District Magistrate Nitish K visits Raichur airport construction site; inspects

ರಾಯಚೂರು ಆಗಸ್ಟ್ 01 (ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆಗಸ್ಟ್ 1ರಂದು, ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಉದ್ದೇಶಿತ ಸ್ಥಳವಾದ ಯರಮರಸ್ ಹೊರವಲಯದ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಪ್ರಸ್ತುತ ವಿಮಾನ ನಿಲ್ದಾಣದ ಬಾಂಡರಿ ನಿರ್ಮಾಣ ಕಾಮಗಾರಿ ಹಾಗೂ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡಕ್ಕೆ ಬುನಾದಿ ಫೂಟಿಂಗ್ ಹಾಕುವ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು.
ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಪ್ರಸ್ತಾಪಿಸಿರುವ ರನ್‌ವೇ, ಸಿಆರ್‌ಎಫ್ ಕಟ್ಟಡ, ಎಟಿಸಿ ಕಟ್ಟಡ ಮತ್ತು ಮಾಸ್ಟರ್ ಪ್ಲಾನ್‌ದಲ್ಲಿ ತೋರಿಸಿದಂತೆ ಸದರಿ ಸ್ಥಳದ ವೀಕ್ಷಣೆ ನಡೆಸಿದರು.
ಕಾಮಗಾರಿಯ ಪ್ರಗತಿಯ ಬಗ್ಗೆ ಇದೆ ವೇಳೆ ಗುತ್ತಿಗೆದಾರರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಯನ್ನು ತ್ವರಿತಗೊಳಿಸಿ ಬೇಗನೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ, ಮಹೇಶಕುಮಾರ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ಎಂಜಿನಿಯರು ಇದ್ದರು.