Kargil Victory Day grand procession led by BBC English Medium School.

ಗಂಗಾವತಿ.. ನಗರದ ಬಿಬಿಸಿ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ಶನಿವಾರದಂದು ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಬೃಹತ್ ಶೋಭಾ ಯಾತ್ರೆ ನಡೆಸಿ ಗಮನ ಸೆಳೆದರು. ಆರ್ ಜಿ ರಸ್ತೆಯ ಶಾಲಾ ಆವರಣದಿಂದ ಹೊರಟ ಶೋಭ ಯಾತ್ರೆಯು ಸಿ ಬಿ ಎಸ್ ವೃತ್ತ. ಮಹಾವೀರ ವೃತ್ತ ಗಾಂಧಿ ವೃತ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಶ್ರೀ ಕೃಷ್ಣದೇವರಾಯ ಹುತ್ತ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ ಆಯೋಜಿಸಿದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ದೇಶ ಕಾಯುವ ಯೋಧರ ಉಡುಪುಗಳನ್ನು ಧರಿಸಿ ಭಾರತ ಮಾತೆಯ ಪರವಾಗಿ ವಿವಿಧ ಘೋಷಣೆಗಳನ್ನು ಕೂಗಿದರು.
ಶಾಲಾ ಮುಖ್ಯಸ್ಥೆ ಶ್ರೀಮತಿ ಭಾರತಿ ಮಾತ ನಾಡಿ ಭಾರತ ಹತ್ತು ಹಲವಾರು ಕ್ಷೇತ್ರದಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ಅವರ ರಾಷ್ಟ್ರಗಳ ಆಕ್ರಮಣ ನೀತಿಯನ್ನು ಧೈರ್ಯ ಸಾಹಸದಿಂದ ಹಿ ಮ್ಮಟ್ಟಿಸುವ ಸಾಮರ್ಥ್ಯ ದೇಶದ ಯೋಧರನ್ನು ಒಳಗೊಂಡಿದೆ ಇಂತಹ ಸಂದರ್ಭದಲ್ಲಿ ಯೋಧರನ್ನು ಗೌರವಿಸುವುದು ಹಾಗೂ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆದ್ಯ ರೆಹಮಾನಬಿ. ವಿದ್ಯಾರ್ಥಿಗಳು ಮಾತನಾಡಿದರು. ಶಾಲಾ ಶಿಕ್ಷಕರಾದ ಸ್ವಪ್ನ ಕಲ್ಯಾಣಿ ಮಹಾಲಕ್ಷ್ಮಿ ಸಂಗಪ್ಪ ಸೇರಿದಂತೆ ಬೋಧಕ ವರ್ಗ ಹಾಗೂ ಬೋಧಕೆ ತರ ವರ್ಗದವರು ಪಾಲ್ಗೊಂಡಿದ್ದರು..