Breaking News

ಜನಸಂಖ್ಯೆ ಹೆಚ್ಚಳದಿಂದ ಮೂಲಭೂತ ಸೌಕರ್ಯಗಳ ಕೊರತೆ,,! ಶಿವಾನಂದ ಪೂಜಾರಿ,,

Lack of basic amenities due to population increase,,! Shivananda Poojary,

ಜಾಹೀರಾತು

ಗಂಗಾವತಿ :ಜುಲೈ16 ಜನಸಂಖ್ಯೆ ಹೆಚ್ಚಳದಿಂದ ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ ಆರೋಗ್ಯದ ಮೇಲೆ ದುಷ್ಪರಿಣಾಮ ಮೂಲಭೂತ ಸೌಕರ್ಯಗಳ ಕೊರತೆ ಆಗುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ್ ಪೂಜಾರಿ ಹೇಳಿದರು.

ಆವರು ನಗರದ ರಾಮುಲು ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಗಂಗಾವತಿ ಹಾಗೂ ರಾಮುಲು ನರ್ಸಿಂಗ್ ಕಾಲೇಜ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವೇಗವಾಗಿ ವಿಶ್ವದ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.

ನಂತರ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ ಇವರು ಮಾತನಾಡಿ ಹೆಚ್ಚುತ್ತಿರುವ ಜನ ಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಪ್ರಪಂಚದಲ್ಲಿ ಭಾರತ ಮೊದಲನೇ ಸ್ಥಾನಕ್ಕೆ ಬರುತ್ತದೆ ಎಂದು ತಿಳಿಸಿದರು.

ಈಗಾಗಲೇ 146 ಕೋಟಿ ಜನಸಂಖ್ಯೆಯನ್ನು ನಮ್ಮ ದೇಶ ಹೊಂದಿದೆ ಇದರಿಂದ ಆಹಾರದ ಕೊರತೆ ನೀರಿನ ಕೊರತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉದ್ಯೋಗ ಕೊರತೆ ಅನೇಕ ತೊಂದರೆಗಳನ್ನು ಅನುಭವಿಸಿರುವ ಬಗ್ಗೆ ತಿಳಿಸಿದರು. ಆದ್ದರಿಂದ ಪ್ರತಿವರ್ಷ ಜುಲೈ 11ರಂದು ದಿನಾಚರಣೆಯನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ವಾಗಿದೆ ಎಂದು ತಿಳಿಸಿದರು.

ಈ ವರ್ಷದ ಘೋಷವಾಕ್ಯ ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭಧಾರಣೆಗೆ ಆರೋಗ್ಯಕರ ದೇಹ ಮನಸ್ಸು ಹಾಗೂ ವಯಸ್ಸು ಅತ್ಯವಶ್ಯಕ ಎಂಬುದಾಗಿದೆ.
ಜನಸಂಖ್ಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಅದಕ್ಕಾಗಿ ಒಂದು ಮಗು ಅಥವಾ ಎರಡು ಮಕ್ಕಳನ್ನು ಪಡೆದು ಕುಟುಂಬ ಕಲ್ಯಾಣದ ಶಾಶ್ವತ ವಿಧಾನಗಳಾದ ಉದರ ದರ್ಶಕ ಶಸ್ತ್ರ ಚಿಕಿತ್ಸೆ, ಟುಬ್ಯಾಕ್ಟಮಿ, ವ್ಯಾಸೆಕ್ಟಮಿ. ಮಾಡಿಸಿಕೊಳ್ಳಬಹುದು
ತಾತ್ಕಾಲಿಕ ವಿಧಾನಗಳಾದ, ವಂಕಿ ಅಳವಡಿಸಿಕೊಳ್ಳುವುದು, ನುಂಗುವ ಮಾತ್ರೆ ಬಳಕೆ, ಅಂತರ ಚುಚ್ಚುಮದ್ದು, ನಿರೋದ್ ಬಳಕೆ ಬಳಸುವುದರಿಂದ ಮಕ್ಕಳ ನಡುವೆ ಅಂತರವನ್ನು ಕಾಯ್ದುಕೊಂಡು ಮಹಿಳೆಯು ಆರೋಗ್ಯಕರವಾಗಿರುತ್ತಾಳೆ ಎಂದು ತಿಳಿಸಿದರು.

ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ ಅದರಿಂದಾಗುವ
ದುಷ್ಪರಿಣಾಮಗಳ ಬಗ್ಗೆ ಸಹ ತಿಳಿಸಿದರು. ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವ ಕಾಯ್ದೆ ಕುರಿತು, (PCPNDT) ವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಮೇಟಿ, ಆರೋಗ್ಯ ಸಿಬ್ಬಂದಿಗಳಾದ ಗುರುರಾಜ್ ಎಚ್. ಎಂ, ಸುರೇಶ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.