New Upakarma and Janivar Dharana at Shankara Math.

ಗಂಗಾವತಿ. ಭಾರತದ ಸನಾತನದ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಈಮಹತ್ವದ್ದಾಗಿದ್ದು ವಟುಗಳಿಗೆ ಉಪನಯನ ಗೊಂಡ ಮಕ್ಕಳು ಶಿಕ್ಷಣ ಕಲಿಯುವ ಅವಕಾಶವನ್ನು ಹೊಂದಿತ್ತು. ಈ ಹಿನ್ನಲೆಯಲ್ಲಿ ಆ ಪರಂಪರೆ ಇಂದಿಗೂ ಜೀವಂತಕೆಯನ್ನು ಹೊಂದಿದ್ದು ಜನಿವಾರದಾರಣೆ ಅತ್ಯಂತ ಮಹತ್ವದ ಆಗಿದೆ ಎಂದು ವೇದಮೂರ್ತಿ ಮಹೇಶ್ ಭಟ್ ಜೋಶಿ ಹೇಳಿದರು. ಅವರು ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ ಉಪನಯನಗೊಂಡ ಎರಡು ಮಕ್ಕಳಿಗೆ ಉಪಕರ್ಮ ಹಾಗೂ ಸಮಾಜ ಬಾಂಧವರ
ಜ ನಿವಾರದಾರಣೆ ಧಾರ್ಮಿಕ ಆಚರಣೆ ಕುರಿತು ಮಾತನಾಡಿದರು. ಸನಾತನದ ಧಾರ್ಮಿಕ ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸನಾತನದ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಉಪಕರ್ಮ ಹೋಮ ಶನಿವಾರ ಧಾರಣೆ. ಗಾಯತ್ರಿ ಮಂತ್ರ ಪಾರಾಯಣ ಇತರೆ ಪೂಜಾ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿ ಕರ್. ಸುರೇಶ್. ಅನಿಲ್ ಅಳವಂಡಿ. ಭೀಮ್ ಸೇನ್ ಭಟ್ ಕರಮುಡಿ ಕರ್. ವೇಣುಗೋಪಾಲ. ಶೇಷಗಿರಿ ಗಡಾದ್. ಇತರರು ಪಾಲ್ಗೊಂಡಿದ್ದರು