The bandh has reached Tiptur in the Kalpataru district. Student commuters' protest.

ತಿಪಟೂರು. ಕೆಎಸ್ಆರ್ಟಿಸಿ ಬಸ್ ಮುಷ್ಕರದ ಹಿನ್ನೆಲೆ ಬಹುತೇಕ ಜಿಲ್ಲೆ ನಗರ ಗ್ರಾಮಾಂತರಗಳಲ್ಲಿ ಬಸ್ ಸಂಚಾರ ಬಂದ್
ಅದೇ ರೀತಿ ಕಲ್ಪತರು ನಾಡು ತಿಪಟರಿಗೂ ಬಂದ್ ಬಿಸಿ ತಟ್ಟಿದೆ . ಹಬ್ಬದ ದಿನಗಳಲ್ಲೇ ಜನರಿಗೆ ಇದು ಬಿಗ್ ಶಾಕ್ ಆಗಿದೆ.
ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ
ಸರ್ಕಾರಕ್ಕೆ ಜೊತೆ ಸಭೆ ಮೇಲೆ ಸಭೆ ನಡೆದ್ರೂ ಬೇಡಿಕೆ ಈಡೇರಿಸಿಲ್ಲ ಹೀಗಾಗಿ ಇಂದು ಆಗಸ್ಟ್ 5ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ
ಸಾರಿಗೆ ಬಸ್ ಬಂದ್ ಹಿನ್ನೆಲೆ ರಾಜ್ಯದ ಹಲವೆಡೆ ಬಸ್ಗಳಿಲ್ಲದೆ ಜನ ಪರದಾಡುವಂತೆ ಆಗಿದೆ.
ಬಸ್ ಬಂದ್ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಸ್ಗಳಿಲ್ಲದೇ ಜನರು ಖಾಸಗಿ ಬಸ್ ಆಟೋಗಳ ಮೊರೆ ಹೋಗ್ತಿದ್ದಾರೆ. ಮುಕ್ಕಾಲು ಗಂಟೆ ಕಾದ್ರು ಬಸ್ ಸಿಗ್ತಿಲ್ಲ ಅಂತ ಗೊಣಗುತ್ತಿರುವ ಜನ ಆಟೋದಲ್ಲಿ ಪ್ರಯಾಣ ಮಾಡ್ತಿದ್ದಾರೆ.
ನಗರಗಳಿಗೆ ಮಾತ್ರ ಖಾಸಗಿ ಬಸ್ ಇದ್ದು, ಹಲವು ಜಿಲ್ಲೆಗಳ ಹಳ್ಳಿ ಜನರ ಕಥೆ ಹದೋಗತಿಯಾಗಿದೆ.
ಇಂದು ಸಾರಿಗೆ ಬಸ್ ಬಂದ್; ರಸ್ತೆಗೆ ಇಳಿಯೋ ಮುನ್ನ ಎಚ್ಚರ; ಬಸ್ಗಳಿಲ್ಲದೇ ಬಿಕೋ ಅಂತಿದೆ ನಿಲ್ದಾಣ
ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸುತ್ತಾರ ಎಂದು ಕಾದು ನೋಡಬೇಕಾಗಿದೆ
ವರದಿ ಮಂಜು ಗುರುಗದಹಳ್ಳಿ