A great man who worked against social inequality, Shivasharan Hadapada Appannavara. Manohar Gowda
ಗಂಗಾವತಿ:ಅಗಸ್ಟ್5: ಗಂಗಾವತಿ ನಗರದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಎರೆನೇ ವಾರ್ಡ್ ವಡ್ಡರಹಟ್ಟಿಉಳ್ಳಿಡಗ್ಗಿ ಇರವ ಅಜ್ಮೀರ್ ಸಾಬ ಲೇಔಟ್ ದ ಜಾಗದಲ್ಲಿ 891ನೇ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಸೋತ್ಸವ ಆಚರಣೆ ಮಾಡಲಾಯಿತು

12ನೇ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಅಸಮಾನತೆ ವಿರುದ್ಧವಾಗಿ ಶ್ರಮಿಸಿದ ಮಹಾನ ವ್ಯಕ್ತಿ ಶಿವಶರಣ ಹಡಪದ ಅಪ್ಪಣ್ಣ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಮನೋಹರಗೌಡ ಹೇರೂರು ಮಾತನಾಡಿದರು.
ಮಂಗಳವಾರದಂದು ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ್ ಹಾಗೂ ನಗರಸಭೆ ಗಂಗಾವತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ ಜಯಂತಿ ಆಚರಣೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜ ತಿದ್ದುವ ಕಾರ್ಯವನ್ನು ಮಾಡುವುದರ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ್ಧ ಮಹಾನ ವ್ಯಕ್ತಿ ಹಡಪದ ಅಪ್ಪಣ್ಣನವರು, ಬಸವನ ಬಾಗೇವಾಡಿಯ ಮಸಬಿನಾಳದಲ್ಲಿ ಜನಸಿದರು. ಜಾತಿ ಪದ್ಧತಿ ಹೊಡೆದೊಡೆಸಲು ವೈಚಾರಿಕ ಕ್ರಾಂತಿ ಮೂಲಕ ತಮ್ಮ ವಚನಗಳ ಮೂಲಕ ಅನುಭವ ಮಂಟಪದ ಕಾರ್ಯದರ್ಶಿಯಾಗಿ ತಮ್ಮ ಕಾಯಕವನ್ನು ಪ್ರಮಾಣಿಕತೆಯಿಂದ ನಿರ್ವಹಿಸಿ ಜನರಿಗೆ ಅರಿವನ್ನು ಮೂಡಿಸುವುದರ ಮೂಲಕ ತಮ್ಮ ಸಾಮಾಜಿಕ
ಕಾರ್ಯವನ್ನು ನಿರ್ವಹಿಸಿದ್ದರು.
ಹಡಪದ ಸಮಾಜ ಆರ್ಥಿಕವಾಗಿ ಹಿಂದುಳಿದ ಕಾರಣ ಅವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೈಕ್ಷಣಿಕ ರಾಜಕೀಯ ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಸರ್ಕಾರ ತನ್ನ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಸಮಾಜದಲ್ಲಿ ಹೆಚ್ಚಿನ ಜನರು ಶಿಕ್ಷಣವಿಲ್ಲದೇ ಉದ್ಯೋಗವಿಲ್ಲದೆ ವಂಶಪರಂಪರೆಯಾಗಿ ಸಮಾಜದ ತಮ್ಮ ವಂಶ ಪರಂಪರೆ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ನಮ್ಮ ಗಂಗಾವತಿ ಜನಪ್ರಿಯ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಇವರ ಗಮನಕ್ಕೆ ಹಡಪದ ಅಪ್ಪಣ್ಣ ಸಮಾಜದವರಿಗೆ ತಮ್ಮ ಅನುದಾನದಲ್ಲಿ ಸಹಾಯ ಮಾಡಲಕ್ಕೆ ಹೇಳುತ್ತೇನೆ ಎಂದು ಭರವಸೆ ನೀಡಿದರು,
ಕಾರ್ಯಕ್ರಮದ ದಿವ್ಯ ಸಾನಿದ್ಯ ಶ್ರೀ ವೇ ಮೂ.ಭುವನೇಶ್ವಪ್ಪ ತಾತನವರು ಬೃಹನ್ಮಠ ಸುಳೇಕಲ್,ಶ್ರೀ ಸಿದ್ದಯ್ಯಸ್ವಾಮಿ ಗುರುವಿನ್ ಮಠ ಬಸಾಪಟ್ಟಣ,
ನಂತರ ಮಾತನಾಡಿದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಶಿವಶರಣ ಹಡಪದ ಅಪ್ಪಣ್ಣನವರ 250 ಕ್ಕಿಂತ ಹೆಚ್ಚಿನ ವಚನಗಳು ಲಭಿಸಿವೆ. ಇವರ ವಚನಗಳಲ್ಲಿ ಸಾಕಷ್ಟು ಅನುಭವ ಸಂದೇಶಗಳು ಇವೆ.ಇಂತಹ ಶರಣ ವಿಚಾರಗಳನ್ನು ಅಂತರಂಗದಿಂದ ಸ್ವೀಕಾರ ಮಾಡಿ ಅವರ ಆಚಾರ ವಿಚಾರ ತತ್ವ ಮಾರ್ಗದಲ್ಲಿ ನಡೆಯಬೇಕು ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿದ್ದಾಗ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪನ್ಯಾಸವನ್ನು ಸಹ ಶಿಕ್ಷಕಿಯಾದ ಹೆಚ್.ನಾಗರತ್ನ ನಾಗರಾಜ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಪ್ಪ ಸರಿಗಮ, ಗಂಗಾವತಿ ತಾಲೂಕು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ನಿರುಪಾದಿ ಕೇಸರಹಟ್ಟಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಚಂದ್ರಶೇಖರ ಹಿರೂರು,ಗ್ರಾಮೀಣ ಘಟಕ ಅಧ್ಯಕ್ಷ ಡಿ.ಕೆ.ಆಗೋಲಿ,ನಗರಸಭೆ ಸದಸ್ಯ ನವೀನಕುಮಾರ ಪಾಟೀಲ್, ಸಮಾಜದ ಮುಖಂಡರಾದ ಶಿವಣ್ಣ ನಿಲಕಮಲ್,ವಿಕ್ರಮ ಪಾಟೀಲ್, ಶರಣಬಸವ,ಹೆಚ್.ಎಂ.ಮಂಜುನಾಥ, ದುರಗೇಶ ದೊಡ್ಡಮನಿ,
ಚಂದ್ರು ಕನಕಗಿರಿ, ಶರಣು ಹೆಚ್,ಭಂದ್ರಿ,ಯಮನೂರ,ನಗರಾಜ,ವಿರೂಪಾಕ್ಷಿ,ಅಶ್ವಿನಿ ಹೆಚ್, ಹಾಗೂ ಸಮಾಜದ ಎಲ್ಲಾ ಹಿರಿಯರು ಮಹಿಳೆಯರು ಯುವ ಮುಖಂಡರು ಸೇರಿದಂತೆ ಇತರರು ಇದ್ದರು