Condolences on death of civil servant Melappa: Bhardwa

ಗಂಗಾವತಿ: ಗಂಗಾವತಿ ನಗರಸಭೆಯಲ್ಲಿ ಸುಮಾರು ವರ್ಷಗಳಿಂದ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೇಲಪ್ಪ ತಂ. ಕರಿದುರುಗಪ್ಪ ಇವರು ಅನಾರೋಗ್ಯಕ್ಕೀಡಾಗಿ ಜುಲೈ-೧೮ ರಂದು ಮೃತಪಟ್ಟಿರುತ್ತಾರೆ. ಇವರ ನಿಧನಕ್ಕೆ ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಸಂತಾಪ ಸೂಚಿಸಿದ್ದಾರೆ.
ಮುಂದುವರೆದು ಮೃತ ಪೌರಕಾರ್ಮಿಕರ ಕುಟುಂಬಕ್ಕೆ ನಗರಸಭೆ ಹಾಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಚಾಂದ್‌ಪಾಷಾ ಇದ್ದರು.