Free health camps are very helpful in reducing medical waste… Dr. Shivakumar Mali Patil.

ಗಂಗಾವತಿ. ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ರಕ್ತ ತಪಾಸನೆ ಡಿಪಿ ಸಕ್ಕರೆ ಕಾಯಿಲೆ ಸೇರಿದಂತೆ ದೀರ್ಘ ಅವಧಿಯ ರೋಗ ರುಜಿನಿಗಳ ವೈದ್ಯಕೀಯ ತಪಾಸನಿಗೆ ಅಧಿಕ ವೆಚ್ಚ ಆಗಲಿದ್ದು ಅವುಗಳಿಗೆ ಕಡಿವಾನ ಹಾಕಲು ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಸಹಕಾರಿಯಾಗಿದೆ ಎಂದು ಲಯನ್ಸ್ ಕ್ಲಬ್ ನ ಅಧ್ಯಕ್ಷ ಡಾ ಶಿವಕುಮಾರ್ ಮಾಲಿ ಪಾಟೀಲ್ ಹೇಳಿದರು.
ಅವರು ಬುಧವಾರದಂದು ಶ್ರೀ ರಾಮನಗರದ ಎಕೆಆರಡಿ ಪಿಯು ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಗಂಗಾವತಿ ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಭಾರತೀಯ ವೈದ್ಯಕೀಯ ಸಂಘ ವೈದೇಹಿ ಆಸ್ಪತ್ರೆ ಬೆಂಗಳೂರು ಗ್ರೇಸ್ ಕ್ಯಾನ್ಸರ್ ಫೌಂಡೇಶನ್ ಹೈದರಾಬಾದ್ ಹಾಗೂ ಐಎಂಎ ಮೈತ್ರಿ ಗಂಗಾವತಿ ನೇತೃತ್ವದಲ್ಲಿ ಆಯೋಜಿಸಿದ ಬೃಹತ್ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಮಹಾ ಭಾಗ್ಯವಾಗಿದ್ದು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ. ಇತ್ತೀಚಿಗೆ ಹಾಸನ್ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹೃದಯಘಾತಕ್ಕೆ ಬಲಿ ಆಗುತ್ತಿರುವುದು ಆತಂಕಕಾರಿಯಾಗಿದೆ ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಒಳಪಡುವುದು ಅತ್ಯಂತ ಅವಶ್ಯವಾಗಿದೆ ಎಂದು ತಿಳಿಸಿದರು. ಖಜಾಂಚಿ ಗಾಳಿ ಶಿವಪ್ಪ ಮಾತನಾಡಿ ಮಹಿಳೆಯರಲ್ಲಿ ಕಾಣಸಿಗುವ ಸ್ತನ ಕ್ಯಾನ್ಸರ್ ಬಗ್ಗೆ ವಿಶೇಷ ಗಮನಹರಿಸಬೇಕು. ಅಂತಹ ಲಕ್ಷಣಗಳು ಕಂಡು ಬಂದಲ್ಲಿ ಪ್ರಥಮ ಹಂತದಿಂದಲೇ ಚಿಕಿತ್ಸೆಗೆ ಒಳಪಟ್ಟಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು. ಶಿಬಿರದಲ್ಲಿ ಕಣ್ಣಿನ ತಪಾಸನೆ ಎಲುಬು ಕೀಲುಗಳ ನರ ರೋಗ ಹಾಗೂ ಕ್ಯಾನ್ಸರ್ ತಪಾಸನಿಗೆ ಒಟ್ಟು 520 ಜನ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಡಾಕ್ಟರ್ ಆನಂದ್ ಜಂಬಣ್ಣ ಸುದೇಶ್ ಕುಮಾರ್ ಅಕ್ಷತಾ ಪಟ್ಟಣಶೆಟ್ಟಿ ಬೆಂಗಳೂರು ಲಯನ್ಸ್ ಕ್ಲಬ್ ಸತೀಶ್. ಮೇಧಾ ಮಲ್ಲನಗೌಡ ಸೇರಿದಂತೆ. ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು