Short elocution competition on Lord Ganesha on the occasion of Ganesh festival: President Ashok Gurukoti.

ಗಂಗಾವತಿ:ತಾಲೂಕ ಚುಟುಕು ಸಾಹಿತ್ಯ ಪರಿಷತ್ತು ಗಣೇಶನ ಹಬ್ಬದ ಪ್ರಯುಕ್ತ ಗಣೇಶನ ಕುರಿತು ರಾಜ್ಯಮಟ್ಟದ ಉಚಿತ ಚುಟುಕು ಅಥವ ಹನಿಗವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾವತಿ ಚುಟುಕು ಸಾಹಿತ್ಯನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಸ್ವರಚಿತ 3 ಚುಟುಕು ಅಥವಾ ಹನಿಗವನಗಳನ್ನ ಬಿಳಿ ಹಾಳಿಯ ಒಂದು ಕಡೆ ದಿನಾಂಕ: 22-08-2025 ರೊಳಗಾಗಿ ಬರೆದು ಕಳಿಸಬೇಕು. ಈ ಮುಂಚೆ ಎಲ್ಲಿಯೂ ಪ್ರಕಟಗೊಂಡಿರಬಾರದು. ತಮ್ಮ ಕವಿತೆಗಳನ್ನು ಹಿರಿಯ ಸಾಹಿತಿಗಳಿಂದ ವಿಮರ್ಷಿಸಿ ಉತ್ತಮ ಕವಿತೆಗಳನ್ನು ಪ್ರಥಮ, ದ್ವಿತಿಯ, ತೃತಿಯ ಎಂದು ಆಯ್ಕೆ ಮಾಡಲಾಗವುದು. ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ಮುಂದೆ ಸಾಹಿತ್ಯ ಪರಿಷತ್ತನಿಂದ ನಡೆಯುವ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.ಸ್ಪರ್ಧೆ ಮುಕ್ತವಾಗಿದ್ದು ಯಾವುದೇ ವಯೋಮಾನ ಮಿತಿ ಇರುವುದಿಲ್ಲ. ಸ್ಪರ್ಧಾಳುಗಳು ಕನ್ನಡದಲ್ಲಿ ತಮ್ಮ ಹೆಸರು ವಿಳಾಸ ವಯಸ್ಸು ವ್ಯಾಟ್ಸಪ್ ಪೋನ್ ನಂಬರನ್ನು ಮರೆಯದೆ ಬರೆದು ಕಳಿಸಬೇಕು.ನೀವು ಕವಿತೆಗಳನ್ನು ಬರೆದು ಕಳಿಸಬೇಕಾದ ವಿಳಾಸ. ಅಶೋಕ ಗುಡಿಕೋಟಿ.ಅದ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ವಿರುಪಾಪೂರ ನಗರ ಆಂಜನೇಯ ಗುಡಿಹತ್ತಿರ.ಗಂಗಾವತಿ 583227. ದೂರವಾಣಿ ಸಂಖ್ಯೆ:
9972723406.8660161435. ಈ ಮೇಲಿನ ವಿಳಾಸಕ್ಕೆ ಸಂಬಂಧಿಸಿದ ತಮ್ಮ ಕವಿತೆಗಳನ್ನು ಕಳಿಸಿ ಕೊಡಬೇಕೆಂದು ಕೋರಿದ್ದಾರೆ.


