Breaking News

ಕೊಪ್ಪಳ ವಿಶ್ವವಿದ್ಯಾಲಯ ಗಂಗಾವತಿ ಸ್ನಾತಕೋತ್ತರ ಕೇಂದ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ SFI ನಾಗರಾಜ ಮನವಿ





SFI Nagaraja appeals for lack of basic facilities at Koppal University Gangavathi Postgraduate Centre

ಗಂಗಾವತಿ: ನಗರದಲ್ಲಿ ಪ್ರತಿಷ್ಠಿತ ಪ್ರಥಮ ದರ್ಜೆಯ ಕೊಲ್ಲಿ ನಾಗೇಶ್ವರರಾವ್ ಕಾಲೇಜಿನ ಕೊಪ್ಪಳ ವಿಶ್ವವಿದ್ಯಾಲಯ ಗಂಗಾವತಿ ಸ್ನಾತಕೋತ್ತರ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ದೂರ್ಭಾಗ್ಯ ಅನುಭವಿಸುತ್ತಿದ್ದಾರೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು, ಹಾಗೂ ಅಗತ್ಯವಿರುವ ಪಠ್ಯಪುಸ್ತಕಗಳು ಮತ್ತು ಓದುಗರಿಗೆ ಸೌಲಭ್ಯ ಕೊರತೆಯಿರುವುದು ಮುಖ್ಯವಾಗಿ ಗ್ರಂಥಾಲಯವೇ ಇಲ್ಲಾ ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕ್ಕೆ ತೀವ್ರ ತೊಂದರೆ ಯಾಗಿದೆ,

ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ತಾಲೂಕ್ ಅಧ್ಯಕ್ಷರು ಎಸ್ ಎಫ್ ಐ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದು, ತ್ವರಿತ ಕ್ರಮ ಕೈಗೊಂಡು ಈ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಶಿಕ್ಷಣದಲ್ಲಿ ಉತ್ತೇಜನ ಬರುವಂತೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅನೂಕೂಲವಾಗುವಂತೆ ಬೇಗನೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೂಡಲೇ ಸಮಸ್ಯೆ ಬಗೆಹರಿಯದಿದ್ದರೆ ವಿದ್ಯಾರ್ಥಿಗಳೊಂದಿಗೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿ ಗಂಗಾವತಿ ಸ್ನಾತಕೋತ್ತರ ಕೇಂದ್ರ ದ ನಿರ್ದೇಶಕರದ ಶ್ರೀಮತಿ ಮಮ್ತಾಜ್ ಬೇಗಂ ಮೇಡಂ ರವರಿಗೆ ಎಸ್ ಎಫ್ ಐ ತಾಲೂಕ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷ ಶರೀಫ್ ಎಂ, ಸಹ ಕಾರ್ಯದರ್ಶಿ ಮುಖಂಡರಾದ ಬಸಯ್ಯ, ದೊಡ್ಡಬಸವ, ವಿದ್ಯಾರ್ಥಿಗಳದ ಹನುಮೇಶ್, ಮದನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

About Mallikarjun

Check Also

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

Students are ambassadors of democracy – Nagaraj S. Guttedar ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ …

Leave a Reply

Your email address will not be published. Required fields are marked *