Milk testing and inspection at the Milk Producers Association

ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಸುಗಳಲ್ಲಿ ಕಂಡುಬರುವ ಆಗೋಚಕರ ಕೆಚ್ಚಲು ಬಾವು ತಪಾಸಣೆಯನ್ನು ಸಂಘದ ಆಡಳಿತ ಅಧಿಕಾರಿಗಳಾದ ಗವಿಸಿದ್ದಪ್ಪ ಇವರ ನೇತೃತ್ವದಲ್ಲಿ ತಪಾಸಣೆಯನ್ನು ಆಯೋಜಿಸಲಾಯಿತು, ಸಂಘದ ಸಹಾಯಕರಾದ ಯಮನೂರ ಮಾತನಾಡಿ ಪ್ರತಿ ತಿಂಗಳು ಹಾಲಿನ ತಪಾಸಣೆಯನ್ನು ಸಂಘಗಳಲ್ಲಿ ಮಾಡುತ್ತಿದ್ದು ರೈತರು ರಾಸುಗಳ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ತಪಾಸಣೆಯಿಂದ ಹಾಲಿನಲ್ಲಿ ಬದಲಾವಣೆಯನ್ನು ಕಾಣಬಹುದು ರೈತರು ಅದನ್ನು ಗಮನಿಸಬೇಕು, ಮತ್ತು ಹಾಲು ತಪಾಸಣೆ ಮಾಡಿದ ಸಂದರ್ಭದಲ್ಲಿ ಆಗೋಚಕರ ಕೆಚ್ಚಲ ಬಾವು ಸಮಸ್ಯೆ ಕಂಡರೆ ಸಂಘದಿಂದ ಉಚಿತವಾಗಿ ಔಷಧವನ್ನು ಪಡೆದುಕೊಳ್ಳಬಹುದು. ಸಂಘದಲ್ಲಿ ಕಡಿಮೆ ದರದಲ್ಲಿ ರಾಸುಗಳಿಗೆ ಜೀವವಿಮೆ ಮಾಡಿಸಲಾಗುತ್ತದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ರೈತ ಕಲ್ಯಾಣ ಟ್ರಸ್ಟ್ ರಚಿಸಿ ಇದರಿಂದ ಹಾಲು ಉತ್ಪಾದಕರಿಗೆ ಹಲವಾರು ಸೌಲಭ್ಯವನ್ನು ನೀಡುತ್ತಿದೆ. ಅಕಾಲಿಕ ಮರಣ ಹೊಂದಿದ ಪಕ್ಷದಲ್ಲಿ 20000 ಮೊತ್ತವನ್ನು ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ಹಾಲು ಉತ್ಪಾದಕರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗದ ವಸತಿ ನಿಲಯ ಶುಲ್ಕವನ್ನು ಟ್ರಸ್ಟ್ ವತಿಯಿಂದ ಪಾವತಿಸಲಾಗುತ್ತದೆ, ಸ್ಟೆಪ್ ಯೋಜನೆ ಅಡಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿಗೆ ಹೈನು ರಾಸು ಖರೀದಿಸಲು ಬಡ್ಡಿ ರಹಿತ ಸಾಲವನ್ನು ಅಂಚಿನ ಹಣದ ಮೂಲಕ ನೀಡಿ ರಾಸುಗಳಿಗೆ ಉಚಿತ ವಿಮೆ ಸೌಲಭ್ಯ ಸಹ ಕಲ್ಪಿಸಲಾಗುತ್ತದೆ. ಸ್ವಸಾಯ ಸಂಘಗಳನ್ನು ರಚಿಸಿ ಉಳಿತಾಯ ಮಾಡಿ ಸಾಲ ಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ನಿಧಿ ಮೂಲಕ ರಾಸು ಖರೀದಿಸಲು ಧನ ಸಹಾಯ ಮಾಡಲಾಗುತ್ತದೆ. ಸಂಘಗಳಲ್ಲಿ ಕೃತಕ ಗರ್ಭಧಾರಣೆ ಕಾರ್ಯಕರ್ತರಿಂದ ಪ್ರಥಮ ಚಿಕಿತ್ಸೆ ಕೃತಕ ಗರ್ಭಧಾರಣೆಯನ್ನು ಸಹಕಾರ ಸಂಘದಿಂದ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಗಂಗಾವತಿ ತಾಲೂಕಿನ ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾದ ನ ಹಾಗೂ ಮಾಜಿ ಅಧ್ಯಕ್ಷರಾದ ಎನ್. ಸತ್ಯನಾರಾಯಣ ಇವರ ಇವರ ಸಮ್ಮುಖದಲ್ಲಿ ರೈತ ಕಲ್ಯಾಣ ಟ್ರಸ್ಟ್ ಮತ್ತು ಎಲ್ಐಸಿ ಗ್ರೂಪ್ ಆಫ್ ಲೈಫ್ ಇನ್ಶುರೆನ್ಸ್ ಸ್ಕೀಮ್ ಜಾರಿಗೆ ಮಾಡಲು ಸಂಘದ ಕಾರ್ಯದರ್ಶಿಗಳು ಮನವಿ ಮಾಡಿಕೊಂಡಿದ್ದೇವೆ, ಇದರಿಂದ ರೈತರಿಗೂ ಅಕಾಲಿಕ ಮರಣ ಹೊಂದಿದ ರೈತರಿಗೆ ಒಂದು ಲಕ್ಷ ಧನಸಾಯ ನೀಡಲಾಗುವುದು. ಸಂಘದ ಸಹಾಯಕ ಕಾರ್ಯದರ್ಶಿಯಾದ ಯಮನೂರ ಎಂ. ಸಂಘದ ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ರೈತರದ, ತಿಮ್ಮಣ್ಣ ಕನಕ ರೆಡ್ಡಿ, ಮಲೀಯಪ್ಪ ಕಂಬಳಿ, ಸಂಘದ ಉಪಾಧ್ಯಕ್ಷರಾದ ರಾಮಮ್ಮ, ಗಂಗಮ್ಮ ಬಾವಿ, ಹನುಮೇಶ ಬಿ, ಷಣ್ಮುಖಪ್ಪ ಐನಾಯಕ, ರಾಮಣ್ಣ ಹಟ್ಟಿ, ರುದ್ರೇಶ ಐನಾಯಕ ದುರ್ಗಪ್ಪ ಹರಿಜನ, ಹಾಲು ತಪಾಸಣೆ ಸಮಯದಲ್ಲಿ ಭಾಗಿಯಾಗಿದ್ದರು.