Breaking News

ಗ್ಯಾರಂಟಿ ಮೂಲಕ ಬಡ ಮಧ್ಯಮ ವರ್ಗದ ಜನರಿಗೆ ಸಹಕಾರ : ರೇವಣ್ಣ

Cooperation for poor and middle class people through guarantees: Revanna

ಜಾಹೀರಾತು


ಕೊಪ್ಪಳ: ಸಿದ್ದರಾಮಯ್ಯ – ಡಿ.ಕೆ. ಶಿವಕುಮಾರ ಸಾರಥ್ಯದ ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳು ನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡಮಟ್ಟದ ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಹೆಚ್. ಎಂ. ರೇವಣ್ಣ ಅಭಿಪ್ರಾಯಪಟ್ಟರು.
ಅವರು ಬೆಂಗಳೂರಿನ ಸಿಎಂ ನಿವಾಸ ಕುಮಾರಕೃಪಾದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅವರ ಅನೌಪಚಾರಿಕ ಭೇಟಿ ವೇಳೆ ಹಲವು ವಿಷಯಗಳನ್ನು ಹಂಚಿಕೊAಡರು. ವಿರೋಧ ಪಕ್ಷಗಳು ತಮಗೆ ತೋಚಿದ್ದನ್ನು ಮಾತನಾಡುತ್ತಾರೆ, ಅದನ್ನೇ ದೊಡ್ಡ ಸುದ್ದಿ ಮಾಡಿ ಜನರಿಗೆ ತಪ್ಪು ಕಲ್ಪನೆ ಬರುವ ಹಾಗೆ ಮಾಡಲಾಗುತ್ತಿದೆ.
ವಾಸ್ತವದಲ್ಲಿ ದೇಶದಲ್ಲಿಯೇ ಜನರ ತೆರಿಗೆ ಹಣವನ್ನು ಜನರಿಗೆ ನೇರವಾಗಿ ಮುಟ್ಟಿಸುವ ಕೆಲಸವನ್ನು ಶೋಷಿತ ವರ್ಗದ ಜನರ ಕಾಂಗ್ರೆಸ್ ಸರಕಾರ ಮಾಡುತ್ತಿದೆ, ಗೃಹಲಕ್ಷಿö್ಮÃ ಯೋಜನೆ ಆರಂಭವಾದಾಗಿನಿAದ ನಿರಂತರವಾಗಿ ಮಹಿಳೆಯರ ಖಾತೆಗೆ ನೇರವಾಗಿ ೨ ಸಾವಿರ ಹಣ ಹೋಗುತ್ತಿದೆ, ೨೦೨೪-೨೫ರ ಆರ್ಥಿಕ ವರ್ಷದಲ್ಲಿನ ಫೆಬ್ರವರಿ ಮತ್ತು ಮಾರ್ಚ ಎರಡು ತಿಂಗಳ ಗೃಹಲಕ್ಷಿö್ಮÃ ಹಣ ಜಂಪ್ ಆಗಿದ್ದು, ಹಿಂದಿನ ವರ್ಷದ ಲೆಕ್ಕದ ಸಮಸ್ಯೆ ಆಗಿದ್ದು, ಮುಖ್ಯಮಂತ್ರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರನ್ನು ಈ ಕುರಿತು ವಿನಂತಿಸಲಾಗಿದ್ದು, ಆರ್ಥಿಕ ಇಲಾಖೆಯ ಅನುಮತಿ ಸಿಕ್ಕರೆ ಅದನ್ನೂ ಜನರಿಗೆ ಕೊಡುವ ಕೆಲಸ ಮಾಡಲಾಗುವದು ಎಂದರು. ಐದೂ ಯೋಜನೆಗಳು ನಿಲ್ಲುವದಿಲ್ಲ ಮತ್ತು ಉತ್ತಮವಾಗಿವೆ ಎಂದರು.
ಇನ್ನು ಗ್ಯಾರಂಟಿ ಯೋಜನೆಗೆ ನೇಮಿಸಿರುವ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಅತ್ಯಂತ ಉತ್ತಮವಾಗಿ ಕೆಲಸ ಮಡುತ್ತಿದ್ದು, ದೇಶದ ಮಾದರಿ ಯೋಜನೆಯನ್ನು ಇನ್ನೊಬ್ಬರು ಕೊಡಲು ಸಾಧ್ಯವಿಲ್ಲದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಕೊಡುವ ಗೌರವಧನದ ಬಗ್ಗೆ ವಿರೋಧ ಪಕ್ಷಗಳು ಮಾತನಾಡುತ್ತಿದ್ದಾರೆ, ಆದರೆ ಅದನ್ನೇ ಅಧಿಕರಿಗಳಿಗೆ ವಹಿಸಿದರೆ ಮಾಡಲು ದೊಡ್ಡ ಹೊರೆಯಾಗುತ್ತದೆ, ಏಜನ್ಸಿಗಳಿಗೆ ಕೊಟ್ಟರೆ ಇದರ ಹತ್ತು ಪಟ್ಟು ಹಣ ಕೊಟ್ಟರೂ ಇಷ್ಟು ಚನ್ನಾಗಿ ಕೆಲಸ ಮಾಡಲು ಆಗಲ್ಲ. ಈ ವಿಷಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು. ಬರುವ ದಿನಗಳಲ್ಲಿ ೫೨ ಸಾವಿರ ಕೋಟಿಯ ಗ್ಯಾರಂಟಿ ಯೋಜನೆಗಳ ಲಾಭದ ಕುರಿತು ಅಧ್ಯಯನಪೂರ್ಣ ವರದಿಯನ್ನು ಜನರ ಮುಂದೆ ಇಡುವ ಕೆಲಸ ಮಾಡೋಣ ಎಂದರು. ರಾಜ್ಯದಲ್ಲಿ ಕೊಪ್ಪಳ ಸಮಿತಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದು, ಇನ್ನೂ ಚನ್ನಾಗಿ ಜನರ ಬಳಿ ಹೋಗಿ ಚರ್ಚಿಸುವಂತೆ ಸಲಹೆ ನೀಡಿದ್ದಾರೆ ಎಂದು ಗೊಂಡಬಾಳ ತಿಳಿಸಿದ್ದಾರೆ.

About Mallikarjun

Check Also

screenshot 2025 09 05 22 19 02 62 6012fa4d4ddec268fc5c7112cbb265e7.jpg

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಾದಾಮಿ ಹಾಲು ವಿತರಣೆ.

Distribution of almond milk on the occasion of Eid Milad. ಕನಕಗಿರಿ:ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಬಾಂಧವರಿಂದ ಹಮ್ಮಿಕೊಳ್ಳಲಾಗಿದ್ದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.