Gangavathi's Channabasava Kotagi presented with this year's Best Artist Award by Chitra Santhe magazine

ಗಂಗಾವತಿ: ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ನಡೆದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಯನ್ನು ಗಂಗಾವತಿಯ ಚನ್ನಬಸವ ಕೊಟಗಿ ಅವರಿಗೆ ಪ್ರದಾನ ಮಾಡಲಾಗಿದೆ.
ಈ ಸಮಾರಂಭದ ನೇತೃತ್ವವಹಿಸಿದ್ದ ಚಿತ್ರ ಸಂತೆ ಪತ್ರಿಕೆಯ ಸಂಪಾದಕರಾದ ಗಿರೀಶ್ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರ್ಷ ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅದರಂತೆ ಈ ವರ್ಷ ೫೦ಕ್ಕೂ ಹೆಚ್ಚು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯದ ಟೆಲಿಕಾಂ ನೌಕರರ ಸಂಘದ ಹೌಸಿಂಗ್ ಬೋರ್ಡ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎನ್. ನರಸಿಂಹಮೂರ್ತಿಯವರು ವಹಿಸಿದ್ದರು. ಚಲನಚಿತ್ರ ನಟರಾದ ವಿಜಯ್ ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸAಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯನಿರ್ವಹಿಸಿ, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ಚಿತ್ರ ಸಂತೆ ಪತ್ರಿಕೆ, ಚನ್ನಬಸವ ಕೊಟಗಿಯವರಿಗೆ ಅವರ ಪತ್ನಿ ಶ್ರೀಮತಿ ಲಕ್ಷಿö್ಮ ಕೊಟಗಿ ಹಾಗೂ ಪುತ್ರ ಸ್ಕಂದ ಕೊಟಗಿ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದೆ.
ಪ್ರಶಸ್ತಿ ಸ್ವೀಕರಿಸಿದ ಚನ್ನಬಸವ ಕೊಟಗಿಯವರು ತಮ್ಮ ಸೇವೆ ಗುರುತಿಸಿದ ಚಿತ್ರ ಸಂತೆ ಪತ್ರಿಕೆಯ ಸಂಪಾದಕರು ಹಾಗೂ ಸಮಸ್ತ ಸಿಬ್ಬಂದಿಗಳಿಗೆ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ವಂದನೆಗಳು ಎಂದು ತಿಳಿಸಿದರು.