Breaking News

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

Students are ambassadors of democracy – Nagaraj S. Guttedar

ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಕಲ್ಪ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಎಸ್ ಗುತ್ತೇದಾರ್ ವಕೀಲರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಭವ್ಯ ಭಾರತದ ಪ್ರಜೆಗಳಾದ ತಾವುಗಳು ಪ್ರಜಾಪ್ರಭುತ್ವದ ರಾಯಭಾರಿಗಳಿದ್ದಂತೆ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು. ಅಧಿಕಾರವನ್ನು ಶಾಂತಿಯುತವಾಗಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಲು ಚುನಾವಣೆಗಳು ಸಹಾಯಕವಾಗುತ್ತವೆ ಇಂತಹ ಚುನಾವಣೆಗಳ ಮೂಲಕ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯರಾದ ಎಂ.ಆರ್. ಮಂಜುಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ನಿಯಮಗಳ ಅನುಸಾರ ಮತದಾನ ಮಾಡುವ ಮೂಲಕ ತಮ್ಮ ನಾಯಕರನ್ನು ಆರಿಸಬೇಕು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ವಿದ್ಯಾರ್ಥಿಗಳೆಲ್ಲರೂ ತಮ್ಮ ಆಧಾರ್ ಗುರುತಿನ ಚೀಟಿಯೊಂದಿಗೆ ಇಂದಿನ ಚುನಾವಣೆಯಲ್ಲಿ ಭಾಗವಹಿಸಿ ಕೈ ಬೆರಳಿಗೆ ಶಾಹಿಯನ್ನು ಹಾಕಿಸಿಕೊಂಡು ತಮ್ಮ ಗುರುತನ್ನು ಸಾಬೀತುಪಡಿಸಿ ಸಹಿ ಮಾಡುವ ಮೂಲಕ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದು ಕಾಲೇಜಿನ ಆವರಣದಲ್ಲಿ ಕಂಡು ಬರುತ್ತಿತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ತುಂಬಾ ಆಸಕ್ತಿಯಿಂದ ಅತ್ಯಂತ ಲವಲವಿಕೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಚುನಾವಣೆಗೆ ಶಕ್ತಿ ತುಂಬುವ ಕಾರ್ಯದಲ್ಲಿ ನಿರತರಾಗಿದ್ದರು.

ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಗಳಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಉಪನ್ಯಾಸಕರಾದ ಬಸವರಾಜ್, ನಾಗರಾಜ್, ಅಶೋಕ್, ವಿಶ್ವನಾಥ್, ಬಸನಗೌಡ, ಶರಣಬಸವರಾಜ್, ಶರಣಮ್ಮ, ರಾಹುಲ್ ಹಾಗೂ ಇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತು ಮಾರ್ಗದರ್ಶನ ಮಾಡುತ್ತಿದ್ದದ್ದು ಕಂಡುಬಂದಿತು.

About Mallikarjun

Check Also

ಗ್ಯಾರಂಟಿ ಮೂಲಕ ಬಡ ಮಧ್ಯಮ ವರ್ಗದ ಜನರಿಗೆ ಸಹಕಾರ : ರೇವಣ್ಣ

Cooperation for poor and middle class people through guarantees: Revanna ಕೊಪ್ಪಳ: ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ …

Leave a Reply

Your email address will not be published. Required fields are marked *