The bravery, adventure and unparalleled struggle of Kumararam are ingrained in the minds of the people: Somnath S. Hebbada

ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯ ವಡ್ಡರಹಟ್ಟಿ ಗಂಗಾವತಿ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿವತಿಯಿಂದ ಪರನಾರಿ ಸಹೋದರ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.
ಜಯಂತಿಯ ಅಂಗವಾಗಿ ಶ್ರೀ ಸೋಮನಾಥ. ಎಸ್. ಹೆಬ್ಬಡದ ಇವರು ಉಪನ್ಯಾಸವನ್ನು ನೀಡಿದರು. ಉಪನ್ಯಾಸದಲ್ಲಿ ಗಂಡುಗಲಿ ಕುಮಾರರಾಮನ ಇತಿಹಾಸ, ಆತನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಮನೋಭಾವ ಹಾಗೂ ಆತನ ತ್ಯಾಗ ಬಲಿದಾನದ ಬಗ್ಗೆ ಹಾಗೂ ಕುಮಾರರಾಮನ ಸದ್ಗುಣಗಳ ಕಾರಣದಿಂದ ಇಂದಿಗೂ ಜನಮಾನಸದಲ್ಲಿ ಬೇರೂರಿದ್ದು ಆತನನ್ನು ಪೂಜಿಸಲಾಗುತ್ತಿದೆ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪ್ರಾಂತ ಕಾರ್ಯಕಾರಣಿ ಮಂಡಳಿಯ ಸದಸ್ಯರಾದ ಅಶೋಕ್ ರಾಯಕರ್ ಅವರು ಇತಿಹಾಸವನ್ನು ತಿರುಚಿ ನಮ್ಮ ದೇಶದ ಹೋರಾಟಗಾರರ ಹಾಗೂ ವೀರರ ತೇಜೋವಧೆ ಮಾಡಲಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಮೈಸೂರಿನ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ ಮೈಸೂರು ಅರಸರನ್ನು ಮರೆಮಾಚಿ ಬೇರೆ ಇನ್ನಾರೋ ಅದನ್ನು ಕಟ್ಟಿದ್ದಾರೆ ಎಂಬAತೆ ಜನರಿಗೆ ತಿಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಡಾ|| ಮಾನಸ ಡಿ.ಎ. ಅವರು ನಮ್ಮ ಕಾಲೇಜಿನಲ್ಲಿ ಭಾರತೀಯ ಹೋರಾಟಗಾರರ ಜೀವನ ಚರಿತ್ರೆಯನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಯುವಂತೆ ಮಾಡುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲೆ ಸಮಿತಿಯ ಉಪಾಧ್ಯಕ್ಷರಾದ ಯಂಕಪ್ಪ ಕಟ್ಟಿಮನಿ, ಗಂಡುಗಲಿ ಕುಮಾರರಾಮ ವೇದಿಕೆಯ ಸಂಚಾಲಕರಾದ ರಾಜೇಶ್ ನಾಯಕ್ ದೊರೆ, ಅಖಿಲ ಕರ್ನಾಟಕ ಹಕ್ಕ-ಬುಕ್ಕ ನಾಯಕ ವೇದಿಕೆಯ ಹರನಾಯಕ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿಯ ಅಧ್ಯಕ್ಷರಾದ ಎನ್. ಜಡೆಪ್ಪ ಮೆಟ್ರಿ ಇವರು ಭಾರತೀಯ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವಂಥ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ನಮ್ಮ ದೇಶದ ಹಿರಿಮೆ ಗರಿಮೆಗಳನ್ನು ಅರಿತು ಪ್ರಜ್ಞಾವಂತರಾಗಿ ನಾಡನ್ನು ಕಟ್ಟುವ ಕಾಯಕದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಉಪನ್ಯಾಸಕರಾದ ಕುಮಾರಿ ಸೌಮ್ಯ ಇವರು ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಿದರು. ಶ್ರೀ ಮಹದೇವ್ ಮೋಟಿ ಇವರು ಕಾರ್ಗಿಲ್ ಯೋಧರಿಗೆ ನಮನವನ್ನು ಸಲ್ಲಿಸುವ ದೇಶಭಕ್ತಿ ಗೀತೆಯನ್ನು ಹಾಡಿದರು.
ಗಂಗಾವತಿ ಸಮಿತಿಯ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲಾಲ್ ಇವರು ಸ್ವಾಗತಿಸಿದರು. ಬಳ್ಳಾರಿ ವಿಭಾಗಿಯ ಸಂಯೋಜಕರಾದ ಶ್ರೀಧರ್. ಟಿ ಶಿಕ್ಷಕರು ವಂದನಾರ್ಪಣೆ ಸಲ್ಲಿಸಿ ಶಾಂತಿ ಮಂತ್ರ ಪಠಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಪ್ರಕಾಶ್ ಪಾಟೀಲ್, ಶಿವನಗೌಡ ತೆಗ್ಗಿ, ಶ್ರವಣಕುಮಾರ ರಾಯಕರ್, ಉಪನ್ಯಾಸಕರಾದ ಬಾಳಪ್ಪ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.