Breaking News

ರೈಲ್ವೇ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ನಿಲ್ದಾಣವೆಂದು ಹೆಸರಿಡಿ,,! ಟಿ.ರತ್ನಾಕರ,,

Name the railway station as Maharishi Valmiki Station,,! T.Ratnakar,,

ವರದಿ : ಪಂಚಯ್ಯ ಹಿರೇಮಠ.

ಜಾಹೀರಾತು

ಕುಕನೂರು : ಪಟ್ಟಣದಲ್ಲಿ ನೂತನ ರೈಲ್ವೇ ನಿಲ್ದಾಣವಾಗಿದ್ದು ಅದಕ್ಕೆ ಮಹರ್ಷಿ ವಾಲ್ಮೀಕಿ ರೈಲ್ವೇ ನಿಲ್ದಾಣವೆಂದು ಹೆಸರು ನಾಮಕರಣ ಮಾಡಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರಾದ ಟಿ.ರತ್ನಾಕರ್ ಆಗ್ರಹಿಸಿದರು.

ಅವರು ಶನಿವಾರದಂದು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು ಮೂರು ವರ್ಷಗಳಿಂದ ನಮ್ಮ ಸಮಾಜದವರು ರೈಲ್ವೇ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವಂತೆ
ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದು, ಕಾರಣ ಆ ಸ್ಥಳಗಳಲ್ಲಿ ನಮ್ಮ ಸಮಾಜದವರು ಜಮೀನು ನೀಡಿದ್ದು ಒಂದು ಕಾರಣವಾದರೇ ಪಟ್ಟಣದಲ್ಲಿ ನಮ್ಮ ಸಮಾಜವನ್ನು ಗುರುತಿಸುವ ಯಾವುದೇ ಕುರುಹುಗಳಿಲ್ಲದೇ ಇರುವುದರಿಂದ ನಿಲ್ದಾಣಕ್ಕೆ ಮಹರ್ಷಿಗಳ ಹೆಸರನ್ನು ಇಡುವಂತೆ ಒತ್ತಾಯಿಸಿದರು.

ನಾವು ಯಾವುದೇ ಸಮಾಜ ಅಥವಾ ಸಮಾಜಗಳ ಮಹನೀಯರ ವಿರೋಧಿಗಳಲ್ಲಾ ನಾವು ಬಸವಣ್ಣನವರ ಜಯಂತಿಯನ್ನು ಆಚರಿಸುತ್ತೇವೆ. ವಾಲ್ಮೀಕಿ ರೈಲ್ವೇನಿಲ್ದಾಣ ಎಂದು ನಾಮಕರಣ ಮಾಡಲು ಈ ಹಿಂದೆ ಎಲ್ಲಾ ಸಮಾಜದವರು ಒಪ್ಪಿಗೆ ನೀಡಿದ್ದರು ಆದರೆ ಕುತಂತ್ರದಿಂದ ಮಂಜುನಾಥ ನಾಡಗೌಡ ವಿರೋಧಿಸುತ್ತಿರುವುದು ಸರಿಯಲ್ಲಾ ಎಂದರು.

ನಂತರ ಸಮಾಜದ ಯುವ ಮುಖಂಡ ಮುತ್ತು ವಾಲ್ಮೀಕಿ ಮಾತನಾಡಿ ನಾವು ಈ ಮೊದಲು ರೈಲ್ವೇ ನಿಲ್ದಾಣಕ್ಕೆ
ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವಂತೆ ಶಾಸಕರಿಗೂ ಹಾಗೂ ಸಂಬಂಧಿಸಿದ ಇಲಾಖೆಗೂ ಮನವಿ ಸಲ್ಲಿಸಿದ್ದರು ಕೂಡಾ ಈ ನಿಲ್ದಾಣಕ್ಕೆ ಬಸವೇಶ್ವರ ನಿಲ್ದಾಣವೆಂದು ನಾಮಕರಣ ಮಾಡುವಂತೆ ಕೆಲವೊಂದಿಷ್ಟು ಜನ ಶಾಸಕರಿಗೆ ಬೇಡಿಕೆ ಇಟ್ಟಿದ್ದು ಖಂಡನೀಯವಾಗಿದೆ ಎಂದರು.

ಮೊನ್ನೆ ಶಾಸಕ ರಾಯರಡ್ಡಿಯವರು ಐಬಿಗೆ ಬಂದಾಗ ಒಂದು ಸಂಘಟನೆಯವರು ಪಟ್ಟಣದ ಅಭಿವೃದ್ದಿಗೆ ಮನವಿ ಮಾಡಿದ್ದು ಸ್ವಾಗತಾರ್ಹ ಆದರೆ ರೈಲ್ವೇ ನಿಲ್ದಾಣಕ್ಕೆ ನಮ್ಮ ಸಮಾಜದ ಗುರುಗಳಾದ ಮಹರ್ಷಿ ವಾಲ್ಮೀಕಿಯವರ ಹೆಸರನ್ನು ಇಡದಂತೆ ಮಂಜುನಾಥ ನಾಡಗೌಡ ಎನ್ನುವ ವ್ಯಕ್ತಿ ತಾಕೀತು ಮಾಡಿದ್ದಾರೆ. ತಮಗೆ ಬೇಕಿದ್ದರೇ ಯಾವುದೇ ಹೆಸರನ್ನಿಡಲು ತಾವು ಬೇಡಿಕೆ ಇಡಬಹುದಿತ್ತು ಆದರೆ ನಮ್ಮ ಸಮಾಜ ಕೆಳ ವರ್ಗದ ಸಮಾಜವೆಂದು ಬಿಂಬಿಸುತ್ತಾ, ಮಹರ್ಷಿಯವರ ಹೆಸರನ್ನುಇಡಬೇಡಿ ಎಂದು ಹೇಳುತ್ತಿರುವುದು ಸರಿಯಲ್ಲಾ, ನಮ್ಮ ಸಮಾಜದವರ ತಾಳ್ಮೆ ಪರಿಕ್ಷೆ ಮಾಡುತ್ತಿದ್ದು ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಟಿ. ರತ್ನಾಕರ, ಸಿದ್ದು ವಾಲ್ಮೀಕಿ, ಭರಮಪ್ಪ ತಳವಾರ, ಕನಕಪ್ಪ ಬ್ಯಾಡರ, ಹಂಚ್ಯಾಳಪ್ಫ ತಳವಾರ, ಬಸನಗೌಡ ಪೋಲಿಸ್ ಪಾಟೀಲ್, ಶಿವಪ್ಪ ಸಂದಿಮನಿ, ರಾಮಣ್ಣ ಯಡ್ಡೋಣಿ, ಮಂಗಳೇಶ ಮಂಗಳೂರ, ಭರಮಪ್ಪ ತಳವಾರ, ಶ್ರೀಕಾಂತ ಬಿಳಗಿ, ರುದ್ರಪ್ಪ ಕೋಮಲಾಪೂರ, ಶಂಕ್ರಪ್ಪ ಬನ್ನಿಕೊಪ್ಪ ಮಂಜುನಾಥ ಬೆಟಗೇರಿ ಇನ್ನಿತರರು ಇದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.