Breaking News

ಶ್ರಾವಣ ಮಾಸದ ಪ್ರಯುಕ್ತ ಭಜನಾ ಕಾರ್ಯಕ್ರಮ

Bhajan program on the occasion of Shravan month

ಕಾರಟಗಿ : ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶರಣಬಸವೇಶ್ವರರ ಭಜನಾ ಮಂಡಳಿಯಿಂದ ಒಂದು ತಿಂಗಳ ಕಾಲ, ಪ್ರತಿದಿನವೂ ಗ್ರಾಮದ ಮುಖ್ಯ ಬೀದಿಗಳು ಹಾಗೂ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿ ಮಾಡುವ ಭಜನಾ ಕಾರ್ಯಕ್ರಮಕ್ಕೆ ಪಂಚಮಿಯ ದಿನದಂದು ಗ್ರಾಮದ ವಿರಕ್ತಮಠದ ಪೂಜ್ಯಶ್ರೀ ಸಿದ್ದೇಶ್ವರರ ಹಾಗೂ ಅಗ್ನಿಗುಂಡ ದ್ಯಾವಮ್ಮ ದೇವಿಯ ಆರಾಧಕರಾದ ಭೀಮೇಶಪ್ಪ ಅಜ್ಜನವರ ಆಶೀರ್ವಾದದ ಮೂಲಕ ಚಾಲನೆ ನೀಡಲಾಯಿತು.

ಜಾಹೀರಾತು

ಈ ಸಂದರ್ಭದಲ್ಲಿ ಬಸವೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಮಹಾಶರಣಪ್ಪ ಶಿವಪೂಜೆ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ನಮ್ಮ ಗ್ರಾಮದಲ್ಲಿ ಎಂದಿನಂತೆ ಬೆಳ್ಳಂಬೆಳಗ್ಗೆ ಎದ್ದು ಮಡಿ ಸ್ನಾನವನ್ನು ಮಾಡಿ ಭಜನೆ ಮಾಡುತ್ತಾ ಗ್ರಾಮದ ಬೀದಿ ಬೀದಿಗಳಲ್ಲಿ ತೆರಳಿ ಎಲ್ಲಾ ದೇವಸ್ಥಾನಗಳಿಗೆ ದೀಪಾ ಬೆಳಗಿಸಿ ಗ್ರಾಮದ ಜನರಿಗೆ ಒಳಿತನ್ನು ಮಾಡಲಿ ಮಳೆ ಮತ್ತು ಬೆಳೆಯು ಉತ್ತಮ ರೀತಿಯಿಂದ ಬಂದು ರೈತ ಸಮೃದ್ಧಿಯಿಂದ ಜೀವನ ಮಾಡುವಂತಾಗಲಿ ಗ್ರಾಮಕ್ಕೆ ಯಾವುದೇ ರೋಗರುಜ್ಜಿನಗಳು ಬಾರದಂತೆ ಕಾಪಾಡುವಂತೆ ಆರಾಧ್ಯ ದೈವ ಶರಣಬಸವೇಶ್ವರರ ಹಾಗೂ ದೈವಿ ಸ್ವರೂಪರಾದ ಪೂಜ್ಯಶ್ರೀ ಸಿದ್ದೇಶ್ವರ ಹಾಗೂ ಭೀಮೇಶಪ್ಪಜ್ಜನವರ ಆಶೀರ್ವಾದ ಹಾಗೂ ಗ್ರಾಮದ ಜನರ ಸಮ್ಮುಖದಲ್ಲಿ ಭಜನೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಈಶಪ್ಪ ಸಿಂಗಾಪುರ, ಚಂದ್ರಪ್ಪ ಕಳಸ, ಮಲ್ಲನಗೌಡ ಮಾಲಿಪಾಟೀಲ್, ವೀರೇಶಪ್ಪ ಹತ್ತಿನ್, ಅರಳಳ್ಳಿ ವಿರೇಶಪ್ಪ, ಪ್ರಶಾಂತ ಶಿವಪೂಜಿ, ಸೇರಿದಂತೆ ಊರಿದ ಗುರು ಹಿರಿಯರು, ಮಹಿಳೆಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

About Mallikarjun

Check Also

screenshot 2025 07 28 19 52 51 27 6012fa4d4ddec268fc5c7112cbb265e7.jpg

ಸಚಿವರ ನಿರ್ಲಕ್ಷ್ಯ ರೈತರ ಆಕ್ರೋಶ.

Farmers' anger over minister's negligence. ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪುನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.