Star of Karnataka 2025' award presented to farmer poet Dr. P. Shankarappa Ballekatte

ತಿಪಟೂರು: ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆ ಎಸ್ ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಭವನದಲ್ಲಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಮತ್ತು ದಿನೇಶ್ ಫೌಂಡೇಶನ್ ಇವರುಗಳ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಸಂಭ್ರಮದಲ್ಲಿ ಕರುನಾಡಿನ ಗಣನೀಯ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು . ಇದೇ ಸಂದರ್ಭದಲ್ಲಿ ಸಾಹಿತ್ಯ ಸಾಮಾಜಿಕ ,ಕನ್ನಡ ನಾಡು ನುಡಿಗಾಗಿ ಗಣನೀಯ ಸೇವೆ ಸಲ್ಲಿಸುತ್ತಿರುವ ಕಲ್ಪತರು ನಾಡು ತಿಪಟೂರಿನ ರೈತಕವಿ ಡಾ.ಪಿ ಶಂಕರಪ್ಪಬಳ್ಳೇಕಟ್ಟೆ ರವರಿಗೆ “ಸ್ಟಾರ್ ಆಫ್ ಕರ್ನಾಟಕ 2025 “ರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಜಿ ಶಿವಣ್ಣ ಉಪಾಧ್ಯಕ್ಷೆ ರಮ್ಯ ಚಲುವ ಮೂರ್ತಿ, ಸಾಹಿತಿಗಳಾದ ಅಶ್ವಿನಿ ನಕ್ಷತ್ರ ,ಡಾ.ಶ್ವೇತ ಪ್ರಕಾಶ್, ಸಂಗೀತ ಮಠಪತಿ ವೀರೇಶ್ ,ಮಿನಾಕ್ಷಿ ಉಟಗಿ , ಚಂದ್ರಶೇಖರ್ ಮಾಡಲಗೆರಿ, ಚಿತ್ರನಟಿ ಮಾಲತಿಶ್ರೀ ಮೈಸೂರು,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ.ಮಂಜು ಗುರುಗದಹಳ್ಳಿ