Congress Youth Unit's swearing-in ceremony... smearing themselves... accusing former minister Iqbal Ansari's supporters for no reason- Hussainappa.

ಗಂಗಾವತಿ. ಅಮರ್ ಗಾರ್ಡನ್ ಹೋಟೆಲ್ ಒಂದರಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಎಲ್ಲಾ ತಾಲೂಕಾ ಪದಾಧಿಕಾರಿಗಳೇ ಪದಗ್ರಹಣ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಆಸೀಫ್ ಹುಸೇನ್ ಅವರು ತಮ್ಮ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಬ್ಯಾನರಿಗೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಬೆಂಬಲಿಗರಿಗೆ ತೇಜು ವದೆ ಮಾಡುತ್ತಿರುವುದು ಸೂಕ್ತದಾಯಕ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ನ್ಯಾಯವಾದಿ ಹುಸೇನಪ್ಪ ಹೇಳಿದರು.
ಅವರು. ಪದ ಗ್ರಹಣ ಸಮಾರಂಭದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಸಾರಿ ಅವರ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು..
ಎಲ್ಲೋ ಕೆಲಸ ಕಾರ್ಯವಿಲ್ಲದೆ ಬಿದ್ದಂತಹ ಹಲವು ವ್ಯಕ್ತಿಗಳನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಂಡು. ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸುವುದರ ಜೊತೆಗೆ ನಗರಸಭೆ ಸೇರಿದಂತೆ ಮತ್ತೆತ್ತರ ಆಡಳಿತ ಮಂಡಳಿಯಲ್ಲಿ ನೇಮಕ ಮಾಡಿದ ಪ್ರತಿಫಲವೇ. ಈಗ ಅನ್ಸಾರಿ ವಿರುದ್ಧ ಹಾಗೂ ಬೆಂಬಲಿಗರವಿರುದ್ಧ ತಿರುಗಿ ಬೀಳಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು. ನಗರ ಘಟಕದ ಮಾಜಿ ಅಧ್ಯಕ್ಷ ಜುಬೇರ ಮಾತನಾಡಿ ಚುನಾವಣೆಗಳಲ್ಲಿ ಸೋಲು ಗೆಲುವು ಅನಿವಾರ್ಯವಾಗಿದ್ದು ಕೆಲವು ನಂಬಿಕ ದ್ರೋಹಿಗಳು ಇಲ್ಲಸಲ್ಲದ ಆಮಿಷಗಳಿಗೆ ಬಲಿಯಾಗಿ ತಮ್ಮತನವನ್ನು ಮಾರಿ ಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ರವಿ ಕುಮಾರ್.ನಾಯಕ್ ಮನೋಹರ್ ಸ್ವಾಮಿ ಮುದೇನೂರು. ಗದ್ವಾಲ್ ಕಾಸಿಂಸಾಬ್.. ಸೇರಿದಂತೆ ಅಪಾರ ಬೆಂಬಲಿಗರು ಸುದ್ದಿ ಗೋಸ್ತಿ ಉದ್ದೇಸೀ ಮಾತನಾಡಿದರು.