The struggle of the civil servants has entered its eighth day.

ಕಾರಟಗಿ ಪುರಸಭೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸ್ವಚ್ಚತಾ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ನೇರಪಾವತಿಗೆ ಒಳಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ ಎಂಟನೇ ದಿನಕ್ಕೆ ಮುಂದುವರೆದಿದೆ ಎಂದು AICCTU ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ನಮ್ಮ CPIML ಪಕ್ಷದ ಸಂಸ್ಥಾಪಕರಾದ ಚಾರು ಮಂಜುದಾರ್ ಅವರ ಹುತಾತ್ಮ ದಿನವಾಗಿದೆ ಅವರ ಹುತಾತ್ಮ ದಿನಾಚರಣೆಯನ್ನು ಕಾರಟಗಿಯ ಸ್ವಚ್ಚತಾ ಕಾರ್ಮಿಕರನ್ನು ನೇರಪಾವತಿ ಒಳಪಡಿಸಿ ಎಂದು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಮಾಡುತ್ತಿರುವುದು ಅದು ಕೂಡ ಮಹಾತ್ಮ ಗಾಂಧಿ ಜೀ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ಪೋಟೋ ಗಳ ಜೊತೆಗೆ ಮಾಡುತ್ತಿರುವುದು ಒಂದು ಹೆಮ್ಮೆಯ ವಿಷಯ.ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ನೀವೆಲ್ಲರೂ ಕೆಲಸ ಮಾಡಬೇಕು ಎಂದರು.
AICCTU ಜಿಲ್ಲಾ ಸಮಿತಿ ಸದಸ್ಯರಾದ ಸಣ್ಣ ಹನುಮಂತಪ್ಪ ಹುಲಿಹೈದರ ಮಾತನಾಡಿ ಚಾರು ಮಜುಂದಾರ್ 15 ಮೇ 1918 ರಲ್ಲಿ ಸಿಲಿಗುರಿಯಲ್ಲಿ ಪ್ರಗತಿಪರ ಭೂಮಾಲೀಕರ ಕುಟುಂಬದಲ್ಲಿ ಜನಿಸಿದ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಕಮ್ಯುನಿಸ್ಟರಾದರು ಮತ್ತು ನಂತರ ನಕ್ಸಲಿಸಂ ಅನ್ನು ಸ್ಥಾಪಿಸಿದರು.ಅವರು ತಮ್ಮ ಎಲ್ಲಾ ಹಣ,ಆಸ್ತಿ,ಸಂಪತ್ತನ್ನು ಬಡವರಿಗೆ,ದಿನ ದಲಿತರಿಗೆ ಹಂಚಿಕೆ ಮಾಡಿ ಬಡವರ ಒರ ಹಾಗೂ ಭೂಮಾಲೀಕರ ವಿರುದ್ಧ ನಿರಂತರ ಹೋರಾಟದಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡಿದ್ದರು.ಅವರನ್ನು ಬಂಧಿಸಿದ ಪೋಲಿಸ್ ನವರು ತಮ್ಮ ಠಾಣೆಯಲ್ಲಿ ಚಿತ್ರಹಿಂಸೆ ನೀಡಿ 28 ಜುಲೈ 1972 ಸಾಯುಸುತ್ತಾರೆ. ಒಬ್ಬ ಭಾರತೀಯ ಕಮ್ಯುನಿಸ್ಟ್ ನಾಯಕ, ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ನ ಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ ಅವರನ್ನು ಕಳೆದುಕೊಂಡಿದ್ದರಿಂದ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿ ಆ ನಷ್ಟ ತುಂಬಿಸ ಬೇಕಾದರೆ ನಾವೇಲ್ಲ ಅವರ ಕನಸಿನ ಭಾರತ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಜಮದಗ್ನಿ ಜೌಡ್ಕಿ,ದುರುಗಪ್ಪ,ಮಾರುತಿ,ಹನುಮಂತಿ,ಅಯ್ಯಮ್ಮ,ಮಹಾಕಾಂಳೆಮ್ಮ,ಹುಲಿಗೇಮ್ಮ,ಮರಿಯಮ್ಮ,ದುರುಗಮ್ಮ,ಕವಿತಮ್ಮಹುಲಿಗೇಮ್ಮ,ಹನುಮಮ್ಮ,ಲಕ್ಷ್ಮಮ್ಮ,ಜಲಾಲೇಮ್ಮ,ಶೇಖರಪ್ಪ ಇತರರು ಇದ್ದರೂ
