Special Puja to Anjanadri Anjaneya from Kishkin along with Governor Thawar Chand Gehlot family.

ಗಂಗಾವತಿ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಇತಿಹಾಸ ಪ್ರಸಿದ್ಧ ಆಂಜನೇಯ ಹುಟ್ಟಿದ ಜನ್ಮಸ್ಥಳವೆಂದೇ ಹೆಸರಾದ ಕಿಷ್ಕಿಂದ ಅಂಜನಾದ್ರಿ ಗೆ ಕರ್ನಾಟಕ ರಾಜ್ಯಪಾಲ ತಾವರ ಚಂದ ತಮ್ಮ ಕುಟುಂಬ ಸಮೇತವಾಗಿ 548 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಶ್ರೀ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾ ದಾಸ ಬಾಬಾಜಿ ಅವರು ರಾಜ್ಯಪಾಲರು ಸೇರಿದಂತೆ ಕುಟುಂಬಸ್ಥರಿಗೆ ಮಹಾಸಂಕಲ್ಪ. ಆಂಜನೇಯನಿಗೆ ಪಂಚಾಮೃತ ಅಭಿಷೇಕ ವಾಯ್ಸ್ಪತಿ ಪಾರಾಯಣ ಅಷ್ಟೋತ್ತರ ಶತನಾಮಾವಳಿ. ಸೇರಿದಂತೆ ಶ್ರೀ ತುಳಸಿದಾಸರ ಹನುಮಾನ್ ಚಾಲೀಸ್ ಪಾರಾಯಣವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ನೆರವೇರಿಸಿ ಕೊಟ್ಟರು. ಜೊತೆಗೆ ಕಿಸ್ಕಿಂದ ಅಂಜನಾದ್ರಿ ಪರ್ವತ ಹಾಗೂ ಆಂಜನೇಯ ಕ್ಷೇತ್ರದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ವ್ಯಕ್ತಿ ಧರ್ಮ ಮಾರ್ಗದಲ್ಲಿ ಮುನ್ನಡೆಸಿಕೊಂಡು ಬರಲು ಸಂಸ್ಕೃತ ಪಾಠ ಶಾಲೆಯ ಪ್ರಾರಂಭ ಕುರಿತು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲರು ಸುಪ್ರೀಂ ಕೋರ್ಟ್ ವಿಷಯದ ಕುರಿತು ವಿದ್ಯಾದಾಸ್ ಬಾಬಾ ರೊಂದಿಗೆ ಚರ್ಚಿಸಿದರು ವೇದ ಪಾಠಶಾಲೆ ಆದಷ್ಟು ಬೇಗನೆ ಪ್ರಾರಂಭಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸ್ವಾಗತಿಸಿಕೊಳ್ಳಲು ಹಾಗೂ ವ್ಯಾಪಕವಾದ ಭದ್ರತೆ ಒದಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು. ಜಿಲ್ಲಾಧಿಕಾರಿಗಳ ಅಧಿಕಾರಿಗಳು. ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.