡದೇ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲು ಸದಾ ಸಿದ್ದರಿದ್ದು, ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಅವರ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ದಿನಾಂಕ-04/08/2025 ರಂದು ಸರಕಾರಕ್ಕೆ ಒಳ ಮೀಸಲಾತಿ ವರದಿಯನ್ನು ಸಲ್ಲಿಸಿದ್ದು, 5 ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿಯನ್ನು ಹಂಚಿಕೆ ಮಾಡಿದೆ… ಇದರಲ್ಲಿ ಹೊಲೆಯ ಜಾತಿಗೆ ಸಂಬಂಧಿಸಿದ ಛಲವಾದಿ, ಪರಯ, ಪರೈಯಾನ್ ಹಾಗೂ ಬಲಗೈ ಜಾತಿಗೆ ಸೇರಿದ ಇನ್ನಿತರ ಜಾತಿಗಳನ್ನ ಒಟ್ಟಿಗೆ ಸೇರಿಸದೇ ಪ್ರತ್ಯೇಕವಾಗಿ ಮಾಡಿ ವರದಿಯನ್ನು ಸಲ್ಲಿಸಿದ್ದು, ಹೊಲೆಯ ಸಂಬಂಧಿತ ಜಾತಿಗಳನ್ನು ಕಡಿಮೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಕೇವಲ 5% ಮೀಸಲಾತಿಯನ್ನು ನೀಡಲು ಹೊರಟಿರುವುದು ಮತ್ತು ಬಲಗೈ ಸಮುದಾಯಕ್ಕೆ ಅನ್ಯಾಯವನ್ನು ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಿರುತ್ತದೆ… ಆದ್ದರಿಂದ ಇದೇ ತಿಂಗಳ ದಿನಾಂಕ-16/08/2025 ರಂದು ನಡೆಯುವ ಸಚಿವ ಸಂಪುಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇದರ ಸರಿ ತಪ್ಪುಗಳ ಬಗ್ಗೆ ಸಂಪೂರ್ಣ ಚರ್ಚೆ ಮಾಡಬೇಕು ಮತ್ತು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಇರುವ ಹೊಲೆಯ, ಛಲವಾದಿ, ಪರಯ, ಪರೈಯಾನ್ ಇನ್ನಿತರ ಬಲಗೈ ಸಂಬಂಧಿತ ಜಾತಿಗಳನ್ನು ಒಟ್ಟಿಗೆ ಸೇರಿಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕು… ಅಲ್ಲದೇ ನೂರಾರು ವರ್ಷಗಳ ಕಾಲ ಬಲಗೈ ಸಮುದಾಯವು ಅನುಭವಿಸಿಕೊಂಡು ಬಂದಿರುವ ಸಾಮಾಜಿಕ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳನ್ನ ನಿವಾರಿಸುವ ನಿಟ್ಟಿನಲ್ಲಿ ಮತ್ತು ಬಲಗೈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದುಬರಲು ಅನುವು ಮಾಡಿಕೊಡಬೇಕೆಂದು ಈ ಮೂಲಕ ಸರಕಾರಕ್ಕೆ ನಮ್ಮ ಹಾಕ್ಕೋತ್ತಾಯವಿರುತ್ತದೆ *ಒಂದು ವೇಳೆ ಸರಕಾರವು ಇದಾವುದನ್ನು ಗಮನಕ್ಕೆ ತೆಗೆದುಕೊಳ್ಳದೇ ವರದಿಯನ್ನ ಯತಾವತ್ತಾಗಿ ಜಾರಿ ಮಾಡಲು ಮುಂದಾದರೆ ಮುಂದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಪತ್ರಿಕೆ ಪ್ರಕಟನೆ ಮೂಲಕ ಬಲಗೈ ಸಮುದಾಯ ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು