Farmers' anger over minister's negligence.

ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪುನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ ಹೊಸಕೆರೆ ಗ್ರಾಮಕ್ಕೆ ದಾಟುವ ಬ್ರಿಜ್ ಭಾನುವಾರ ಬ್ರಿಜ್ ಒಳಗಿನ ಗೋಡೆ ಕುಸಿದು ಬಿದ್ದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೋಟೆ ಕ್ಯಾಂಪ್ ಗ್ರಾಮದಿಂದ ಹೊಸಕೇರಾ ಗ್ರಾಮಕ್ಕೆ ದಾಟುವ ಬ್ರಿಜ್ ಅಪಾಯದ ಅಂಚಿನಲ್ಲಿದೆ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಶ್ರೀಮಾನ್ಯ ಸಚಿವರಾದ ಶಿವರಾಜ್ ತಂಗಡಗಿಯವರು ಕೋಟೆ ಕ್ಯಾಂಪಿನಿಂದ ಸಿಂಗನಾಳ ಗ್ರಾಮಕ್ಕೆ ರಸ್ತೆ ನಿರ್ಮಾಣ ಆಗುತ್ತಿದ್ದು ಭೂಮಿ ಪೂಜೆಗೆ ಆಗಮಿಸಿದಾಗ ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ ಹಾಗೂ ಎರಡು ಸಲ ಮನವಿ ಮಾಡಿಕೊಂಡಿದ್ದಾರೆ ಸಚಿವರು ಬ್ರಿಡ್ಜ್ ಕಾಮಗಾರಿಕೆಗೆ ನಿರ್ಲಕ್ಷಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ರೈತರು ಆಕ್ರೋಶವನ್ನು ವ್ಯಕ್ತಪಡಿಸಿದರು.
[ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಬ್ರಿಜ್ ದುರಸ್ತಿ ಆಗಿರುವುದು ರೈತರಿಗೆ ಆತಂಕ ಮೂಡಿಸಿದೆ, ಈ ಬ್ರಿಡ್ಜ್ ಸುತ್ತಮುತ್ತಿನ ಗ್ರಾಮಸ್ಥರಿಗೂ ಓಡಾಡಲು ಒಂದು ಕೇಂದ್ರ ಬಿಂದುವಾಗಿದೆ, ಸಚಿವರಿಗೂ ಭೂಮಿ ಪೂಜೆ ನೆರವೇರಿಸಲು ಬಂದಾಗ ಕಾಲುವೆಗಳಿಗೆ ನೀರಿಲ್ಲದ ಸಮಯದಲ್ಲಿ ಬ್ರಿಜ್ ಅನ್ನು ಸೇರ್ಪಡೆಸಿ ಕೊಡಿ ಎಂದು ತಿಳಿಸಲಾಗಿತ್ತು ಆದರೆ ಸಚಿವರ ಈ ಕಾಮಗಾರಿಕೆಯ ವ್ಯವಸ್ಥೆಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ]