House-to-house Basava Vachana Jyoti program in Gule village

ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ, ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗು ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ,ಶ್ರಾವಣ ಮಾಸದ ನಿಮಿತ್ಯ ದಿನಾಂಕ: 26/7/2025 ರಿಂದ ಒಂದು ತಿಂಗಳ ನಿರಂತರವಾಗಿ ಮನೆಯಿಂದ ಮನೆಗ ಗುರು ಬಸವ ವಚನ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವು ದಿನಾಲು ಸಂಜೆ 6:30 ರಿಂದ ಪ್ರಾರಂಭಗೊಳ್ಳಲಿದ್ದು, ಇಂದು ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಿಂದ ಜೋತಿ ಹೊತ್ತಿಸಿಕೊಂಡು ಬಂದು , ಪ್ರತಿ ದಿನ ಮನೆಯಿಂದ ಮನೆಗೆ ತೆರಳಿ, ಕುಟುಂಬ ದವರನ್ನೆಲ್ಲರನ್ನ ಸಂಗಮಗೊಳಿಸಿಕೊಂಡು, ಗುರು ಪೂಜೆ, ಲಿಂಗ ಪೂಜೆ ನಂತರ ಬಸವಾದಿ ಶಿವಶರಣರ ಜೀವನ ಚರಿತ್ರೆಯ ಆದಿಯಾಗಿ ವಚನ ವಿಶ್ಲೇಷಣೆ ಮತ್ತು ಬಸವ ಸಂಸ್ಕೃತಿ ಹಾಗು ಶರಣರು ತೋರಿಸಿಕೊಟ್ಟ ಸತ್ಯ ಸುದ್ಧ ಕಾಯಕದ ಪರಿಕಲ್ಪನೆಯ ಕುರಿತಾಗಿ ಉಪನ್ಯಾಸ ನೀಡಿ, ಮೂಢ ನಂಬಿಕೆಗಳಂತ ಮೌಢ್ಯಾಚರಣೆಗಳಿಂದ ಪರಿವರ್ತನೆ ಮಾಡುವ ಕಾರ್ಯ ಈ ವಚನ ಜ್ಯೋತಿ ಕಾರ್ಯಕ್ರಮದ ಉದ್ದೇಶ ಆಗಿದೆ. ಕಾರಣ ಸುತ್ತ ಮುತ್ತಲಿನ ಗ್ರಾಮದ ಶರಣ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾಗಬೇಕೆಂದು ಪತ್ರಿಕೆ ಮಾಧ್ಯಮದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
“ಶರಣರು ಬರುವೆಮಗೆ ಪ್ರಾಣ ಜೀವಾಳವಯ್ಯ”
ಸ್ವಾಗತ ಬಯಸುವವರು : ರಾಷ್ಟ್ರೀಯ ಬಸವ ದಳ ಗೌರವಾದ್ಯಕ್ಷರು ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ. ಎಸ್ ಐ ಮತ್ತು ಅಕ್ಕನಾಗಲಾಂಬಿಕ ಮಹಿಳಾ ಗಣ ಹಾಗು ಯುವ ಘಟಕದ ಪದಾಧಿಕಾರಿಗಳು👏
✍️ ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ