Achievement in the field of media: State level Madhyam Shri Award given to Bangarappa C. Hanur.

ಬೆಂಗಳೂರುನಲ್ಲಿ ಲೇಖಕ ಹಾಗೂ ಸಾಹಿತಿ ಡಿ. ವಿ ಜಿಯವರ ಹೆಸರಿನಲ್ಲಿ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘವು ನೀಡಲಾಗುವ ಮಾದ್ಯಮ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತುಮಕೂರು ನೊಣವಿನ ಕೆರೆ ಶ್ರೀ ಕಾಡು ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಡಾ. ಕರಿ ವೃಷಭ ದೇಶಿ ಕೇಂದ್ರ ಶಿವ ಯೋಗೀಶ್ವರ ಮಹಾಸ್ವಾಮಿಗಳು, ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ಅವದೂತರಾದ ವಿನಯ್ ಗುರೂಜಿ, ಬೇರು ಗುಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು , ಅರಣ್ಯ ಸಚಿವ ಈಶ್ವರ ಖಂಡ್ರೆ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ. ಎನ್. ಮಹೇಶ್, ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ, ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಕಾನೂನು ಸಲಹೆಗಾರರಾದ ಅಮೃತೇಶ್,ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಗಣ್ಯರುಗಳಾದ ಮಾಜಿ ಸಚಿವರಾದ ಪಿ ಜಿ ಆರ್ ಸಿಂಧ್ಯ ಹಾಗೂ ಹೆಸರಾಂತ ವಿಶ್ಲೇಷಕರು ಪತ್ರಕರ್ತರು ಹಾಗೂ ಉದ್ಯಮಿಗಳಾದ ಗಿರೀಶ್ ಲಿಂಗಣ್ಣ ರವರ ಜೋತೆಯಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ರಾಜಶೇಖರ್, ಉಪಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ, ಇನ್ನೋರ್ವ ಉಪಾಧ್ಯಕ್ಷರಾದ ಟಿ. ಪಿ ಕೃಷ್ಣನ್ ,ರಾಜ್ಯ ಸಮಿತಿ ಸದಸ್ಯರುಗಳಾದ ಕೊಪ್ಪಳದ ಮಲ್ಲಿಕಾರ್ಜುನ ,ರಾಮನಗರದ ರೂಪೇಶ್ ಕುಮಾರ್ ಮತ್ತಿತರರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಪ್ಪ ಸಿ ಹನೂರು ರವರ ಪರಿಚಯ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾಡಂಚಿನ ಕರ್ನಾಟಕದ ಗಡಿಪ್ರದೇಶವಾದ ಪೊನ್ನಾಚಿ ಗ್ರಾಮ ಪಂಚಾಯತಿಯ ಅಸ್ತೂರುಗ್ರಾಮದಲ್ಲಿನ ಗೌಡರ ಮನೆತನದಲ್ಲಿ ಹುಟ್ಟಿ ಶ್ರೀ ಮತಿ ಕೆಂಪಮ್ಮ ಮತ್ತು ಚಿಕ್ಕರಂಗೇಗೌಡರ ಏಳು ಜನ ಮಕ್ಕಳಲ್ಲಿ ಕೊನೆಯ ಪುತ್ರರಾಗಿ ಜನಿಸಿ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಹುಟ್ಟುರಿನಲ್ಲಿ ಪ್ರಾರಂಭಿಸಿ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಮುಂದುವರಿಸಿದ ನಂತರ ಬೆಂಗಳೂರಿನಲ್ಲಿ ಬಿ ಎ, ಡಿಪ್ಲೋಮಾ ಇನ್ ಜರ್ನಲಿಸಮ್ . ಮುಗಿಸಿಲಾಯಿತು ,ವೃತ್ತಿ ಜೀವನವನ್ನು ಬೆಂಗಳೂರಿನಲ್ಲಿ ಶುರುಮಾಡಿ ರಾಮನಗರ ಜಿಲ್ಲೆ,ಮೈಸೂರು ಜಿಲ್ಲೆ ಸೇರಿದಂತೆ ಪ್ರಸ್ತುತ ಚಾಮರಾಜನಗರ ಜಿಲ್ಲೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ,
ಸೇವೆ ಮಾಡಿದ ಪತ್ರಿಕೆಗಳು ಕನ್ನಡ ಪ್ರಭ. ಹಲೋಮೈಸೂರು . ಕನ್ನಡ ಜನಮನ. ಹೊಸದಿಗಂತ , ಪ್ರಜವಾಹಿನಿ , ಲೈಪ್ 360. ದೆಹಲಿಯ ಕೃಷಿ ಜಾಗರಣೆ ವಾರಪತ್ರಿಕೆ . ಚಾಮರಾಜನಗರ ಪಬ್ಲಿಕ್ ವಾಯ್ಸ್ , ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಸಿಟಿ ಹೈಲೆಟ್ಸ್ ಆಂಗ್ಲ ಮಾದ್ಯಮ ದಿನ ಪತ್ರಿಕೆ ,ಮಧುರ ಪ್ರಭ ದಿನಾಪತ್ರಿಕೆ . ಹಾಗೂ ಚಾಮರಾಜನಗರ ಪಬ್ಲಿಕ್ ವಾಯ್ಸ್ ಕನ್ನಡ ದಿನ ಪತ್ರಿಕೆಗಳಲ್ಲಿ ,ಕಲ್ಯಾಣಸಿರಿ ವೆಬ್ ನ್ಯೂಸ್ ಪತ್ರಿಕೆಯಲ್ಲಿ ವರದಿಗಾರಿಕೆಯನ್ನು ಮಾಡುತ್ತ ಪ್ರಸ್ತುತ
ಕಾರ್ಯನಿರ್ವಹಿಸುತ್ತಿದ್ದು . ರಾಜ್ಯ ಮಟ್ಟದ
ಪತ್ರಕರ್ತರ ಸಂಘಗಳಾದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅನುಭವಿ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ಯುತ ಮಲ್ಲಪ್ಪ ಯಡದೊರೆಯವರ ಒಡನಾಟದಲ್ಲಿ ಹನೂರು( ಕೊಳ್ಳೇಗಾಲ) ತಾಲ್ಲೂಕು ನಿರ್ದೇಶಕರಾಗಿ ಪ್ರಾರಂಭಿಸಿ ,ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಗೌರವ ಅಧ್ಯಕ್ಷರಾಗಿ ,ತಾಲ್ಲೂಕು ಘಟಕದ ಅಧ್ಯಕ್ಷರಾಗಿ ,ಜಿಲ್ಲಾಧ್ಯಕ್ಷರಾಗಿ , ರಾಜ್ಯಸಮಿತಿ ಸದಸ್ಯರಾಗಿ . ಪ್ರಸ್ತುತ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದು ಗೌರವಾನ್ವಿತ ಪ್ರತಿಭಾವಂತ ರಾಜ್ಯಧ್ಯಕ್ಷರಾದ ಜಿ .ಎಮ್ ರಾಜಶೇಖರ್ ರವರ ಮಾರ್ಗದರ್ಶನದಲ್ಲಿ ರಾಜ್ಯ ಸಮಿತಿಯ ಸದಸ್ಯರಾಗಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು .
ತಮ್ಮ ಪತ್ರಿಕ ವರದಿಗಾರಿಕೆಯ ವೃತ್ತಿ ಜೀವನದ ಜೊತೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದರಿಂದ ಹಲವಾರು ಸನ್ಮಾನ ಪತ್ರಗಳ ಜೊತೆಯಲ್ಲಿ ಪ್ರಶಸ್ತಿಗಳನ್ನು ಪಡೆದುಕೊಳ್ಳಲಾಗಿದೆ ,ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಮಂತ್ರಿಗಳಾದ ಸದಾನಂದ ಗೌಡರಿಂದ ಅವರ ಅವಧಿಯಲ್ಲಿ ಸನ್ಮಾನಕ್ಕೆ ಭಾಜನರಾಗಿದ್ದು . ಪತ್ರಿಕ ವೃತ್ತಿಯನ್ನು ಸುಮಾರು ಹದಿನೆಂಟು ವರ್ಷಗಳ ಕಾಲ ಜಾಹಿರಾತು. ಪ್ರಸರಣ . ವರದಿಗಾರಿಕೆ ಸೇರಿದಂತೆ,ದೆಹಲಿಯ ವಾರ ಪತ್ರಿಕೆಯಲ್ಲಿ ಮೈಸೂರು ಬ್ಯೂರೊ ಮುಖ್ಯಸ್ಥರಾಗಿ , ಜಿಲ್ಲಾ ವರದಿಗಾರರಾಗಿ ಹಾಗೂ ವಿವಿಧ ಆಯಾಮದಲ್ಲಿ ಪತ್ರಿಕ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ .