Breaking News

ಯುವನಿಧಿ ಯೋಜನೆ: ರಾಯಚೂರ ಜಿಲ್ಲೆಗೆ ರಾಜ್ಯದಲ್ಲಿಯೇ ವಿಶೇಷ ಸ್ಥಾನ ವಿಶೇಷ ಲೇಖನ ವಿಶೇಷ ಲೇಖನ





Yuvanidhi Yojana: Raichur district has a special place in the state Special Article Special Article

  ಪ್ರತಿ ತಿಂಗಳು ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ನಿರುದ್ಯೋಗ ಭತ್ಯೆ ಕಲ್ಪಿಸುವ ಯುವನಿಧಿ ಯೋಜನೆಯು ಗಡಿ ಜಿಲ್ಲೆ ರಾಯಚೂರ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗಿದೆ. ರ‍್ಯಾಂಕಿಂಗ್ ಸ್ಥಾನದಲ್ಲಿ ರಾಜ್ಯದಲ್ಲಿಯೇ ರಾಯಚೂರ ಜಿಲ್ಲೆಯು ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದು, ಯೋಜನೆಯ ಆರಂಭದಿಂದ 2025ರ ಮೇ ಮಾಹೆವರೆಗೆ ದಾಖಲೆಯ 323640000 ರೂ.ಗಳನ್ನು ಯುವನಿಧಿಯ ಫಲಾನುಭವಿಗಳಿಗೆ ವೆಚ್ಚ ಮಾಡಲಾಗಿದೆ.
ದೇವದುರ್ಗ ತಾಲೂಕಿನಲ್ಲಿ 2612, ಲಿಂಗಸೂರ ತಾಲೂಕಿನಲ್ಲಿ 3085, ಮಾನ್ವಿ ತಾಲೂಕಿನಲ್ಲಿ 2954, ಮಸ್ಕಿ ತಾಲೂಕಿನಲ್ಲಿ 545, ರಾಯಚೂರ ತಾಲೂಕಿನಲ್ಲಿ 3443, ಸಿಂಧನೂರ ತಾಲೂಕಿನಲ್ಲಿ 4148 ಮತ್ತು ಸಿರವಾರ ತಾಲೂಕಿನಲ್ಲಿ 372 ಹಾಗೂ ಅರಕೇರಾ ತಾಲೂಕಿನಲ್ಲಿ 48 ಸೇರಿ ಒಟ್ಟು 17,207 ಅರ್ಜಿಗಳು ರಾಜ್ಯ ಸರ್ಕಾರದ ನಿರುದ್ಯೋಗ ಭತ್ಯೆ ಯೋಜನೆಗೆ ಸ್ವೀಕೃತವಾಗಿವೆ.
ಸ್ವೀಕೃತವಾದ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ 2023ರ ಜೂನ್ ಮಾಹೆಯಲ್ಲಿ ಪದವೀಧರ ಅಭ್ಯರ್ಥಿಗಳಿಗೆ 2,28,000 ರೂ., ಜುಲೈ ಮಾಹೆಯಲ್ಲಿ 62,82,500 ರೂ., ಪದವೀಧರ ಮತ್ತು ಡಿಪ್ಲೋಮಾ ಪದವೀಧರ ಅಭ್ಯರ್ಥಿಗಳಿಗೆ ಫೆಬ್ರವರಿ ಮಾಹೆಯಲ್ಲಿ 68,32,500 ರೂ., ಮಾರ್ಚ ಮಾಹೆಯಲ್ಲಿ 48,93,000 ರೂ., ಏಪ್ರೀಲ್ ಮಾಹೆಯಲ್ಲಿ 44,85,000 ರೂ., ಮೇ ಮಾಹೆಯಲ್ಲಿ 13909500 ರೂ., ಜೂನ್ ಮಾಹೆಯಲ್ಲಿ 11100000 ರೂ., ಜುಲೈ ಮಾಹೆಯಲ್ಲಿ 14826000 ರೂ., ಆಗಸ್ಟ್ ಮಾಹೆಯಲ್ಲಿ 17335500 ರೂ., ಸೆಪ್ಟೆಂಬರ್ ಮಾಹೆಯಲ್ಲಿ 19113000 ರೂ., ಅಕ್ಟೋಬರ್ ಮಾಹೆಯಲ್ಲಿ 19345500 ರೂ., ನವೆಂಬರ್ ಮಾಹೆಯಲ್ಲಿ 24927000 ರೂ., ಡಿಸೆಂಬರ್ ಮಾಹೆಯಲ್ಲಿ 23773500 ರೂ., 2025ರ ಜನವರಿ ಮಾಹೆಯಲ್ಲಿ 23008500 ರೂ., ಪೆಬ್ರವರಿ ಮಾಹೆಯಲ್ಲಿ 26736000 ರೂ., ಮಾರ್ಚ ಮಾಹೆಯಲ್ಲಿ 30697500 ರೂ., ಏಪ್ರೀಲ್ ಮಾಹೆಯಲ್ಲಿ 37525500 ರೂ. ಮತ್ತು ಮೇ ಮಾಹೆಯಲ್ಲಿ 38622000 ರೂ. ಮೊತ್ತವನ್ನು ಪಾವತಿಸಲಾಗಿದೆ.
ತಾಲೂಕುವಾರು ಪ್ರಗತಿ: ಡಿಸೆಂಬರ್ 2023 ರಿಂದ 2025ರ ಮೇ ಮಾಹೆವರೆಗೆ ದೇವದುರ್ಗ ತಾಲೂಕಿನಲ್ಲಿ ಪದವೀಧರ 15,882 ಹಾಗೂ ಡಿಪ್ಲೋಮಾ 135 ಅಭ್ಯರ್ಥಿಗಳಿಗೆ 47848500, ಲಿಂಗಸೂರ ತಾಲೂಕಿನಲ್ಲಿ ಪದವೀಧರ 20995 ಹಾಗೂ ಡಿಪ್ಲೋಮಾ 242 ಅಭ್ಯರ್ಥಿಗಳಿಗೆ 63348000., ಮಾನ್ವಿ ತಾಲೂಕಿನಲ್ಲಿ ಪದವೀಧರ 21231 ಹಾಗೂ ಡಿಪ್ಲೋಮಾ 70 ಅಭ್ಯರ್ಥಿಗಳಿಗೆ 63798000 ರೂ. ಮೊತ್ತ., ರಾಯಚೂರ ತಾಲೂಕಿನಲ್ಲಿ ಪದವೀಧರ 20410 ಹಾಗೂ ಡಿಪ್ಲೋಮಾ 310 ಅಭ್ಯರ್ಥಿಗಳಿಗೆ 61695000 ರೂ ಮೊತ್ತ., ಸಿಂಧನೂರ ತಾಲೂಕಿನಲ್ಲಿ ಪದವೀಧರ 26957 ಹಾಗೂ ಡಿಪ್ಲೋಮಾ 114 ಅಭ್ಯರ್ಥಿಗಳಿಗೆ 81042000 ರೂ.ಮೊತ್ತ, ಅರಕೇರಾ ತಾಲೂಕಿನಲ್ಲಿ ಪದವೀಧರ 100 ಹಾಗೂ ಡಿಪ್ಲೋಮಾ ಒಬ್ಬ ಅಭ್ಯರ್ಥಿಗಳಿಗೆ 401500 ರೂ.ಮೊತ್ತ, ಮಸ್ಕಿ ತಾಲೂಕಿನಲ್ಲಿ ಪದವೀಧರ 1107 ಹಾಗೂ ಡಿಪ್ಲೋಮಾ 15 ಅಭ್ಯರ್ಥಿಗಳಿಗೆ 3343500 ರೂ ಮೊತ್ತ ಹಾಗು ಸಿರವಾರ ತಾಲೂಕಿನಲ್ಲಿ ಪದವೀಧರ 750 ಹಾಗೂ ಡಿಪ್ಲೋಮಾ 9 ಅಭ್ಯರ್ಥಿಗಳಿಗೆ 2263500 ರೂ ಮೊತ್ತ ಸೇರಿಸಿ ಡಿಸೆಂಬರ್ 2023 ರಿಂದ 2025ರ ಮೇ ಮಾಹೆವರೆಗೆ ಒಟ್ಟು 323640000 ರೂ.ಗಳನ್ನು ಯುವನಿಧಿಯ ಫಲಾನುಭವಿಗಳಿಗೆ ಪಾವತಿಸಿ ಪ್ರಗತಿ ಸಾಧಿಸಲಾಗಿದೆ.

ಜಾಹೀರಾತು


ರಾಯಚೂರ ಜಿಲ್ಲೆಯು ಹಿಂದುಳಿದ ಗಡಿ ಜಿಲ್ಲೆಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಆದರೆ, ಸರಿಯಾದ ವಿದ್ಯಾಭ್ಯಾಸ ಮತ್ತು ಉದ್ಯೋಗವಕಾಶಗಳು ಸಿಗದೇ ವಂಚಿತರಾಗಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇದನ್ನರಿತು ಮಹತ್ವದ ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದಾರೆ. ಓದು ಪೂರ್ಣಗೊಳಿಸಿ ಕೆಲಸಕ್ಕೆ ಅಲೆಯುತ್ತಿದ್ದ ಪದವೀಧರ ಮತ್ತು ಡಿಪ್ಲೋಮಾದಾರರಿಗೆ ಈ ಯುವನಿಧಿ ಯೋಜನೆಯ ಭತ್ಯೆಯಿಂದಾಗಿ ಅನುಕೂಲವಾಗಿದೆ. ಪದವೀಧರರಿಗೆ ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಕಲ್ಪಿಸುವ ಯೋಜನೆಯಿಂದ ವಾರ್ಷಿಕವಾಗಿ 52,000 ಕೋಟಿ ರೂ. ಅನುದಾನವನ್ನು ರಾಯಚೂರ ಸೇರಿದಂತೆ ರಾಜ್ಯದ 2.74 ಲಕ್ಷ ಫಲಾನುಭವಿಗಳಿಗೆ 2025ರ ಜೂನ್ ಮಾಹೆವರೆಗೆ 327 ಕೋಟಿ ರೂ.ವ್ಯಯಿಸಿರುವುದು ರಾಜ್ಯ ಸರ್ಕಾರದ ಮಹತ್ಸಾಧನೆಯಾಗಿದೆ.

– ಪಾಮಯ್ಯ ಮುರಾರಿ, ಜಿಲ್ಲಾಧ್ಯಕ್ಷರು, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ರಾಯಚೂರ

ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಸಿಂಧನೂರ ತಾಲೂಕಿನಿಂದ ಅತಿ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಸಿರವಾರ, ಮಸ್ಕಿ, ಅರಕೇರಾ, ದೇವದುರ್ಗ ತಾಲೂಕುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಅರ್ಜಿಗಳು ಬಂದಿವೆ. ರಾಯಚೂರ ಜಿಲ್ಲೆಯಲ್ಲಿನ ನಿರುದ್ಯೋಗಿ ಪಧವೀಧರರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹತ್ವದ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಲಾಭ ಪಡೆದುಕೊಳ್ಳಲು ರಾಯಚೂರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

-ಜಿ.ಯು.ಹುಡೇದ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ರಾಯಚೂರು


ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಇವರ ಸಹಯೋಗದಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಯುವನಿಧಿ ಫಲಾನುಭವಿಗಳು ಯುವನಿಧಿ ಪ್ಲಸ್ ಉಚಿತ ಕೌಶಲ ತರಬೇತಿ ಪಡೆಯಲು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ವೆಬ್‌ಸೈಟ್ ಬಳಸಬಹುದಾಗಿದೆ. ಜಿಟಿಟಿಸಿ, ಕೆಜಿಟಿಟಿಐ, ಸಿಡಾಕ್, ಬಿಎಂವಿಎನ್‌ಟಿಎಫ್‌ಎಸ್‌ಎ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುತ್ತದೆ.
-ನವೀನ್ ಸಂಗೇಪಾಗ, ಜಿಲ್ಲಾ ಉದ್ಯೋಗಾಧಿಕಾರಿ, ರಾಯಚೂರು

  • ಗವಿಸಿದ್ದಪ್ಪ ಹೊಸಮನಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ, ರಾಯಚೂರ

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.