Breaking News

ಎಕ್ಕುಂಬಿ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ದುರಸ್ತಿಗೆ ಭೂಮಿಪೂಜೆ

Groundbreaking ceremony for the repair of the Ekkumbi-Molakalmuru State Highway

ಕೊಟ್ಟೂರು ಪಟ್ಟಣದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ಎಕ್ಕುಂಬಿ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ದುರಸ್ತಿ ಕಾಮಗಾರಿಗೆ ಶಾಸಕ ನೇಮಿರಾಜನಾಯ್ಕ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೊಟ್ಟೂರು ಪಟ್ಟಣದಿಂದ ಹರಪನಹಳ್ಳಿ ರಸ್ತೆಗೆ ಹೋಗುವ ಕೆ.ಅಯ್ಯನಹಳ್ಳಿ ಗ್ರಾಮದ ನಂತರ ರಸ್ತೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆ ತುಂಬಾ ಗುಂಡಿಗಳು ನಿರ್ಮಾಣವಾಗಿದ್ದು, ಓಡಾಡಲು ತುಂಬಾ ತೊಂದರೆಯಾಗಿ ಕೆಲವೊಂದು ಅಪಘಾತಗಳೂ ಸಂಭವಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ, ಸರ್ಕಾರದಿಂದ ಅನುದಾನ ತಂದು ಭೂಮಿ ಪೂಜೆ ನೆರವೇರಿಸಲಾಗಿದೆ. ಈ ಕಾಮಗಾರಿ ಅಂದಾಜು ವೆಚ್ಚ ೧೫೦.೩೫ ಲಕ್ಷ ಲೆಕ್ಕಶೀರ್ಷಿಕೆ ೫೦೫೪ ಅಪೆಂಡಿಕ್ಸ್ ಇ ೨೦೨೫-೨೬ರಡಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿಯು ೧೫೦.೩೦೫ ರಿಂದ ೧೫೧.೧೪೧ ಕಿ.ಮೀ. ವರೆಗೆ ಆಯ್ದ ಭಾಗಗಳನ್ನು ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು. ಎರಡು ವರ್ಷಗಳಲ್ಲಿ ಅತೀ ಹೆಚ್ಚು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಗಮನ ಸೆಳೆದು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಂ.ಎಂ.ಜೆ.ಹರ್ಷವರ್ಧನ್, ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಕುಮಾರ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ ರೂಪಾ ಇದ್ದರು.

ಜಾಹೀರಾತು

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.