To get benefits from the government, it is possible only through community unity: Businessman Rangaswamy.


ವರದಿ:ಬಂಗಾರಪ್ಪ ಸಿ ಹನೂರು
ಹನೂರು : ಸರ್ಕಾರವು ರಾಜ್ಯದಲ್ಲಿ ಪ್ರತಿ ಜಾತಿಗೊಂದು ನಿಗಮ ಮಾಡಿದೆ ಅದರಲ್ಲಿ ಅದೇ ಜನಾಂಗವನ್ನು ಆರ್ಥಿಕವಾಗಿ ಮೆಲೆತ್ತಲು ಸಹಕಾರಿಯಾಗುತ್ತದೆ ಎಂದು ಆದರೆ ನಮ್ಮ ಭಾಗದ ಜನರು ಹೆಚ್ಚು ಸವಲತ್ತುಗಳನ್ನು ಪಡೆಯಲು ವಿಪಲವಾಗಿದ್ದೆವೆ ಇನ್ನು ಮುಂದಾದರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗೋಣ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ತಿಳಿಸಿದರು.
ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರಿನ ತಾಲ್ಲೂಕು ಬಣಜಿಗ ಸಮುದಾ ಭವನದಲ್ಲಿ ಸಮುದಾಯದ ಸಂಘದಿಂದ ಅಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ನಮ್ಮ ಸಮುದಾಯವು ಹನೂರು ತಾಲ್ಲೂಕಿನಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿದ್ದು ಸಂಘಟಿತರಾಗಬೇಕಿದೆ ಹಾಗೂ ನಮ್ಮ ಮಕ್ಕಳುಗಳನ್ನು ಉನ್ನತಮಟ್ಟದ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೆಕು ,ಆರ್ಥಿಕವಾಗಿ ಸಬಲರಾಗೋಣ ನಾವು ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರು ತಲಾ ಒಬ್ಬರು ಶಾಸಕರನ್ನು ಅಯ್ಕೆ ಮಾಡಬಹುದು ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಹನೂರು ತಾಲ್ಲೂಕು ಬಣಜಿಗ ಸಂಘದ ಗೌರವ ಅಧ್ಯಕ್ಷರಾದ ಗೋಪಾಲ್ ಕೃಷ್ಣ , ಅಧ್ಯಕ್ಷರಾದ ರಂಗಸ್ವಾಮಿ ಎಸ್ ಆರ್ . ಪಧಾದಿಕಾರಿಗಳಾದ ಶ್ರೀ ರಂಗಶೇಟ್ರು . ವೆಂಕಟಾಚಲ ,ಜೈರಾಮ್ ,ಪ್ರಕಾಶ್ ,ರವಿ ,ಬಸವರಾಜು ,ಎಲ್ಲೇಮಾಳ ಮಹದೇವ್ ,ನಾಗೇಶ್ , ಶಿವಕುಮಾರ್ ಎಮ್ ಎಸ್ ದೊಡ್ಡಿ , ಸೇರಿದಂತೆ ಇನ್ನಿತರರು ಹಾಜರಿದ್ದರು .