Struggle for site registration under 94C: Former Minister B.T. Lalita Nayak
ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದಿಂದ ಸಮಾವೇಶ:

ಬೆಂಗಳೂರು,ಜು.28; ರಾಜ್ಯ ಸರ್ಕಾರ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಹಾಲಕ್ಷ್ಮಿ ನಗರ, ಮಂಜುನಾಥ ನಗರದಲ್ಲಿ 94ಸಿ ಅಡಿಯಲ್ಲಿ ನಿವೇಶನ ನೋಂದಣಿ ಮಾಡದೇ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಕೂಡಲೇ ಬಡವರಿಗೆ ನಿವೇಶನಗಳ ಹಕ್ಕುಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿನ ಮಹಾಲಕ್ಷಿ ನಗರ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದಿಂದ ರಾಮಮಂದಿರ ಆವರಣದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಡವರು, ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡುತ್ತಿದೆ. ಆದರೆ ಈ ಭಾಗದಲ್ಲಿ 94ಸಿ ಅಡಿಯಲ್ಲಿ ನಿವೇಶನ ನೋಂದಣಿ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಸರ್ಕಾರಿ ಜಾಗದಲ್ಲಿ ಬಡವರು ಮನೆ ಕಟ್ಟಿಕೊಂಡಲ್ಲಿ ಅದನ್ನು ಸಕ್ರಮ ಮಾಡಲು 94 ಸಿ ಜಾರಿಗೆ ತರಲಾಗಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಟಿಎಲ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಉಮಾದೇವಿ, ಪಂಚಶೀಲ ತಂಡದ ಸದಸ್ಯರು, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತ ರಾಮ ನಾಯಕ್, ಅಧ್ಯಕ್ಷ ಹನುಮಂತ ರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಪಾರ್ಥ, ವಿಟ್ಟಲ್ ಜಾದವ್ ರಫೀಕ್, ಸ್ನೇಹಾ ಶೆಟ್ಟಿ, ಡಾ. ಮುನಿಯಪ್ಪ, ಲಿಂಗಪ್ಪ ಲಮಾಣಿ, ವಿಜಯಕುಮಾರ್ ಅಮ್ಮನ ಗುಡ್ಡ, ಜಾನಪ್ಪ ರಾಠೋಡ್, ಡಿ ಗಿರೀಶ್ ಕುಮಾರ್, ಪುಟ್ಟಸ್ವಾಮಿ ಎಸ್.ಎಂ, ಶೀನಾ ನಾಯಕ್, ಶಾರದಾಬಾಯಿ ಮತ್ತಿತರರು ಪಾಲ್ಗೊಂಡಿದ್ದರು.