Dignity, respect and self-respect lie in loyalty to duty - Somashekhara Gowda Pati

ಗಂಗಾವತಿ -27-ನಮ್ಮ ಘನತೆ, ಗೌರವ ಹಾಗೂ ಸ್ವಾಭಿಮಾನ ಬೇರೆ ಎಲ್ಲಿಯೂ ಸಿಗುವ ವಸ್ತು ಅಲ್ಲ ಅದು ನಮ್ಮ ಕರ್ತವ್ಯ ನಿಷ್ಠೆಯಿಂದ ಇದ್ದಾಗ ಮಾತ್ರ ಸಾಧ್ಯ ಎಂದು ಕೊಪ್ಪಳ ಜಿಲ್ಲೆಯ ನೂತನ ಪ್ರಭಾರಿ ಶಾಲಾ ಶಿಕ್ಷಣ ಉಪನಿರ್ದೇಶಕ ಸೋಮಶೇಖರ ಗೌಡ ಪಾಟೀಲ್ ಹೇಳಿದರು. ನಗರದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರ ಪತ್ತಿನ ಸಹಕಾರ ಸಂಘ, ನೌಕರರ ಸಂಘ, ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವಗಳನ್ನು ಮೆಲಕು ಹಾಕಿ ಸಂಘಟನೆಗಳು ಇಲಾಖೆಯ ಆದೇಶಗಳ ಪೂರಕವಾಗಿವೆ. ಶೈಕ್ಷಣಿಕ ಸಂಪನ್ಮೂಲಗಳಿಗೆ ಇಲ್ಲಿ ಯಾವುದೇ ಕೊರತೆಯಿಲ್ಲ.ಸಣ್ಣ ಪುಟ್ಟ ಸಮಸ್ಯೆ ಬಂದಲ್ಲಿ ಮೀರಿ ಕೆಲಸ ಮಾಡಬೇಕು.ಹಿಂದಿನ ಹೆಜ್ಜೆಯನ್ನು ಅವಲೋಕಿಸಿ ಮುಂದೆ ಹೆಜ್ಜೆಯಿಡಬೇಕು.ಕಲಿಕೆಯಲ್ಲಿ ಯಾವುದೇ ಮಗು ಹಿಂದುಳಿದ ಮಗು ಎಂದು ಸಮಾಜದಿಂದ ಶಬ್ದ ಬರದಂತೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಸರ್ಕಾರಿ ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಉದಾಹರಣೆಗಳು ನಮ್ಮ ಮುಂದಿವೆ. ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಅಂತಹ ಸ್ಥಾನದಲ್ಲಿರುವದು ನಮ್ಮ ಭಾಗ್ಯ ನಾವೆಲ್ಲಾ ಉತ್ತಮ ದೇಶ ಕಟ್ಟುವಲ್ಲಿ ಶ್ರಮಿಸೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ ನಾವು ಗುಣಮಟ್ಟದ ಶಿಕ್ಷಣ ನೀಡುವದರ ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜನೆ ಮಾಡಿ ಉತ್ತಮ ಕಾರ್ಯ ಮಾಡುತ್ತ ಇಲಾಖೆಯ ಆದೇಶಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದೇವೆ. ಅತಿಥಿ ಶಿಕ್ಷಕರನ್ನು ಪೂರ್ಣ ಪ್ರಮಾಣದಲ್ಲಿ ತುಂಬಬೇಕು. ಶಿಕ್ಷಕರ ಬೇಡಿಕೆಗಕನ್ನು ಈಡೇರಿಸಬೇಕು, ನೆನೆಗುದಿಗೆ ಬಿದ್ದಿರುವ ಮುಕ್ಯೋಪಾಧ್ಯಾಯರ ಹುದ್ದೆಗಳಿಗೆ ಬಡ್ತಿ ನೀಡಬೇಕು. ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ನಿಯೋಜನೆ ಮಾಡಬಾರದು ಎಂದು ಮನವಿ ಮಾಡಿದರು. ಗೌರವ ಅಧ್ಯಕ್ಷ ಚಾOದಭಾಷಾ ಪ್ರಾಸ್ತಾವಿಕ ಮಾತನಾಡಿದರು.ಬಿ ಇ O ನಟೇಶ್, ಶರಣೆಗೌಡ ಪೊಲೀಸ್ ಪಾಟೀಲ್, ಬಸವರಾಜ ಮ್ಯಾಗಳಮನಿ, ಶಿವಶಂಕರ ಮಾತನಾಡಿದರು. ವಿಠ್ಠಲ್, ಅಯ್ಯಪ್ಪ, ಸಂಯೋಜಕ ರಾಘವೇಂದ್ರ,ಜಡಿಯಪ್ಪ ಹಂಚಿನಾಳ ನರಸಪ್ಪ, ಪಂಪಾಪತಿ, ಮಲ್ಲಿಕಾರ್ಜುನ ಹಟ್ಟಿ, ವಿವಿಧ ಪದಾಧಿಕಾರಿಗಳು ಮತ್ತಿತರರು ಇದ್ದರು.