Special programs at Kiskinda Anjanadri on the occasion of Bhima Amavasya in the month of Ashadha…

ಗಂಗಾವತಿ. ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆ ಎಂದು ಹೆಸರಾದ ವಿಜಯನಗರ ಸಾಮ್ರಾಜ್ಯ ವ್ಯಾಪ್ತಿಯ ಆನೆಗುಂದಿಯ ಚಿಕ್ಕ ರಾಮಪುರ ಪೇಟೆಯ ಕಿಷ್ಕಿಂದ ಅಂಜನಾದ್ರಿಯಲ್ಲಿ ಆಶಾಡ ಮಾಸದ ಭೀಮನ ಅಮಾವಾಸ್ಯೆ ಹಾಗೂ ನಾಗರ ಅಮಾವಾಸ್ಯೆ ಎಂದು ಕರೆಯಲ್ಪಡುವ ಗುರುವಾರ ದಿನದಂದು ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರೇ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು.
ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಭಿಷೇಕ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ವಾಯುಸ್ತುತಿ ಪಠಣ. ಸೇರಿದಂತೆ ತುಳಸಿದಾಸರ ಶ್ರೀ ಹವಾಮಾನ ಚಾಲೀಸಾ ಸಾಮೂಹಿಕ ಪಾರಾಯಣ ಭಜನೆ ಸೇರಿದಂತೆ ಮಹಾಮಂಗಳಾರತಿ ಅನ್ನ ಸಂತರ್ಪಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಬಳ್ಳಾರಿ ವಿಜಯನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ಪುನೀತರಾದರು. ಈ ಸಂದರ್ಭದಲ್ಲಿ ಶ್ರೀ ವಿದ್ಯಾ ದಾಸ ಬಾಬಾಜಿ ಅವರು ಮಾತನಾಡಿ ಶ್ರೀ ಆಂಜನೇಯ ಅವತಾರವಾದ ಮಹಾಭಾರತ ಭೀಮಸೇನ ಹಾಗೂ ಪಂಚಪಾಂಡವರು ಧರ್ಮ ಮಾರ್ಗದಲ್ಲಿ ನಡೆದ ಪ್ರಯುಕ್ತ ಕೌರವರಿಗೆ ಸೋಲು ಉಂಟಾಗಲು ಕಾರಣವಾಯಿತು ಜೊತೆಗೆ ಪತ್ನಿ ಆದವರು ಗಂಡನ ಪಾದಪೂಜೆ ಮಾಡುವುದರ ಮೂಲಕ ಆಯುಷ್ಯವೃದ್ಧಿಗೆ ಪ್ರಾರ್ಥಿಸುವ ಅತ್ಯಂತ ಪವಿತ್ರವಾದ ದಿನವಾಗಿದೆ ಎಂದು ಹೇಳಿದರು ಎಂದು ಹೇಳಿದರು..