A direct proof that a tiger is born in a tiger's belly,,! Agastya Arakeri,,

ಕೊಪ್ಪಳ : ಕೊಪ್ಪಳದ ಎಸ್. ಎ ನಿಂಗೋಜಿ ಶಾಲೆಯ ಯೋಗ ಶಿಕ್ಷಕಿಯರಾದ ದೀಪಾ ಅರಕೇರಿ ಯವರು ಸುಮಾರು ಎಂಟು ಹತ್ತು ವರ್ಷಗಳಿಂದ ಯೋಗ ಶಿಕ್ಷಕಿಯಾಗಿ ಸೇವೆ ಸಲ್ಲಿಸುಸುತ್ತಾ ದೇಹ ದಂಡನೆಯ ಜೊತೆ ಉತ್ತಮ ಆರೋಗ್ಯಕ್ಕೆ ಯೋಗ ಪೂರಕ ಎಂಬುವ ಸಂದೇಶದೊಂದಿಗೆ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹ.
ಕೇವಲ ವರ್ಷಕ್ಕೆ ಒಂದು ದಿನ ಯೋಗ ದಿನಾಚರಣೆ ಉದ್ದದ್ದ ಭಾಷಣ ಹೇಳಿ, ಒಂದೇ ದಿನಕ್ಕೆ ಯೋಗ ಸೀಮಿತ ಮಾಡುವವರ ಮದ್ಯೆ ವಿಷೇಶ ವ್ಯಕ್ತೀತ್ವದೊಂದಿಗೆ ಶಾಲಾ ಮಕ್ಕಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ.
ಇವರಂತೆಯೇ ಇವರ ಇಬ್ಬರ ಮಕ್ಕಳು ಸಹ ಯೋಗ, ಕರಾಟೆ, ನೃತ್ಯದಲ್ಲಿ ಪರಿಣತಿ ಹೊಂದಿರುವುದು ಗಮನಿಸಲೇಬೇಕಾದ ಸಂಗತಿ.
ಹೌದು,, ಯಾಕೇ,,? ಅಂತಿರಾ ಈ ಮಕ್ಕಳಲ್ಲಿ ಹಿರಿಯ ಪುತ್ರ ಅಗಸ್ತ್ಯನ ವಯಸ್ಸು ಕೇವಲ ಏಳು ವರ್ಷ, ಮಗಳು ಅರ್ನಾ ಒಂದುವರೆ ವರ್ಷ ಇವರಿಬ್ಬರೂ ಶಿಕ್ಷಕಿ ದೀಪಾ ಇವರ ಮಕ್ಕಳು.
ಈ ಮಕ್ಕಳನ್ನು ನೋಡಿದರೇ ಇವರ ದೇಹದಲ್ಲಿ ಏನು ಖಂಡವೇ ಮಾತ್ರ ಇದೆಯೇ ಎಂದು ಜನ ಹುಬ್ಬೆರಿಸುವಂತೆ ನೃತ್ಯ, ಯೋಗ, ಕರಾಟೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ. ಇವರು ಹಾವಿನಂತೆ ಸುರುಳು ಹೊಡೆಯುತ್ತಾ ಕರಾಟೆ, ನೃತ್ಯ ಮಾಡುವುದನ್ನು ನೋಡಿದರೇ ಒಂದು ಕ್ಷಣ ಅವಕ್ಕಾದರೂ ಆಗಬಹುದು.
ಇವರ ಪುತ್ರ ಅಗಸ್ತ್ಯನಿಗೆ ಕರಾಟೆ ಗುರು ಅವರ ತಂದೆ ರಾಘವೇಂದ್ರ ಅರಕೇರಿ ಇವರ ಮೂಲ ವೃತ್ತಿ ಕರಾಟೆ ಮಾಸ್ಟರ್, ಪ್ರವೃತ್ತಿ ಅಗಸ್ತ್ಯವಾಣಿ ದಿನ ಪತ್ರಿಕೆ ಸಂಪಾದಕರು ಇವರ ಗರಡಿಯಲ್ಲಿ ದಿನ ನಿತ್ಯ ಪಳಗಿದ ಅಗಸ್ತ್ಯನಿಗೆ ಚಿಕ್ಕ ವಯಸ್ಸಿನಿಂದಲೇ ತಂದೆ ಪ್ರೇರಣೆ ತಾಯಿಯ ಸಹಕಾರದ ಮದ್ಯೆ ಬೆಳೆಯುತ್ತಿದ್ದಾನೆ.
2020-21ನೇ ಸಾಲಿನಲ್ಲಿ ಅಗಸ್ತ್ಯ ಎರಡು ವರ್ಷದವನಿದ್ದಾಗ ನೌಕರ ಭವನದಲ್ಲಿ ಕ್ರೀಡಾ ಶಿಬಿರದ ಸಮಾರೋಪದಲ್ಲಿ ಕರಾಟೆ ಪ್ರದರ್ಶನ ನೀಡಿ ಜನಗಳಿಂದ ಮನ್ನಣೆ ಪಡೆದು, ಗಂಗಾವತಿ ರಾಜ್ಯಮಟ್ಟದ ಮಕ್ಕಳ ಕರಾಟೆ ಸ್ಪರ್ಧೆಯಲ್ಲಿ ಕಟಾಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಹೀಗೆ ಆತನ ಪಯಣ ಸಾಗುತ್ತಾ ಅಲ್ಲಲ್ಲಿ ಪ್ರದರ್ಶನ ನೀಡುತ್ತಾ ಬಂದನು.
ಶಿವಮೊಗ್ಗದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಯೋಗ ರಂಗದಲ್ಲಿ ಮೂವತ್ತು ನಿಮಿಷಗಳ ಕಾಲ ಸುದಿರ್ಘ ಯೋಗ ಪ್ರದರ್ಶಿಸಿ ಗಿನ್ನಿಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೆರ್ಪಡೆಯಾಗಿದ್ದಾನೆ. ಚಲನಚಿತ್ರ ರಂಗದಲ್ಲಿ ಸಾಧಕ ಚಲನಚಿತ್ರಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ತುತ್ತಮ ಬಾಲ ನಟ ಪ್ರಶಸ್ತಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ಚೋಟಾ ಚಾಂಪಿಯನ್ ಇನ್ನಿತರ ಮಾದ್ಯಮಗಳ ಸುದ್ದಿ ವಾಹಿನಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾನೆ.
ಇದಲ್ಲದೇ ಕರ್ನಾಟಕ ಸರಕಾರ ಶ್ರೇಷ್ಠ ಪ್ರಶಸ್ತಿಯಲ್ಲಿ ಒಂದಾದ ಜಿಲ್ಲಾ ಮಟ್ಟದ ಶೌರ್ಯ ಪ್ರಶಸ್ತಿ ತನ್ನದಾಗಿಸಿಕೊಂಡ ಈ ಪುಟ್ಟ ಪೊರನ ಬದುಕು ಇನ್ನೂ ಉತ್ತುಂಗ ಮಟ್ಟಕ್ಕೆ ಬೆಳೆಯಲಿ ಎನ್ನುವುದು ತಂದೆ ತಾಯಿಯವರ ಹಾಗೂ ಅವರ ಸ್ನೇಹಿತ ಬಳಗದವರ ಮತ್ತು ನಮ್ಮ ಪತ್ರಿಕಾ ಮಾಧ್ಯಮ ಮಿತ್ರರ ಸದಾಭಿಲಾಷೆಯಾಗಿದೆ.
ಗುಡ್ ಲಕ್ ಕಣೋ ಅಗಸ್ತ್ಯ,,,