Breaking News

ಪೌರ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್.

MLA M.R. Manjunath listened to the grievances of civic workers.

ಜಾಹೀರಾತು


ವರದಿ:ಬಂಗಾರಪ್ಪ ಸಿ .ಹನೂರು.
ಹನೂರು, ತಾಲೂಕಿನ ಮಲೆ ಮಹದೇಶ್ವರಬೆಟ್ಟದ ನಾಗಮಲೆ ಭವನದಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕುಂದು ಕೊರತೆಗಳನ್ನು ಶಾಸಕ ಎಂ.ಆರ್. ಮಂಜುನಾಥ್ ಆಲಿಸಿದರು.

ನಂತರ ಮಾತನಾಡಿ ಮಲೈ ಮಹದೇಶ್ವರ ಬೆಟ್ಟವು ಪ್ರಸಿದ್ಧ ಪುಣ್ಯ ಸ್ಥಳವಾಗಿದ್ದು ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದು ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಜವಾಬ್ದಾರಿ ವಹಿಸುಕೊಂಡವರು ನೋಡಿಕೊಳ್ಳಬೇಕು ಎಂದರು ತಿಳಿಸಿದರು .
ಮಲೈ ಮಹದೇಶ್ವರ ಬೆಟ್ಟದಲ್ಲಿ ಸ್ವಚ್ಚತೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ, ಪೌರ ಕಾರ್ಮಿಕರ ಮೇಲ್ವಿಚಾರಕರು ಪ್ರತಿದಿನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸ್ವಚ್ಚತೆ ಅಗತ್ಯ ಪೂರಕ ಕ್ರಮ ವಹಿಸುವ ಮೂಲಕ ದಿನಚರಿ ವರದಿ ಜೊತೆ ಕರ್ತವ್ಯ ಪಾಲನೆ ಮಾಡಬೇಕೆಂದು ಸೂಚಿಸಿದರು. ಅಲ್ಲದೆ ಪ್ರಾಧಿಕಾರದ ಕೊಠಡಿಗಳ ದಿನನಿತ್ಯದ ಸ್ವಚ್ಚತೆಗೆ ಅಧ್ಯತೆ ನೀಡಬೇಕು. ಮತ್ತು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವಂತಹ ಶೌಚಾಲಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಚೆಸ್ಕಾಂ ಇಇ ರವರಿಗೆ ದೂರವಾಣಿ ಮುಖಾಂತರ ಫೋನ್ ಕರೆಮಾಡಿ ಸಮಸ್ಯೆ ಬಗೆಯರಿಸಲು ಕ್ರಮ ಕೈ ಗೊಳ್ಳುವಂತೆ ತಿಳಿಸಿದರು.
ನಿವೇಶನ ಇಲ್ಲದ ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಖಾಯಂ ಹಾಗೂ ಹೊರಗುತ್ತಿಗೆ ನೌಕರರಿಗೆ ಅಧ್ಯತೆ ಮೇರೆಗೆ ಸ್ಥಳ ನಿಯುಕ್ತಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಕಾರ್ಯದರ್ಶಿ ರಘುರವರಿಗೆ ಸೂಚಿಸಿದರು.

ಇದೇ ಸಮಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು ಉಪ ಕಾರ್ಯದರ್ಶಿ ಚಂದ್ರಶೇಖರ್ ಲೋಕೋಪಯೋಗಿ ಇಲಾಖೆ ಎಇಇ ಚಿನ್ನಣ್ಣ ಇಂಜಿನೀಯರ್ ಸಂತೋಷ್ ಕುಮಾರ್ ಸಹಾಯಕ ಅಭಿಯಂತರರು ಕಿರಿಯ ಅಭಿಯಂತರರು ಹಾಗೂ ಸ್ವಚ್ಛತಾ ವಿಭಾಗದ ಮೇಸ್ತ್ರಿಗಳು ಹಾಗೂ ನೌಕರರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.