Lions Club distributes free glasses

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ವತಿಯಿಂದ ಜುಲೈ-೧೬ ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಜುಲೈ-೨೪ ರಂದು ಶ್ರೀರಾಮನಗರದ ಎ.ಕೆ.ಆರ್.ಡಿ ಪಿ.ಯು ಕಾಲೇಜ್ ಆವರಣದಲ್ಲಿ ಉಚಿತವಾಗಿ ೩೬೦ ಕನ್ನಡಕಗಳನ್ನು ವಿತರಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಡಾ|| ಶಿವಕುಮಾರ ಮಾಲಿಪಾಟೀಲ್, ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಹಿರಿಯ ಸದಸ್ಯರಾದ ಲ.ಗಂಗಾಧರ, ಲ.ಎನ್. ಭೈರೇಗೌಡ, ಗಂಗಾವತಿ ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಲ.ಹರಿಬಾಬು, ಆರೋಗ್ಯ ಶಿಬಿರದ ಸಂಯೋಜಕರಾದ ಲ.ಸುಬ್ರಹ್ಮಣ್ಯೇಶ್ವರರಾವ್, ಲಯನ್ಸ್ ಕ್ಲಬ್ ಗಂಗಾವತಿ ಖಜಾಂಚಿಯಾದ ಲ.ಶಿವಪ್ಪ ಗಾಳಿ, ಲ.ಆಜಾದ್ ಗನ್ನಮನಿ, ಲ.ಶಿವಕುಮಾರ ಅಂಗಡಿ, ಲ.ಗುರುಪ್ರಸಾದ, ಪಿ. ಸತ್ಯನಾರಾಯಣ, ಎ.ಕೆ.ಆರ್.ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಅಮರೇಶ ಪಾಟೀಲ್ ಸೇರಿದಂತೆ ಇತರರು, ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಣೆ ಮಾಡಿದರು.