Stop recruitment on the basis of outsourcing. Reservation should be given in the recruitment of guest teachers: District President Basavaraja Magalamani's appeal.

ಗಂಗಾವತಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಡಿ ಮತ್ತು ಸಿ ವರ್ಗದ ಹುದ್ದೆಗಳನ್ನು ಎನ್ ಜಿ ಓ ಗಳ ಮೂಲಕ ನೇಮಕಾತಿ ಮಾಡಲಾಗುತ್ತಿದೆ. ಈ ಪದ್ದತಿಯು ಅವೈದ್ನಯಾನಿಕ ಪದ್ಧತಿಯಿಂದ ಕೂಡಿರುತ್ತದೆ.ಇಲ್ಲಿ ಎನ್ ಜಿ ಓ ಗಳೆ ಮಾಲೀಕರಾಗಿರುತ್ತಾರೆ. ತಮಗೆ ಬೇಕಾದವರನ್ನು ಹಾಗೂ ಹಣ ಪಡೆದು ತಮಗೆ ಇಷ್ಟ ಬಂದಂತೆ ನೇಮಕಾತಿ ಮಾಡಿಕೊಳ್ಳುತ್ತಾರೆ.
ಸೇವಾ ಭದ್ರತೆ ಇರುವುದಿಲ್ಲ ಆದಕಾರಣ ಸರ್ಕಾರವೇ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ಮೀಸಲಾತಿ ನೀಡಬೇಕು.ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೀಸಲಾತಿ ನೀಡುವುದು.ಶಾಲಾ ಕಾಲೇಜುಗಳಲ್ಲಿ ಸುಮಾರು ಅರವತ್ತು ಸಾವಿರ ಶಿಕ್ಷಕರ ಉದ್ದೆಗಳು ಖಾಲಿ ಇದ್ದು,ಭೋದನೆಯ ಕೊರತೆ ನಿಗಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಪ. ಜಾ., ಪ ವ, ಹಿಂದುಳಿದ, ಅಲ್ಪ ಸಂಖ್ಯಾತ, ಮಹಿಳೆಯರು, ಅಂಗವಿಕಲರು,ಗ್ರಾಮೀಣ,ಸೇವಾ ಹಿರಿತನ,ಆಧಾರದಲ್ಲಿ ನೇಮಕಾತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು.ಶಾಲೆ ಬಿಡಬಾರದು ಎಂಬ ಉದ್ದೇಶದಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಪೂರೈಸುವ ಯೋಜನೆ ಜಾರಿಗೆ ತರಲಾಗಿತ್ತು.ಆದರೆ ಕರೋನ ಬಂದ ಮೇಲೆ 2020 ರಿಂದ ಬೈಸಿಕಲ್ ವಿತರಣೆ ಸರ್ಕಾರವು ಸ್ಥಗಿತಗೊಳಿಸಲಾಗಿದೆ.ಇದರಿಂದ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಬೈಸಿಕಲ್ ವಿತರಣೆ ಮಾಡಲು ಕ್ರಮವಹಿಸಬೇಕು.ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ SC/ST ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಜಾತಿಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ಉಚಿತವಾಗಿ ಪೂರೈಸಬೇಕು.ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಿಸಬೇಕು.ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೆ ತಂದಿದೆ ಆದರೆ ಬಸ್ ಗಳ ಸಂಖ್ಯೆ ಹೆಚ್ಚಿಸಿರುವದಿಲ್ಲ. ಇದರಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಪುರುಷರಿಗೆ, ಪುರುಷ ಮತ್ತು ಮಹಿಳಾ ವೃದ್ದರಿಗೆ, ಅಂಗವಿಕಲರಿಗೆ ತುಂಬಾ ಅನಾನುಕೂಲವಾಗಿರುತ್ತದೆ.
ಮಹಾಂತ ಗೌಡ್ರ ಗ್ರೇಡ್ 2ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಯವರಿಗೆ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ದುರ್ಗೇಶ ಹೊಸಳ್ಳಿ, ರಾಘು ಕಡೆಬಾಗಿಲು, ಮಂಜುನಾಥ ಚನ್ನಾದಾಸರ,ಬಸವರಾಜ ನಾಯಕ, ಮತ್ತಿತರರು ಇದ್ದರು.
