Breaking News

ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸೋಮವಾರ ಪ್ರತಿಭಾ ಪುರಸ್ಕಾರ

Talent award ceremony on Monday under the auspices of the Welfare Development Association of the State Banajiga Society

ಗಂಗಾವತಿ: ರಾಜ್ಯ ಮತ್ತು ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ 21-7-25 ರಂದು ಸೋಮವಾರ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಯುವ ಘಟಕದ ತಾಲೂಕು ಅಧ್ಯಕ್ಷ ಸಂಗಮೇಶ ಮಹಾದೇವಪ್ಪ ಕೋಟಿ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು
2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ ಮಾಡಲಾಗುವದು. ಬೆಳ್ಳಿಗ್ಗೆ 10.30 ಕ್ಕೆ ಎಲ್ಲಾ ವರ್ಗಗಳ ಆರಾಧ್ಯ ದೈವ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಮತ್ತು ರಾಜ್ಯ ಬಣಜಿಗರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸೋಮನಾಥ ಪಟ್ಟಣಶೆಟ್ಟಿ ವಹಿಸಿಕೊಳ್ಳುವರು. ಮಾಜಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ, ಅಂದಪ್ಪ, ಶಂಕ್ರಣ್ಣ ಮುನವಳ್ಳಿ, ಶಿವಾನಂದ ಬಿದರಿ, ವಿಶ್ವನಾಥ ಬಳ್ಳೊಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಸಂಘಟನೆ ಪ್ರಮುಖರಾದ ಅರ್ಲೂರು ಶಿವಕುಮಾರ್, ಶ್ರೀ ಮತಿ ರೇಖಾ ಅಂಗಡಿ, ಸುಮಾ ಮಸ್ಕಿ, ಮಂಜುನಾಥ ಸೋಮನಾಳ, ಶ್ರೀ ಮತಿ ಶೋಭಾ ಗಲಗಲಿ, ಶ್ರೀ ಮತಿ ಹರ್ಷಿತ ಪಟ್ಟಣಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಮಾಜದ ಹಿರಿಯರು ಮತ್ತು ರಾಜ್ಯ ಭಾರತೀಯ ವೈದ್ಯಕೀಯ ಮಂಡಳಿ ಅಧ್ಯಕ್ಷ, ಖ್ಯಾತ ವೈದ್ಯ ಡಾ.ಎ.ವಿ.ಚಿನಿವಾಲರನ್ನು ವಿಶೇಷವಾಗಿ ಸನ್ಮಾನಿಸಲಾಗುವದು.ಶ್ರೀ ಮತಿ ಪ್ರೇಮಕ್ಕ ಅಂಗಡಿ ಮತ್ತು ಅಶೋಕ ಹಂಚಲಿ “ಬಣಜಿಗರು ನಡೆದು ಬಂದ ದಾರಿ” ಬಣಜಿಗರ ಇತಿಹಾಸ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವೀರಶೈವ ಬಣಜಿಗ ಸಮಾಜದವರು ತಮ್ಮ ಕುಟುಂಬ ಸಮೇತ ಈ ಅಭೂತಪೂರ್ವ ಸಮಾರಂಭಕ್ಕೆ ಸಾಕ್ಷಿಯಾಗಬೇಕು ಎಂದು ಸಂಗಮೇಶ ಮಹಾದೇವಪ್ಪ ಕೋಟಿ ಮನವಿ ಮಾಡಿದ್ದಾರೆ.

About Mallikarjun

Check Also

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

Students are ambassadors of democracy – Nagaraj S. Guttedar ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ …

Leave a Reply

Your email address will not be published. Required fields are marked *