ಕೆರೆ ದಡದಲ್ಲಿ ಗಾಂಜಾ ಸೇವನೆ ನಿರತ ಕಾಲೇಜ್ ವಿದ್ಯಾರ್ಥಿಗಳು,,
Suspicious students taken into police custody,,! Medical examination confirmed,,

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ.
ಗಂಗಾವತಿ : ನಗರದ ಗ್ರಾಮೀಣ ಠಾಣಾ ವ್ಯಾಪ್ತಿಯ ಸಂಗಾಪೂರ ಸೀಮಾದ ಲಕ್ಷ್ಮೀ ನಾರಾಯಣ ಕೆರೆಯ ಪಕ್ಕದಲ್ಲಿ ಬುಧವಾರ ರಾತ್ರಿ 8.30ರ ಸುಮಾರಿಗೆ ಇಬ್ಬರೂ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ನಿರತರಾದ ವೇಳೆ ಪೋಲಿಸನವರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬುಧವಾರ ಖಚಿತ ಮಾಹಿತಿ ಮೆರೆಗೆ ತೆರಳಿದ ಪೋಲಿಸ್ ನವರು ಮಲ್ಲಾಪೂರ ಗ್ರಾಮದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಬಸನಗೌಡ (21) ಅಂಜನಿಗೌಡ ಹಾಗೂ ಮಲ್ಲಾಪೂರ ಗ್ರಾಮದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಕಿರಣ್ ಕುಮಾರ (20) ಹನುಮೇಶ ಎನ್ನುವ ವಿದ್ಯಾರ್ಥಿಗಳು ಗಾಂಜಾ ಸೇವನೆಯಲ್ಲಿ ನಿರತರಾಗಿದ್ದ ವೇಳೆ ಇವರನ್ನು ವಶಕ್ಕೆ ಪಡೆದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಗಾಂಜಾ ಸೇವನೆ ಖಚಿತವಾಗಿದೆ.
ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐ ವೆಂಕಟೇಶ ಚೌವ್ಹಾಣ ನೀಡಿದ ಫಿರ್ಯಾದೆ ಮೇಲೆ ದಿ.22.07.25ರಂದು ಗುನ್ನೆ ನಂ : 206/2025 ಕಲಂ : 27(b), 20(b)(ii)(A) NDPS Act-1985 ರ ಅಡಿ ದಾಖಲೆ ಮಾಡಿಕೊಂಡು ತನಿಖೆ ಕೈಗೊಂಡರು.
ತನಿಖೆಯಲ್ಲಿ ಗಾಂಜಾವನ್ನು ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಹನುಮಗೌಡ ಎಂಬಾತ ಮಾರಾಟ ಮಾಡುತ್ತಾನೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಕೂಡಲೇ ಪೋಲಿಸ್ ನವರು ತೊಂಡಿಹಾಳ ಗ್ರಾಮಕ್ಕೆ ತೆರಳಿ ವಿಚಾರಿಸಲಾಗಿ ಹೋಟೆಲ್ ಉದ್ಯೋಗಿಯಾದ ಹನುಮಗೌಡ (24) ಮಾಲಿಪಾಟೀಲ್ ಈತನನ್ನು ವಶಕ್ಕೆ ಪಡೆದು ಇತನ ಹತ್ತಿರವಿದ್ದು 34ಗ್ರಾಂ ತೂಕದ 4 ಪಾಕೆಟ್ ಗಳಲ್ಲಿ ತುಂಬಿದ ಒಣ ಗಾಂಜಾ ಅಂಕಿ ರೂ.2ಸಾವಿರ, ಮತ್ತು ಜಮೀನಿನಲ್ಲಿ ಇಟ್ಟಿದ್ದ 10 ಸಣ್ಣ ಪಾಕೆಟ್ ನಲ್ಲಿ ಇಟ್ಟಿದ್ದ 95ಗ್ರಾಂ ತೂಕದ ರೂ.5ಸಾವಿರ ಬೆಲೆ ಬಾಳುವ ಒಣ ಗಾಂಜಾ ಹೀಗೆ ಒಟ್ಟು 129 ಗ್ರಾಂ ತೂಕದ 7ಸಾವಿರ ಬೆಲೆಯ ಗಾಂಜಾವನ್ನು ಜಪ್ತಿ ಮಾಡಲಾಗಿದ್ದು ಅಪಾದಿತರ ಮೇಲೆ ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.