Don't ask for alms from a stone, donate to the hungry: Basavarajappa Sharanaru.
ಸಿರಿಗೇರಿ : ಆಹಾರ, ಗಾಳಿ, ಬೆಳಕು, ನೀರು ಇವುಗಳು ಪ್ರಾಕೃತಿಕವಾಗಿ ದೊರೆಯುವ ವಸ್ತುಗಳು ಇವುಗಳನ್ನ ಸದ್ಬಳಕೆ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರು ಮಾಡಿದ ಹಳೆಯ ಮೌಢ್ಯಗಳನ್ನು ತ್ಯಜಿಸಿ ಪ್ರಾತ್ಯಕ್ಷಕವಾಗಿ, ವೈಜ್ಞಾನಿಕವಾಗಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಎಂದು ವೆಂಕಟಾಪುರದ ಬಸವರಾಜಪ್ಪ ಶರಣರು ತಿಳಿಸಿದರು.

ಅವರು ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವ ಬಳಗದ ಟ್ರಸ್ಟ್ ವತಿಯಿಂದ ಅರಿವು ಎಂಬ ಕಾರ್ಯಕ್ರಮದಲ್ಲಿ ವಿಚಾರವನ್ನು ತಿಳಿಸಿದರು.
ನಾವೇ ಸೃಷ್ಟಿ ಮಾಡಿದ ಕಲ್ಲಿನ ನಾಗದೇವತೆಗಳಿಗೆ ಹಾಲೆರೆದರೆ ಹಾಲು ಮಣ್ಣು ಪಾಲಾಗುತ್ತದೆ. ಹಾವಿಗೆ ಹಾಲೆರೆದರೆ ಸಾಯುತ್ತದೆ. ಅದಕ್ಕೆ ಗಾಳಿಯೇ ಆಹಾರ ಸಾವಿರಾರು ನಿರ್ಗತಿಕರಿಗೆ ಹಾಲನ್ನು ನೀಡಿದರೆ ಹಸಿವು ನೀಗುತ್ತದೆ. ದೇವರ ಹೆಸರುಗಳಲ್ಲಿ ದುರ್ವಿನಿಯೋಗ ಮಾಡಬೇಡಿ. ವಿದ್ಯಾರ್ಥಿಗಳು ತಿಳುವಳಿಕೆಯಿಂದ ನಡೆದುಕೊಳ್ಳಬೇಕು. ಸತತ ಪ್ರಯತ್ನ, ಆತ್ಮವಿಶ್ವಾಸದಿಂದ ಕಾರ್ಯವನ್ಮುಖ ವಾಗಬೇಕು ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಶಿಕ್ಷಕರ ಎನ್ ಪಂಪಾಪತಿ ಬಸವೇಶ್ವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವ ಬಳಗದ ಗ್ರಾಮ ಘಟಕದ ಅಧ್ಯಕ್ಷರಾದ ಶಶಿಧರ್ ಗೌಡ ಮಾತನಾಡಿ ಇಂದಿನ ಮಕ್ಕಳು ನಾಳಿನ ಪ್ರಜೆಗಳು ಈಗಿನಿಂದಲೇ ಒಳ್ಳೆಯ ಯೋಚನೆ, ಅಭ್ಯಾಸಗಳನ್ನು ರೂಢಿಸಿ ಕೊಳ್ಳಿ ಎಂದರು.
ನಂತರ ಎಲ್ಲಾ ಮಕ್ಕಳಿಗೆ ಹಾಲನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಎನ್ ಪಂಪಾಪತಿ ಬಸವ ಬಳಗದ ಸದಸ್ಯರಾದ ಬಸವರಾಜ್ ಗೌಡ, ವೀರೇಶ್ ಗೌಡ, ಹೆಚ್ ಎರ್ರೆಪ್ಪ, ಎಂ ಪಂಪನಗೌಡ, ಆರ್ ಯಲ್ಲನಗೌಡ, ಗುಂಡಿಗನೂರು ಯಲ್ಲನಗೌಡ, ಹೊಸಳ್ಳಿ ಚಂದ್ರಶೇಖರ್ ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳಾದ ಹಳ್ಳಿ ಮರದ ನಾಗರಾಜ್, ಶಿವಾಜಿ ರಾವ್, ಪುನೀತ್, ಶಿಕ್ಷಕರಾದ ಮಹಾಬಲೇಶ್, ರಂಜಿತ್ ಕುಮಾರ್ ಇದ್ದರು.
ವೆಂಕಟಪುರದ ಬಸವರಾಜಪ್ಪ ಶರಣರು ಅರಿವು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಮುಖರಾದ ಬಸವರಾಜ್ ಗೌಡ, ಹೆಚ್ ಎರ್ರೆಪ್ಪ, ವೀರೇಶ್ ಗೌಡ ಇದ್ದರು.