Inauguration of the Sri Lalita Sahasra Namavali Parayana Camp to be held from July 14 to 24 at the Kannada Jagruti Samiti Bhavan in Gangavathi

ಗಂಗಾವತಿ: ನಗರದ ಹೊಸಳ್ಳಿ ರಸ್ತೆಯ ಲಿಟಲ್ ಹಾರ್ಟ್ಸ್ ಶಾಲೆ ಹತ್ತಿರವಿರುವ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಜುಲೈ-೧೪ ರಿಂದ ೨೪ ರವರೆಗೆ ಪ್ರತಿನಿತ್ಯ ಸಂಜೆ ೬:೦೦ ರಿಂದ ೭:೩೦ ರವರೆಗೆ ಶ್ರೀ ಲಲಿತಾ ಸಹಸ್ರ ನಾಮಾವಳಿ ಪಾರಾಯಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಉದ್ಘಾಟನೆಯನ್ನು ಜುಲೈ-೧೪ ಸೋಮವಾರ ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿಯವರಿಂದ ನೆರವೇರಿಸಲಾಯಿತು.
ಈ ಶಿಬಿರವು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಕನ್ನಡ ಜಾಗೃತಿ ಸಮಿತಿ ಗಂಗಾವತಿ ಹಾಗೂ ಸುಗ್ರೀವ ಜನಸೇವಾ ಸಮಿತಿ ಇವರುಗಳ ಸಹಯೋಗದಲ್ಲಿ ನಡೆಯಲಿದೆ.
ಈ ಶಿಬಿರದ ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಶರಣಬಸವ ದೇವರು ವಹಿಸಿದ್ದರು ಹಾಗೂ ಶ್ರೀ ಲಲಿತಾ ಸಹಸ್ರ ನಾಮಾವಳಿ ಪಾರಾಯಣವನ್ನು ಅಬಲೂರಿನ ಶ್ರೀ ಗಂಗಾಧರ ದೇವರು ಮಾಡಲಿದ್ದಾರೆ.
ಈ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಸೇವಕರು ಹಾಗೂ ಸಜ್ಜಲಶ್ರೀ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿ ಬಳಗದ ಸಂಸ್ಥಾಪಕ ಕಾರ್ಯದರ್ಶಿಗಳಾದ ಎಸ್.ಬಿ ಹಿರೇಮಠ, ತಿರುಪತೆಪ್ಪ ಶರಣರು ನಂದಿಹಳ್ಳಿ, ತ್ರಿಪುರಾಂತಸ್ವಾಮಿ ಹೊಸಕೇರಿ ಹಿರೇಮಠ, ವಿರುಪಾಕ್ಷಪ್ಪ ಕಕ್ಕರಗೋಳ, ಮಲ್ಲಯ್ಯಸ್ವಾಮಿ ಹೆಬ್ಬಾಳ ಹಿರೇಜಂತಕಲ್, ಶ್ರೀಮತಿ ಶಕುಂತಲಮ್ಮ, ಶ್ರೀಮತಿ ಅರುಣಾ ಪಾಟಿಲ್ ಕೇಸರಹಟ್ಟಿ, ಪಾರಾಯಣ ಶಿಬಿರದ ತಾಯಂದಿರುವ ಹಾಗೂ ಮತ್ತಿತರರು ಭಾಗವಹಿಸಿದ್ದರು.