Breaking News

ಬಳ್ಳಾರಿಯಲ್ಲಿ ಅಭೂತಪೂರ್ವ ಯಶಸ್ವಿಯಾದ ಸ್ವಾಭಿಮಾನಿ ಸಂಘರ್ಷ ಚೈತನ್ಯ ಸಮಾವೇಶ ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ

Unprecedentedly successful Swabhimani Sangharsh Chaitanya Samavesh in Bellary District President Parashuram Kerehalli
Screenshot 2025 08 09 19 50 41 44 6012fa4d4ddec268fc5c7112cbb265e7326966827103528888 1024x465

ಕೊಪ್ಪಳ : – ಎರಡನೇ ಅಂಬೇಡ್ಕರ್ ಎಂದೆ ಪ್ರಸಿದ್ಧವಾದ, ದಲಿತರ ಪರ ಹೋರಾಡಿ, ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಪ್ರೊ.ಬಿ,ಕೃಷ್ಣಪ್ಪ ಅವರ 88ನೇ ಜಯಂತಿಯನ್ನು ಬಳ್ಳಾರಿ ನಗರದ ಮೋತಿ ಸರ್ಕಲ್ ಹತ್ತಿರ (ಮೂಡ ಕಾಂಪ್ಲೆಕ್ಸ್) ನ ಕೆಇಬಿ ಪಂಕ್ಷನ್ ಹಾಲ್ ನಲ್ಲಿ ಪ್ರೊ.ಬಿ,ಕೃಷ್ಣಪ್ಪ ಅವರ ಹುಟ್ಟಿದ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಸ್ವಾಭಿಮಾನಿ ಪ್ರೊ.ಬಿ,ಕೃಷ್ಣಪ್ಪ ಅವರ ಬಣ ಜಿಲ್ಲಾ ಸಮಿತಿ ಕೊಪ್ಪಳ ಜಿಲ್ಲಾ ಸಂಚಾಲಕರಾದ ಪರಶುರಾಮ್ ಕೆರೆಹಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಕೊಪ್ಪಳ ನಗರ ಮತ್ತು ಬಹಾದ್ದೂರ್ ಬಂಡಿ, ದದೆಗಲ್, ಓಜನಹಳ್ಳಿ, ಇರ್ಕಲ್ ಗಡಾ_ ಸಂಗಾಪೂರ, ಗಿಣಿಗೇರಿ, ಕೆರೆಹಳ್ಳಿ, ಹಾಗೂ ಯಲಬುರ್ಗಾ, ಕುಕುನೂರು, ಕುಷ್ಟಗಿ, ಕನಕಗಿರಿ, ಕಾರಟಗಿ ಗಂಗಾವತಿ, ಇವರೆಲ್ಲರೂ ಸೇರಿ ಟ್ರ್ಯಾಕ್ಸ್, ಕಾರ್, ಬಸ್ಸು, ರೈಲು ಗಾಡಿ ಮುಖಾಂತರ 500 ಕ್ಕಿಂತ ಹೆಚ್ಚು ಈ ಸಂಘಟನೆ ಕಾರ್ಯಕರ್ತರು, ರಾಜ್ಯಮಟ್ಟದ ಸ್ವಾಭಿಮಾನಿ ಸಂಘರ್ಷ ಚೈತನ್ಯ ಸಮಾವೇಶದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಅವರಿಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ತಿಳಿಸಲಾಗುವುದು ಎಂದು ಪರಶುರಾಮ್ ಕೆರೆಹಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಈ ಸಂಘಟನೆಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಪರಶುರಾಮ್ ಕೆರೆಹಳ್ಳಿ, ವಿಭಾಗೀಯ ಸಂಚಾಲಕರಾದ ಹಂಪೇಶ್ ಹರಿಗೋಲ್ , ಪಾರ್ವತೇಮ್ಮ ಹರಿಗೋಲ್ ಮಹಿಳಾ ಜಿಲ್ಲಾ ಸಂಚಾಲಕಿ, ಉಪಾ ವಿಭಾಗಿಯ ಸಂಚಾಲಕ, ಹನುಮಂತಪ್ಪ ನಾಯಕ್, ಯಮನೂರ ನಾಯಕ್ ಹುಲಿಹೈದರ್ ಜಿಲ್ಲಾ ಖಜಾಂಚಿ, , ಮಾರ್ಕಂಡಪ್ಪ ಹಲಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗವಿ ಸಿದ್ದಪ್ಪ ಕುಣಿಕೇರಿ ಜಿಲ್ಲಾ ಸಂಘಟನಾ ಸಂಚಾಲಕ, ಮಂಜುನಾಥ್ ನಡುವಿನಮನಿ ಜಿಲ್ಲಾ ಸಂಘಟನಾ ಸಂಚಾಲಕ, ಸಂಜಯ್ ದಾಸರ್ ಕೌಜಿಗೇರಿ ಅಲೆಮಾರಿ ಜಿಲ್ಲಾಧ್ಯಕ್ಷ, ಶರಣಪ್ಪ ಓಜನಹಳ್ಳಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ, ಅಂದಪ್ಪ ಹಡಪದ್ ಕೊಪ್ಪಳ ತಾಲೂಕ ಸಂಚಾಲಕ, ಮಂಜು ಸಂಗಾಪುರ್ ಇರ್ಕಲ್ಗಡ ಹೋಬಳಿ ಘಟಕ ಅಧ್ಯಕ್ಷ, ಹನುಮಂತಪ್ಪ ಇಳಿಗನೂರು ಕಾರಟಗಿ ತಾಲೂಕು ಸಂಚಾಲಕ, ಬೆಟ್ಟಪ್ಪ ಹಿರೇಕುರುಬರು ಗಂಗಾವತಿ ತಾಲೂಕ ಸಂಚಾಲಕ, ವೀರೇಶ್ ನಾಯಕ್ ತಾ.ಸಂ ಸಂಚಾಲಕ, ಈರಪ್ಪ ವಿಠಲಪುರ್, ಶಿವಪ್ಪ ಹುಲ್ಕಿಹಾಳ್, ಅಂಜನಿ ಹುಲೇನೂರು , ಲಲಿತಾ ಮಜ್ಗಿ, ಬಸಮ್ಮ ಸಂಗನಾಲ್, ರಮೇಶ್ ಕೆರೆಹಳ್ಳಿ ವಕೀಲರು, ರಾಘು ಬಂಡಾರಿ, ಮರಿಸ್ವಾಮಿ ಓಜನಹಳ್ಳಿ, ಮಂಜು ದೊಡ್ಮನಿ ಓಜನಹಳ್ಳಿ, ಹನುಮಂತ ಕೆರೆಹಳ್ಳಿ ವಿದ್ಯಾರ್ಥಿ ಘಟಕ,

ಜಾಹೀರಾತು

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.